ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಸಿದ್ಧತೆ ಆರಂಭಿಸಿದ ಚುನಾವಣಾ ಆಯೋಗ!
ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಅಂತಿಮ ಸಿದ್ಧತೆಯನ್ನು ಪರಿಶೀಲನೆ ಮಾಡಲು ವಿವಿಧರ ರಾಜ್ಯಗಳುಗೆ ಭೇಟಿ ನೀಡುತ್ತಿದೆ. 2024ರ ಚುನಾವಣೆ, 2019ರ ಚುನಾವಣೆಯ ರೀತಿಯ ವೇಳಾಪಟ್ಟಿಯನ್ನು ಹೊಂದಿರುವ ಸಾಧ್ಯತೆ ಇದೆ.
ನವದೆಹಲಿ (ಫೆ.21): ಕೇಂದ್ರ ಚುನಾವಣಾ ಆಯೋಗ 2024ರ ಲೋಕಸಭೆ ಚುನಾವಣೆಯ ದಿನಾಂಕವನ್ನು ಮಾರ್ಚ್ 9ರ ಬಳಿಕ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.ಚುನಾವಣಾ ಆಯೋಗವು ಅಂತಿಮ ಪರಿಶೀಲನೆಗಾಗಿ ವಿವಿಧ ರಾಜ್ಯಗಳಿಗೆ ತೆರಳುತ್ತಿದೆ ಮತ್ತು 2024 ರ ಚುನಾವಣಾ ಕ್ಯಾಲೆಂಡರ್ 2019 ರಂತೆಯೇ ಇರಬಹುದು ಎನ್ನಲಾಗಿದೆ. 2019ರ ಲೋಕಸಭೆ ಚುನಾವಣೆಯ ದಿನಾಂಕವನ್ನು 2019ರ ಮಾರ್ಚ್ 10 ರಂದು ಘೋಷಣೆ ಮಾಡಲಾಗಿತ್ತು. ಏಪ್ರಿಲ್ 11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಚುನಾವಣೆಯನ್ನು ನಡೆಸಲಾಗಿತ್ತು. ದೇಶವು ಲೋಕಸಭೆ ಚುನಾವಣೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವಾಗ, ಕೇಂದ್ರ ಚುನಾವಣಾ ಅಧಿಕಾರಿಗಳ ತಂಡರಾಜ್ಯಗಳಿಗೆ ಸತತ ಭೇಟಿಗಳನ್ನು ನೀಡುತ್ತಿದೆ. ಜಮ್ಮು ಮತ್ತು ಕಾಶ್ಮೀರ ಭದ್ರತಾ ಪರಿಸ್ಥಿತಿ ಮತ್ತು ಪಡೆಗಳ ಲಭ್ಯತೆಯ ಬಗ್ಗೆ ಪರಿಶೀಲಿಸಲು ಪ್ರತಿನಿಧಿಗಳು ಮಾರ್ಚ್ 8-9 ರಂದು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಮಾರ್ಚ್ 12-13 ರಂದು ಚುನಾವಣಾಧಿಕಾರಿಗಳ ತಂಡ ಮತ್ತೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಲೋಕಸಭೆ ಚುನಾವಣೆಯೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯನ್ನು ನಡೆಸಬಹುದೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಫೆಬ್ರವರಿ 20 ರಂದು, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುವ ಮೊದಲು ಉತ್ತರ ಪ್ರದೇಶದ ಬಿಜೆಪಿಯ ಚುನಾವಣಾ ಯೋಜನೆಯನ್ನು ನಿರ್ಧಾರ ಮಾಡಲಾಗಿದೆ. ಫೆಬ್ರವರಿ 20ರ ಮಧ್ಯಾಹ್ನ 3:30 ಕ್ಕೆ ದೊಡ್ಡ ಸಭೆ ನಡೆದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಯೋಗಿ, ಬೈಜಯಂತ್ ಪಾಂಡಾ, ಭೂಪೇಂದ್ರ ಚೌಧರಿ, ಧರಂಪಾಲ್ ಸಿಂಗ್, ಎರಡೂ ಉಪ ಮುಖ್ಯಮಂತ್ರಿಗಳು, ಎಲ್ಲಾ ಮೋರ್ಚಾಗಳ ಅಧ್ಯಕ್ಷರು, ಪ್ರಾದೇಶಿಕ ಅಧ್ಯಕ್ಷರು ಮತ್ತು ರಾಜ್ಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
Raj Thackeray: NDA ಜೊತೆ ಮೈತ್ರಿ ಮಾಡಿಕೊಳ್ತಾರಾ ರಾಜ್ ಠಾಕ್ರೆ..? ಮಹಾರಾಷ್ಟ್ರದಲ್ಲಿ MNS ಜೊತೆ ಬಿಜೆಪಿ ಹೊಂದಾಣಿಕೆ..?
"ಲೋಕಸಭಾ ಚುನಾವಣೆಯ ಸಮಾವೇಶಗಳ ಬಗ್ಗೆ ಕಾರ್ಯತಂತ್ರವನ್ನು ನಿರ್ಧರಿಸಲಾಗುತ್ತದೆ. ಪಿಎಂ ಮೋದಿ, ಸಿಎಂ ಯೋಗಿ, ಅಮಿತ್ ಶಾ ಮತ್ತು ಜೆಪಿ ನಡ್ಡಾರಿಂದ ಯುಪಿಯ ಪ್ರತಿ ಲೋಕಸಭೆಯನ್ನು ಕವರ್ ಮಾಡಲು ಸಮಾವೇಶವನ್ನು ಯೋಜನೆಯನ್ನು ಮಾಡಲಾಗುವುದು" ಎಂದು ಮೂಲಗಳು ವರದಿಯಲ್ಲಿ ಉಲ್ಲೇಖಿಸಿವೆ.
Mandya: ಮೋದಿ, ಶಾ, ನಡ್ಡಾ ಮೂವರಿಂದಲೂ ಒಂದೇ ನಿರ್ಧಾರ: ಜೆಡಿಎಸ್ ಮನವೊಲಿಸಲು ಬಿಜೆಪಿ ಹೈಕಮಾಂಡ್ ಚಿಂತನೆ !