Asianet Suvarna News Asianet Suvarna News

Lok Sabha Election 2024: ಕರ್ನಾಟಕದಲ್ಲಿ ಎನ್‌ಡಿಎಗೆ 25, ಕಾಂಗ್ರೆಸ್‌ಗೆ 3 ಸ್ಥಾನ

ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳ ಪೈಕಿ ಶೇ. 43ರಷ್ಟು ಮಂದಿ ಉದ್ಯೋಗಾವಕಾಶಗಳ ಕೊರತೆಯೇ ದೊಡ್ಡ ಸಮಸ್ಯೆ ಎಂದ ಹೇಳಿದ್ದಾರೆ. ಅದರೊಂದಿಗೆ ಕಾನೂನು ಸುವ್ಯವಸ್ಥೆ (ಶೇ. 41), ಹಣದುಬ್ಬರ (ಶೇ. 37) ಹಾಗೂ ಮೂಲಸೌಕರ್ಯ ಮತ್ತು ಅಭಿವೃದ್ಧಿ (ಶೇ.32) ನಂತರದ ಸ್ಥಾನದಲ್ಲಿವೆ.

Lok Sabha Election 2024 News18 opinion poll  NDA to win 25 in Karnataka Congress just 3 san
Author
First Published Mar 14, 2024, 7:32 PM IST

ಬೆಂಗಳೂರು (ಮಾ.14): ಮುಂದಿನ ಲೋಕಸಭೆ ಚುನಾವಣೆಯ ಕುರಿತಾಗಿ ನ್ಯೂಸ್ 18 ಸಮೀಕ್ಷೆ ಹೊರಬಿದ್ದಿದೆ.  518 ಕ್ಷೇತ್ರಗಳಲ್ಲಿ ಮತ್ತು 1.2 ಲಕ್ಷಕ್ಕೂ ಹೆಚ್ಚು ಮಂದಿಗೆ ಸಮೀಕ್ಷೆಯ ಪ್ರಶ್ನೆಗಳನ್ನು ಕೇಳಲಾಗಿದೆ. ನ್ಯೂಸ್ 18 ಸಮೀಕ್ಷೆಯ ಪ್ರಕಾರ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಕರ್ನಾಟಕದಲ್ಲಿ 25 ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದ್ದರೆ,  ಕಾಂಗ್ರೆಸ್ ಉಳಿದ ಮೂರು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ಎನ್‌ಡಿಎ ಶೇ. 58ರಷ್ಟು ವೋಟ್‌ ಶೇರ್‌ ಪಡೆಯಲ್ಲಿದ್ದರೆ, ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ಶೇ. 35ರಷ್ಟು ಮತಗಳನ್ನು ಪಡೆಯಲಿದೆ. ಸಮೀಕ್ಷೆಯ ಪ್ರಕಾರ, ಶೇ. 18ರಷ್ಟು ಮಂದಿ ಹಾಲಿ ಸಂಸದರ ನಿವರ್ಹಣೆಯ ಬಗ್ಗೆ ತೃಪ್ತಿ ಹೊಂದಿಲ್ಲ. ಇನ್ನು ಶೇ. 77ರಷ್ಟು ಮಂದಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇ. 80ರಷ್ಟು ಮಂದಿ ಮುಂದಿನ ಚುನಾವಣೆಯಲ್ಲಿ ಮೋದಿ ಇದ್ದಾರೆ ಎನ್ನುವ ಏಕೈಕ ಕಾರಣಕ್ಕಾಗಿ ಬಿಜೆಪಿಗೆ ಮತ ಹಾಕಲಿದ್ದೇವೆ ಎಂದಿದ್ದಾರೆ.

ಇನ್ನು ಶೇ. 43ರಷ್ಟು ವ್ಯಕ್ತಿಗಳು ದೇಶದಲ್ಲಿ ನಿರುದ್ಯೋಗವೇ ಪ್ರಮುಖ ಸಮಸ್ಯೆ ಎಂದಿದ್ದಾರೆ.  ಆ ನಂತರದ ಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ (ಶೇ.41), ಹಣದುಬ್ಬರ (ಶೇ.37) ಹಾಗೂ ಮೂಲಸೌಕರ್ಯ ಮತ್ತು ಅಭಿವೃದ್ಧಿ (ಶೇ. 32) ವಿಚಾರಗಳಿವೆ ಎಂದು ಸಮೀಕ್ಷೆ ತಿಳಿಸಿದೆ.

ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಸ್ಥಾನಗಳಿದ್ದು, ಬಿಜೆಪಿ ಈಗಾಗಲೇ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಹಾಲಿ 9 ಶಾಸಕರಿಗೆ ಈ ಬಾರಿ ಟಿಕೆಟ್‌ ನೀಡಲಾಗಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳ ಪೈಕಿ 25ರಲ್ಲಿ ಗೆಲುವು ಸಾಧಿಸಿತ್ತು. ಅದಕ್ಕೂ ಮುನ್ನ ನಡೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28ರಲ್ಲಿ 17 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ 9 ಹಾಗೂ ಜೆಡಿಎಸ್‌ 2 ಸ್ಥಾನಗಳಲ್ಲಿ ಗೆಲುವು ಕಂಡಿತ್ತು.

Narendra Modi: ಮೋದಿ ಜನಪ್ರಿಯತೆ ಹಿಂದಿದೆಯಾ ರಾಮ ರಹಸ್ಯ..? ಉತ್ತರಪಥೇಶ್ವರನಿಗೆ ದಕ್ಷಿಣದಲ್ಲೂ ದಕ್ಕುತ್ತಾ ವಿಜಯಮಾಲೆ..?

 

ಕರ್ನಾಟಕ ಮಾತ್ರವಲ್ಲದೆ, ರಾಜಸ್ಥಾನ, ಅಸ್ಸಾಂ ಹಾಗೂ ಉತ್ತರಾಖಂಡದಲ್ಲೂ ಬಿಜೆಪಿ ಬಹುತೇಕ ಕ್ಲೀನ್‌ಸ್ವೀಪ್‌ ಮಾಡಲಿದೆ ಎಂದು ಸಮೀಕ್ಷೆ ತಿಳಿಸಿದೆ. ಉತ್ತರಾಖಂಡದ ಎಲ್ಲಾ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನೂ ರಾಜಸ್ಥಾನದಲ್ಲೂ ಸತತ ಮೂರನೇ ಬಾರಿಗೆ ಎಲ್ಲಾ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ. ರಾಜಸ್ಥಾನದಲ್ಲಿ ಬಿಜೆಪಿಯ ವೋಟ್‌ ಶೇ. 61 ಆಗಿರಲಿದ್ದರೆ, ಕಾಂಗ್ರೆಸ್‌ ಶೇ.33 ರಷ್ಟು ಮತ ಪಡೆಯಲಿದೆ. ಆದರೆ, ಸ್ಥಾನ ಗೆಲ್ಲಲು ಕಾಂಗ್ರೆಸ್‌ ವಿಫಲವಾಗಲಿದೆ ಎನ್ನುವ ಸೂಚನೆ ಸಿಕ್ಕಿದೆ. ಇನ್ನು ಅಸ್ಸಾಂನಲ್ಲಿರುವ 14 ಲೋಕಸಭಾ ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಗೆಲುವು ಸಾಧಿಸಬಹುದು ಎಂದು ನ್ಯೂಸ್‌18 ಸಮೀಕ್ಷೆ ತಿಳಿಸಿದೆ.

ಲೋಕಸಭಾ ಚುನಾವಣೆ ಸಮೀಕ್ಷೆ ಪ್ರಕಟ, ಬಿಜೆಪಿ ನೇತತ್ವದ NDAಗೆ 378 ಸ್ಥಾನ!

Follow Us:
Download App:
  • android
  • ios