ಚುನಾವಣಾ ಬಾಂಡ್: ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್
ಮಾ.6ರೊಳಗೆ ಚುನಾವಣಾ ಬಾಂಡ್ ಮೂಲಕ ನಡೆದ ವಹಿವಾಟುಗಳನ್ನು ಬಹಿರಂಗ ಮಾಡಬೇಕು ಎಂಬ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಭಾರತೀಯ ಸ್ಟೇಟ್ ಬ್ಯಾಂಕ್ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಪ್ರಜಾಸತ್ತಾತ್ಮಕ ಸುಧಾರಣೆಗಳ ಒಕ್ಕೂಟ (ಎಡಿಆರ್) ಎನ್‌ಜಿಒ, ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದೆ.
ನವದೆಹಲಿ: ಮಾ.6ರೊಳಗೆ ಚುನಾವಣಾ ಬಾಂಡ್ ಮೂಲಕ ನಡೆದ ವಹಿವಾಟುಗಳನ್ನು ಬಹಿರಂಗ ಮಾಡಬೇಕು ಎಂಬ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಭಾರತೀಯ ಸ್ಟೇಟ್ ಬ್ಯಾಂಕ್ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಪ್ರಜಾಸತ್ತಾತ್ಮಕ ಸುಧಾರಣೆಗಳ ಒಕ್ಕೂಟ (ಎಡಿಆರ್) ಎನ್‌ಜಿಒ, ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಭೂಷಣ್, ಎಸ್‌ಬಿಐನವರು ಚುನಾವಣಾ ಬಾಂಡ್ ಕುರಿತ ಮಾಹಿತಿ ಬಹಿರಂಗಗೊಳಿಸಲು ಜೂ.30ರವರೆಗೆ ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಮಾ.11ರಂದು ನಡೆಯಲಿದ್ದು, ಅದರೊಂದಿಗೆ ಈ ಅರ್ಜಿ ವಿಚಾರಣೆಯೂ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.
ಇತ್ತೀಚೆಗೆ ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್ ನಿರ್ಬಂಧಿಸಿ, ಈ ಬಾಂಡ್ ಖರೀದಿಸಿದವರ ಹೆಸರನ್ನು ಮಾ.6ರೊಳಗೆ ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಎಸ್‌ಬಿಐಗೆ ಆದೇಶಿಸಿತ್ತು. ಆದರೆ ಇದು ಕಷ್ಟದ ಕೆಲಸ ಎಂದಿದ್ದ ಎಸ್‌ಬಿಐ ಜೂ.30ರ ಗಡುವು ಕೇಳಿತ್ತು.
ಯುಕೋ ಬ್ಯಾಂಕ್ ಹಗರಣ: 67 ಕಡೆ ಸಿಬಿಐನಿಂದ ದಾಳಿ
ಪಿಟಿಐ ನವದೆಹಲಿ: ಸರ್ಕಾರಿ ಸ್ವಾಮ್ಯದ ಯುಕೋ ಬ್ಯಾಂಕ್‌ನ ಖಾತೆಗಳಿಗೆ ಐಎಂಪಿಎಸ್ ವಿಧಾನದಡಿ 820 ಕೋಟಿ ರು. ಜಮೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ರಾಜಸ್ಥಾನ ಹಾಗೂ ಮಹಾರಾಷ್ಟ್ರದ 67 ಕಡೆ ದಾಳಿ ನಡೆಸಿದೆ. ಇದು ಈ ಹಗರಣಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ 2ನೇ ಸುತ್ತಿನ ದಾಳಿಯಾಗಿದೆ. ಮೊದಲ ಸುತ್ತಿನಲ್ಲಿ ಕರ್ನಾಟಕದ ಮಂಗಳೂರಿನಲ್ಲೂ ಪರಿಶೀಲನೆ ನಡೆಸಲಾಗಿತ್ತು ಎಂಬುದು ಗಮನಾರ್ಹ.
ಚುನಾವಣಾ ಬಾಂಡ್ ಮಾಹಿತಿ ಬಹಿರಂಗ: ಜೂ.30ರವರೆಗೆ ಸಮಯ ಕೇಳಿದ ಎಸ್‌ಬಿಐ
2023ರ ನ.10, 13ರಂದು ಯುಕೋ ಬ್ಯಾಂಕ್‌ನ 41 ಸಾವಿರ ಖಾತೆಗಳಿಗೆ 7 ಖಾಸಗಿ ಬ್ಯಾಂಕುಗಳ 14600 ಖಾತೆಗಳಿಂದ 820 ಕೋಟಿ ರು. ಹಣ ಐಎಂಪಿಎಸ್ ಮೂಲಕ ವರ್ಗವಾಗಿತ್ತು. ಆದರೆ ಆ ಖಾಸಗಿ ಬ್ಯಾಂಕ್‌ಗಳ ಖಾತೆಗಳಿಂದ ಹಣ ಕಡಿತವಾಗಿರಲಿಲ್ಲ. ಈ ರೀತಿ ಪುಗಸಟ್ಟೆಯಾಗಿ ಬಂದ ಹಣವನ್ನು ಬ್ಯಾಂಕಿಗೆ ಮರಳಿಸದೆ ಖಾತೆಯಿಂದ ತೆಗೆದಿರುವ ಗ್ರಾಹಕರನ್ನೇ ಗುರಿಯಾಗಿಸಿ 2ನೇ ಸುತ್ತಿನಲ್ಲಿ ಸಿಬಿಐ ದಾಳಿ ನಡೆಸಿದೆ ಎಂದು ವಕ್ತಾರರು ತಿಳಿಸಿದ್ದಾರೆ. 2023ರ ಡಿಸೆಂಬರ್‌ನಲ್ಲಿ ನಡೆದ ಮೊದಲ ಸುತ್ತಿನ ದಾಳಿಯಲ್ಲಿ ಕೋಲ್ಕತಾ, ಮಂಗಳೂರಿನ 13 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.
ಮಾ.16ಕ್ಕೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಕೋರ್ಟ್ ಸಮನ್ಸ್
ನವದೆಹಲಿ: ದಿಲ್ಲಿ ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮಾ. 16ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸ್ಥಳೀಯ ಕೋರ್ಟ್ ಸೂಚಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಪದೇ ಪದೇ ತನ್ನ ಸಮನ್ಸ್ ಉಲ್ಲಂಘಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ ಹೊಸ ದೂರು ನೀಡಿತ್ತು. ಇದನ್ನು ಆಧರಿಸಿ ಕೋರ್ಟು ಕೇಜ್ರಿವಾಲ್‌ಗೆ ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ಕೇಜ್ರಿವಾಲ್ ಹಲವು ಸಮನ್ಸ್‌ಗೆ ಗೈರಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಬುಧವಾರ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು.
ಚುನಾವಣಾ ಬಾಂಡ್‌ಗಳಿಂದ 16518 ಕೋಟಿ ಸಂಗ್ರಹ: ಯಾವ ಪಕ್ಷಕ್ಕೆ ಎಷ್ಟು ಇಲ್ಲಿದೆ ಡಿಟೇಲ್ಸ್