Asianet Suvarna News Asianet Suvarna News

ಎಸ್‌ಬಿಐ ಚುನಾವಣಾ ಬಾಂಡ್ ವಿವರ ಸಾರ್ವಜನಿಕಗೊಳಿಸಿದ ಚುನಾವಣಾ ಆಯೋಗ!

ಸುಪ್ರೀಂ ಕೋರ್ಟ್ ಖಡಕ್ ವಾರ್ನಿಂಗ್ ಬಳಿಕ ಎಸ್‌ಬಿಐ ಸಲ್ಲಿಸಿದ್ದ ಚುನಾವಣಾ ಬಾಂಡ್ ಮಾಹಿತಿಯನ್ನು ಇದೀಗ ಚುನಾವಣಾ ಆಯೋಗ ಬಹಿರಂಗಪಡಿಸಿದೆ. ಕೆಲ ಮಹತ್ವದ ಹೆಸರುಗಳು ಈ ಪಟ್ಟಿಯಲ್ಲಿದೆ.
 

Election commission of india disclose sbi electoral bonds details to Website ckm
Author
First Published Mar 14, 2024, 8:24 PM IST

ನವದೆಹಲಿ(ಮಾ.14) ಚುನಾವಣಾ ಬಾಂಡ್ ನಿಷೇಧಿಸಿದ ಸುಪ್ರೀಂ ಕೋರ್ಟ್ ಸಂಪೂರ್ಣ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡುವಂತೆ ಎಸ್‌ಬಿಐ ವಾರ್ನಿಂಗ್ ನೀಡಿತ್ತು. ಅವಧಿ ವಿಸ್ತರಣೆಗೆ ಸರ್ಕಸ್ ಮಾಡಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದ ಎಸ್‌ಬಿಐ ಕೊನೆಗೂ ಚುನಾವಣಾ ಬಾಂಡ್ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಕೆ ಮಾಡಿತ್ತು. ಇದೀಗ ಚುನಾವಣಾ ಆಯೋಗ ಈ ಮಾಹಿತಿಯನ್ನು ಬಹಿರಂಗಮಾಡಿದೆ. ಭಾರತೀಯ ಜನತಾ ಪಾರ್ಟಿ ಒಟ್ಟು 8500ಕ್ಕೂ ಅಧಿಕ ಬಾಂಡ್‌ ಪರ್ಚೇಸ್‌ ಮಾಡಿದೆ. ಇನ್ನು ಬಾಂಡ್ ವಿರೋಧಿಸಿ ಬಿಜೆಪಿ ವಿರುದ್ದ ಕಿಡಿ ಕಾರಿದ್ದ ಕಾಂಗ್ರೆಸ್ 3146 ಬಾಂಡ್‌ ಖರೀದಿ ಮಾಡಿದೆ. 

ಮಾರ್ಚ್ 11ರಂದು  ಸುಪ್ರೀಂ ಕೋರ್ಟ್ ಆದೇಶ(WPC NO.880, 2017)ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೇಟಾ ಒದಗಿಸಿದೆ. ಎಸ್‌ಬಿಐ ನೀಡಿದ ಡೇಟಾವನ್ನು ಚುನಾವಣಾ ಆಯೋಗ ಇಂದು ತನ್ನ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಿದೆ. ಎಸ್‌ಬಿಐ ನೀಡಿದ ವಿವರಗಳನ್ನು ಯತವತ್ತಾಗಿ ಬಹಿರಂಗ ಮಾಡಲಾಗಿದೆ. ಈ ಮೂಲಕ ಚುನಾವಣಾ ಆಯೋಗ ಈ ಮೊದಲೇ ಹೇಳಿದಂತೆ ಪಾರದರ್ಶಕವಾಗಿ ಮಾಹಿತಿ ಬಹಿರಂಗಪಡಿಸುವಿಕೆಯನ್ನು ಮಾಡಿದೆ ಎಂದು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.  

ಚುನಾವಣಾ ಬಾಂಡ್‌: ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್

2019ರ ಏ.1ರಿಂದ 2024ರ ಫೆ.15ರವರೆಗೆ ರಾಜಕೀಯ ಪಕ್ಷಗಳು ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಅವುಗಳ ಪೈಕಿ 22,030 ಬಾಂಡ್‌ಗಳನ್ನು ನಗದೀಕರಿಸಲಾಗಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತ್ತು. ಇದೀಗ ಈ ಬಾಂಡ್ ಕುರಿತು ಎಸ್‌ಬಿಐ ನೀಡಿದ ಡೇಟಾವನ್ನು ಚುನಾವಣಾ ಆಯೋಗ ವೆಬ್‌ಸೆಟ್‌ಗೆ ಅಪ್ಲೋಡ್ ಮಾಡಿದೆ. ಮಾರ್ಚ್ 15ರೊಳಗೆ ಬಾಂಡ್ ವಿವರ ಬಹಿರಂಗಪಡಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಹೇಳಿತ್ತು. 

ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಕುರಿತು ಸುದೀರ್ಘ ವಿಚಾರಣೆ ನಡೆಸಿ ಮಹತ್ವದ ನಿರ್ಧಾರ ಘೋಷಿಸಿತ್ತು. ಚುನಾವಣಾ ಬಾಂಡ್ ರದ್ದುಪಡಿಸಿ ತೀರ್ಪು ನೀಡಿದ ಕೋರ್ಟ್, ಯಾವ ಪಕ್ಷಗಳು ಎಷ್ಟು ಚುನಾವಣಾ ಬಾಂಡ್ ಖರೀದಿಸಿದೆ. ಈ ಕುರಿತು ಸಂಪೂರ್ಣ ವಿವರ ನೀಡುವಂತೆ ಎಸ್‌ಬಿಐ ಖಡಕ್ ವಾರ್ನಿಂಗ್ ನೀಡಿತ್ತು. ಆದರೆ ವಿವರ ಸಲ್ಲಿಸಲು ಹಿಂದೇಟು ಹಾಕಿದ ಎಸ್‌ಬಿಐ ಕಾಲಾವಕಾಶ ವಿಸ್ತರಣೆಗೆ ಮನವಿ ಮಾಡಿತ್ತು. ಆದರೆ ಎಸ್‌ಬಿಐ ಮನವಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್, ಮಾರ್ಟ್ 12ರೊಳಗೆ ಚುನಾವಣಾ ಆಯೋಗಕ್ಕೆ ಎಲ್ಲಾ ವಿವರ ನೀಡುವಂತೆ ಖಡಕ್ ವಾರ್ನಿಂಗ್ ಮಾಡಿತ್ತು. ಮಾರ್ಚ್ 13ರಂದು ಸಲ್ಲಿಕೆ ಕುರಿತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಎಸ್‌ಬಿಐ ಸಲ್ಲಿಸಿದ ಮಾಹಿತಿಗಳನ್ನು ಇದೀಗ ಚುನಾವಣಾ ಆಯೋಗ ಬಹಿರಂಗಪಡಿಸಿದೆ.  

ಚುನಾವಣಾ ಬಾಂಡ್‌ಗಳಿಂದ 16518 ಕೋಟಿ ಸಂಗ್ರಹ: ಯಾವ ಪಕ್ಷಕ್ಕೆ ಎಷ್ಟು ಇಲ್ಲಿದೆ ಡಿಟೇಲ್ಸ್
 

Follow Us:
Download App:
  • android
  • ios