Asianet Suvarna News Asianet Suvarna News

Breaking: ಲೋಕಸಭೆ ಚುನಾವಣೆ ದಿನಾಂಕ ಮಾ.16ಕ್ಕೆ ಘೋಷಣೆ


ಕೇಂದ್ರ ಚುನಾವಣಾ ಆಯೋಗ 2024ರ ಲೋಕಸಭೆ ಚುನಾವಣೆ ದಿನಾಂಕವನ್ನು ಶನಿವಾರ ಪ್ರಕಟ ಮಾಡಲಿದೆ. ಈ ಕುರಿತಾಗಿ  ಪತ್ರಿಕಾ ಪ್ರಕಟಣೆ ಹೊರಡಿಸಿದೆ.

Election Commission Of India Will announce lok sabha election schedule on  March 16 san
Author
First Published Mar 15, 2024, 12:33 PM IST

ನವದೆಹಲಿ (ಮಾ.15): ಕೇಂದ್ರ ಚುನಾವಣಾ ಆಯೋಗವು ಮುಂಬರುವ ಲೋಕಸಭೆ ಚುನಾವಣೆಯ ದಿನಾಂಕವನ್ನು ಶನಿವಾರ ಘೋಷಣೆ ಮಾಡಲಿದೆ. ಈ ಬಗ್ಗೆ ಶನಿವಾರ ಮಧ್ಯಾಹ್ನ ಸುದ್ದಿಗೋಷ್ಠಿ ಕರೆದಿದೆ. 2024ರ ಲೋಕಸಭೆ ಚುನಾವಣೆ ಹಾಗೂ ವಿವಧ ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕಗಳನ್ನು ಘೋಷಣೆ ಮಾಡುವ ನಿಟ್ಟಿನಲ್ಲಿ ಮಾರ್ಚ್‌ 16 ರಂದು ಸುದ್ದಿಗೋಷ್ಠಿ ಕರೆಯಲಾಗಿದೆ. ವಿಜ್ಞಾನ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.ಲೋಕಸಭೆ ಚುನಾವಣೆಯೊಂದಿಗೆ ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಆಂಧ್ರಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನೂ ಘೋಷಣೆ ಮಾಡಲಿದೆ. ಮೂಲಗಳ ಪ್ರಕಾರ ಲೋಕಸಭೆ ಚುನಾವಣೆಯು 7 ರಿಂದ 8 ಹಂತಗಳಲ್ಲಿ ನಡೆಯುವ ಸಾಧ್ಯತೆ ಇದೆ.

ಇದು ಚುನಾವಣಾ ಆಯೋಗದ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇದು ನೇರ ಪ್ರಸಾರವಾಗಲಿದೆ.  ನೂತನವಾಗಿ ನೇಮಕಗೊಂಡ ಆಯುಕ್ತರ ಔಪಚಾರಿಕ ಸ್ವಾಗತದ ನಂತರ ಪೂರ್ಣ ಆಯೋಗದ ಸಭೆ ಆರಂಭವಾಯಿತು. ಈ ಸಭೆ ಸುಮಾರು 45 ನಿಮಿಷಗಳ ಕಾಲ ನಡೆದಿದೆ.

2019ರಲ್ಲಿ ಲೋಕಸಭೆ ಚುನಾವಣೆ ಮಾರ್ಚ್‌ 10 ರಂದು ಘೋ‍‍ಷಣೆಯಾಗಿತ್ತು. ಅಂದು 7 ಹಂತದಲ್ಲಿ ಮತದಾನ ನಡೆದಿತ್ತು. ಮೇ 23ಕ್ಕೆ ಫಲಿತಾಂಶ ಪ್ರಕಟವಾಗಿತ್ತು. ಈ ಭಾರಿ ಮಾರ್ಚ್‌ 16ರ ಶನಿವಾರ ಚುನಾವಣಾ ದಿನಾಂಕವನ್ನು ಇಸಿಐ ಘೋಷಣೆ ಮಾಡಲಿದೆ.2019ರಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 11 ರಂದು ಮತ್ತು ಕೊನೆಯ ಹಂತದ ಮತದಾನವು ಮೇ 19 ರಂದು ನಡೆದಿತ್ತು. ಆ ಚುನಾವಣೆಯ ವೇಳೆಗೆ ದೇಶದಲ್ಲಿ 91 ಕೋಟಿಗೂ ಹೆಚ್ಚು ಮತದಾರರಿದ್ದು, ಈ ಪೈಕಿ ಶೇ.67ರಷ್ಟು ಮಂದಿ ಮತದಾನ ಮಾಡಿದ್ದರು.

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2014 ಕ್ಕಿಂತ ದೊಡ್ಡ ಗೆಲುವನ್ನು ಸಾಧಿಸಿತ್ತು. 2014 ರಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದಿದ್ದರೆ, 2019 ರಲ್ಲಿ 303 ಸ್ಥಾನಗಳನ್ನು ಗೆದ್ದಿತ್ತು. ಎನ್‌ಡಿಎ 353 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 37.7% ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರೆ, NDA 45% ಮತಗಳನ್ನು ಪಡೆದಿದೆ. ಕಾಂಗ್ರೆಸ್ 52 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು.

Lok Sabha Election 2024: ಮತ್ತೊಂದು ಚುನಾವಣಾ ಸಮೀಕ್ಷೆ, ಎನ್‌ಡಿಎಗೆ 411, ಇಂಡಿಯಾಗೆ 105, ಕರ್ನಾಟಕದಲ್ಲಿ ಎಷ್ಟು?

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2014 ಕ್ಕಿಂತ ದೊಡ್ಡ ಗೆಲುವನ್ನು ಸಾಧಿಸಿತ್ತು. 2014 ರಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದಿದ್ದರೆ, 2019 ರಲ್ಲಿ 303 ಸ್ಥಾನಗಳನ್ನು ಗೆದ್ದಿತ್ತು. ಆದರೆ ಎನ್‌ಡಿಎ 353 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 37.7% ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರೆ, NDA 45% ಮತಗಳನ್ನು ಪಡೆದಿದೆ. ಕಾಂಗ್ರೆಸ್ 52 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು.

Lok Sabha Election 2024: ಕರ್ನಾಟಕದಲ್ಲಿ ಎನ್‌ಡಿಎಗೆ 25, ಕಾಂಗ್ರೆಸ್‌ಗೆ 3 ಸ್ಥಾನ

2019 ರಲ್ಲಿ ಕರ್ನಾಟಕ ದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಏಪ್ರಿಲ್ 18 ಮತ್ತು ಏಪ್ರಿಲ್ 23 ರಂದು ಚುನಾವಣೆ ನಡೆದಿತ್ತು. ಮಂಡ್ಯದಲ್ಲಿ ಗರಿಷ್ಠ ಶೇ 80.24 ಮತದಾನ ಆಗಿತ್ತು. ಬೆಂಗಳೂರು ದಕ್ಷಿಣದಲ್ಲಿ ಕನಿಷ್ಠ ಶೇ53.48 ರಷ್ಟು ಮತದಾನ ಆಗಿತ್ತು. ಕಳೆದ ಬಾರಿ ಬಿಜೆಪಿ 25, ಜೆಡಿಎಸ್- 1, ಕಾಂಗ್ರೆಸ್ - 1 ಹಾಗೂ ಮಂಡ್ಯದಲ್ಲಿ ಪಕ್ಷೇತರರ ಅಭ್ಯರ್ಥಿ ಜಯಗಳಿಸಿದ್ದರು
 


 

 

Follow Us:
Download App:
  • android
  • ios