Asianet Suvarna News Asianet Suvarna News

cVIGIL App ಚುನಾವಣೆ ಅಕ್ರಮ ತಡೆಯಲು ಸಿವಿಜಿಲ್ ಆ್ಯಪ್, ದೂರು ನೀಡಲು ನಾಗರೀಕರ ಕೈಗೆ ಆಸ್ತ್ರ ನೀಡಿದ ಆಯೋಗ!

  • ಚುನಾವಣೆ ಅಕ್ರಮ ಕಂಡರೆ ಕೂಡಲೇ cVIGIL ಆ್ಯಪ್ ಮೂಲಕ ದೂರು ಸಾಧ್ಯ
  • ಚುನಾವಣಾ ಆಯೋಗ 100 ನಿಮಿಷಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ
  • ಚುನಾವಣಾ ಅಕ್ರಮ ತಡೆಯಲು ತಂತ್ರಜ್ಞಾನ ಬಳಸಿದ ಆಯೋಗ
  • cVIGIL ಆ್ಯಪ್ ಮೂಲಕ ದೂರು ನೀಡುವುದು ಹೇಗೆ?
Election Commission launch cVIGIL App for People to report corruption all you need to know about app ckm
Author
Bengaluru, First Published Jan 8, 2022, 8:32 PM IST

ನವದೆಹಲಿ(ಜ.08): ಪಂಚ ರಾಜ್ಯಗಳ ಚುನಾವಣೆ(Five state Election 2022) ಘೋಷಣೆಯಾಗಿದೆ. ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗ(Election Commission), ಕೊರೋನಾ ಕಾರಣ ಕಟ್ಟು ನಿಟ್ಟಾಗಿ ಚುನಾವಣೆ ನಡೆಸಲು ಎಲ್ಲಾ ಕ್ರಮಕೈಗೊಂಡಿದೆ. ಇದರ ನಡುವೆ ಚುನಾವಣೆ ಅಕ್ರಮ ತಡೆಯಲು  ಆಯೋಗ cVIGIL ಆ್ಯಪ್ ಪರಿಣಾಮಕಾರಿಯಾಗಿ ಬಳಕೆ ಮಾಡುವುದಾಗಿ ಘೋಷಿಸಿದೆ. ಈ ಮೂಲಕ ಚುನಾವಣೆ ಅಕ್ರಮ(ತಡೆಯಲು ಆಯೋಗ, ಅಧಿಕಾರಿಗಳು, ಪೊಲೀಸರು ಮಾತ್ರವಲ್ಲ, ನಾಗರೀಕರಿಗೂ ಅಸ್ತ್ರ ನೀಡಲಾಗಿದೆ.

ಇಂದಿನ ಕಾಲದಲ್ಲಿ ಪಂಚಾಯಿತಿ ಚುನಾವಣೆಗಳಲ್ಲೂ ಅಕ್ರಮಗಳು(Election corruption) ನಡೆದ ಉದಾಹರಣಗಳಿವೆ. ಹೀಗಿರುವಾಗ ಪಂಚ ರಾಜ್ಯ ಚುನಾವಣೆಗಳಲ್ಲಿ ಆಯೋಗ ಅದೆಷ್ಟೇ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದರೂ ಕೆಲ ಅಕ್ರಮಗಳು, ಭ್ರಷ್ಟಾಚಾರಗಳು ಎಗ್ಗಿಲ್ಲದೆ ನಡೆಯುತ್ತದೆ. ಇದೀಗ ಇಂತಹ ಅಕ್ರಮಗಳು ನಾಗರೀಕರಿಗೆ(People) ಕಂಡರೆ cVIGIL ಆ್ಯಪ್ ಮೂಲಕ ದೂರು ನೀಡಲು ಸಾಧ್ಯವಿದೆ. ಇದರಲ್ಲಿ ಮತ್ತೊಂದು ವಿಶೇಷ ಅಂದರೆ ನಾಗರೀಕರು cVIGIL ಆ್ಯಪ್ ಮೂಲಕ ಸಲ್ಲಿಸಿದ ದೂರನ್ನು 100 ನಿಮಿಷಗಳಲ್ಲಿ ಪರಿಶೀಲಿಸಿ, ಪ್ರಾಥಮಿಕ ತನಿಖೆ ನಡೆಸಲು ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿಕೊಡಲಿದೆ.

Assembly Election ಪಂಜಾಬ್‌ನಲ್ಲಿ ಫೆ.14ಕ್ಕೆ ಚುನಾವಣೆ, ಮಾ.10ಕ್ಕೆ ಫಲಿತಾಂಶ, ಕಾಂಗ್ರೆಸ್ ಕೈತಪ್ಪುತ್ತಾ ಅಧಿಕಾರ?

ಆ್ಯಪ್‌ನಲ್ಲಿ ದೂರು ನೀಡುವುದು ಹೇಗೆ?
ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಸುದ್ದಿಗೋಷ್ಠಿಯಲ್ಲಿ ಚುನಾವಣೆ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ(Sushil Chandra) cVIGIL ಆ್ಯಪ್ ಬಿಡುಗಡೆ ಮಾಡಿದ್ದಾರೆ.  ನೀತಿ ಸಂಹಿತ ಉಲ್ಲಂಘನೆ, ಭ್ರಷ್ಟಾಚಾರ, ಚುನಾವಣಾ ಅಕ್ರಮಗಳನ್ನು ತಡೆಯಲು ಫೋಟೋ ಅಥವಾ ವಿಡೀಯೋ ತೆಗೆದು ಆ್ಯಪ್‌ಗೆ ಅಪ್ಲೋಡ್ ಮಾಡಿದರೆ ಕೆಲಸ ಮುಗಿದು ಹೋಯಿತು. ಇನ್ನುಳಿದ ಕಾರ್ಯವನ್ನು ಚುನಾವಣಾ ಆಯೋಗ ನೋಡಿಕೊಳ್ಳಲಿದೆ.

ಚುನಾವಣೆ ಕುರಿತ ಯಾವುದೇ ಅಕ್ರಮಗಳ ಕುರಿತು ದೂರು ನೀಡಲು ಸಾಧ್ಯ. ಹಣ ಹಂಚುವಿಕೆ, ಮತಕ್ಕಾಗಿ ಉಡುಗೊರೆ ಸೇರಿದಂತೆ ಇತರ ನೆರವು ನೀಡುವಿಕೆ, ನಿಯಮ ಉಲ್ಲಂಘಿಸಿ ಪ್ರಚಾರ, ಬೆದರಿಕೆ, ನಿಯಮ ಉಲ್ಲಂಘಿಸುವ ಭಾಷಣ ಸೇರಿದಂತೆ ಯಾವುದೇ ಚುನಾವಣಾ ಅಕ್ರಮದ ಕುರಿತು cVIGIL ಆ್ಯಪ್ ಮೂಲಕ ದೂರು ನೀಡಲು ಸಾಧ್ಯ.

Assembly Election 2022: ಫೆ. 10 ರಿಂದ ಮಾರ್ಚ್ 7ರವರೆಗೆ ಪಂಚರಾಜ್ಯ ಚುನಾವಣೆ, ರ‍್ಯಾಲಿ, ಪಾದಯಾತ್ರೆ, ರೋಡ್‌ಶೋ ಎಲ್ಲವೂ ಬಂದ್!

cVIGIL ಡೌನ್ಲೋಡ್ ಹೇಗೆ?
cVIGIL ಆ್ಯಪ್‌ನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಸುಲಭವಾಗಿ ಡೌನ್ಲೋಡ್ ಮಾಡಬಹುದು. ಬಳಿಕ ನಿಮ್ಮ ಮೊಬೈಲ್‌ನಲ್ಲಿ ಇನ್ಸ್‌ಸ್ಟಾಲ್ ಮಾಡಿಕೊಳ್ಳಬೇಕು. ಈ ವೇಳೆ ನಿಮ್ಮ ಹೆಸರು ಸೇರಿದಂತೆ ಕೆಲ ದಾಖಲೆಗಳನ್ನು ನಮೂದಿಸಬೇಕು. ಬಳಿಕ cVIGIL ಆ್ಯಪ್ ಬಳಕೆಗೆ ಸಿದ್ಧವಾಗಲಿದೆ. ಈ ಆ್ಯಪ್‌ನ ಮತ್ತೊಂದು ವಿಶೇಷ ಅಂದರೆ ನೀವು ತೆಗೆದ ಫೋಟೋ ಅಥವಾ ವಿಡಿಯೋ ಅಪ್‌ಲೋಡ್ ಮಾಡಿದ ಬೆನ್ನಲ್ಲೇ ಫೋಟೋ ಅಥವಾ ವಿಡಿಯೋ ತೆಗೆದ ಸ್ಥಳ ಆ್ಯಪ್ ಪತ್ತೆ ಹಚ್ಚಲಿದೆ. ಈ ಮೂಲಕ ದೂರಿನ ನಿಖರತೆ ಗೊತ್ತಾಗಲಿದೆ. 

ಚುನಾವಣಾ ಆಯೋಗ ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಆದರೂ ಈ ಹಿಂದಿನ ಹಲವು ಚುನಾವಣಗಳಲ್ಲಿ ಅಕ್ರಮಗಳು ನಡೆದ ಊದಾಹರಣೆಗಳಿವೆ. ಇಂತಹ ಹಲವು ಅಕ್ರಮಗಳು ಕುರಿತು ನಾಗರೀಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಉದಾಹರಣೆಗಳು ಇವೆ. ಇಷ್ಟೇ ಅಲ್ಲ ಇದೇ ವಿಡಿಯೋ ಆಧಾರದ ಮೇಲೆ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಇದೀಗ ಆ್ಯಪ್ ಮೂಲಕ ಅಕ್ರಮಗಳನ್ನು ಪತ್ತೆ ಹಚ್ಚಲು ಹಾಗೂ ನಿಯಂತ್ರಿಸಲು ಆಯೋಗ ಮುಂದಾಗಿದೆ.

Assembly Elections 2022: ಚುನಾವಣೆ ಆಯೋಗ ಪ್ರಕಟಿಸಿದೆ Campaign Curfew, ಏನಿದರ ಅರ್ಥ?

ಪಂಚ ರಾಜ್ಯಗಳ ಚುನಾವಣೆ:
ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರ ಹಾಗೂ ಉತ್ತರಖಂಡದ ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿದೆ. ಫೆಬ್ರವರಿ 10 ರಿಂದ ಮಾರ್ಚ್ 7ರ ವರೆಗೆ ಚುನಾವಣೆ ನಡೆಯಲಿದೆ. ಇದರ ಜೊತೆಗೆ ಹಲವು ಹೊಸ ನಿಯಮಗಳನ್ನು ಚುನಾವಣಾ ಆಯೋಗ ಜಾರಿ ಮಾಡಿದೆ.

Follow Us:
Download App:
  • android
  • ios