Asianet Suvarna News Asianet Suvarna News

Assembly Elections 2022: ಚುನಾವಣೆ ಆಯೋಗ ಪ್ರಕಟಿಸಿದೆ Campaign Curfew, ಏನಿದರ ಅರ್ಥ?

ಇದೇ ಮೊದಲ ಬಾರಿಗೆ ಕ್ಯಾಂಪೇನ್ ಕರ್ಫ್ಯೂ ಘೋಷಣೆ ಮಾಡಿದ ಚುನಾವಣಾ ಆಯೋಗ
ಚುನಾವಣೆ ಘೋಷಣೆ ಆಗಿರುವ ಐದೂ ರಾಜ್ಯಗಳಿಗೆ ಅನ್ವಯ
Campaign Curfew ನಿಯಮಗಳೇನು
 

first time ever the election commission of India on Saturday announced a campaign curfew in the five state Assembly Elections san
Author
Bengaluru, First Published Jan 8, 2022, 7:01 PM IST

ನವದೆಹಲಿ (ಜ. 8): ಭಾರತೀಯ ರಾಜಕೀಯದಲ್ಲಿ ಚುನಾವಣೆಗಳದ್ದು ಇತಿಹಾಸವಾದರೆ, ಪ್ರತಿ ಚುನಾವಣೆಗೂ ಕಳೆ ತರುವುದು ಪ್ರಚಾರ ರ‍್ಯಾಲಿ, ಪಾದಯಾತ್ರೆ ಹಾಗೂ ರೋಡ್ ಶೋಗಳು. ಆದರೆ, ಇದೇ ಮೊದಲ ಬಾರಿಗೆ ಭಾರತೀಯ ಚುನಾವಣಾ ಆಯೋಗವು ಚುನಾವಣಾ ಕಣದಲ್ಲಿ ಕ್ಯಾಂಪೇನ್ ಕರ್ಫ್ಯೂ ಅಥವಾ ಪ್ರಚಾರ ಕರ್ಫ್ಯೂ (Campaign Curfew) ಘೋಷಣೆ ಮಾಡಿದೆ. ಚುನಾವಣೆ ಘೋಷಣೆಯಾಗಿರುವ ಉತ್ತರ ಪ್ರದೇಶ (UttarPradesh), ಪಂಜಾಬ್ (Punjab), ಗೋವಾ (Goa), ಮಣಿಪುರ (Manipur) ಹಾಗೂ ಉತ್ತರಾಖಂಡದಲ್ಲಿ (UttaraKhand) ಕ್ಯಾಂಪೇನ್ ಕರ್ಫ್ಯೂ ಇರಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಅದರ ಅನ್ವಯ ಜನವರಿ 15ರವರೆಗೂ ಈ ರಾಜ್ಯಗಳಲ್ಲಿ ಸಮಾವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ. ಆ ಬಳಿಕ ಈ ರಾಜ್ಯಗಳ್ಲಿ ಪರಿಸ್ಥಿತಿಯನ್ನು ಅವಲೋಕನ ಮಾಡಿದ ಬಳಿಕ ಸಮಾವೇಶ, ರೋಡ್ ಶೋ ಹಾಗೂ ಪಾದಯಾತ್ರೆಗಳಿಗೆ ಅನುಮತಿ ನೀಡುವ ಬಗ್ಗೆ ಯೋಚಿಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಪಂಚರಾಜ್ಯ ಚುನಾವಣೆಗೆ ಇರುವ ಕೋವಿಡ್-19 ಮಾರ್ಗಸೂಚಿ
* ಜನವರಿ 15ರವರೆಗೂ ಈ ಐದೂ ರಾಜ್ಯಗಳಲ್ಲಿ ಯಾವುದೇ ರೀತಿಯ ರೋಡ್ ಶೋ (RoadShow), ಪಾದಯಾತ್ರೆ (PadaYatre) ಹಾಗೂ ಸಮಾವೇಶಗಳನ್ನು(Rally) ಮಾಡುವಂತಿಲ್ಲ. ಜ.15ರ ಬಳಿಕ ಸ್ವತಃ ಚುನಾವಣಾ ಆಯೋಗ ರಾಜ್ಯಗಳ ಕೋವಿಡ್ ಸ್ಥಿತಿಯನ್ನು ಪರಿಶೀಲನೆ ಮಾಡಿದ ಬಳಿಕ ಅನುಮತಿ ನೀಡುವ ಬಗ್ಗೆ ತೀರ್ಮಾನ ಮಾಡಲಿದೆ.

* ಸಾರ್ವಜನಿಕ ರಸ್ತೆಗಳಲ್ಲಿ ಯಾವುದೇ ರೀತಿಯ ನೌಖದ್ ಸಭೆಗಳನ್ನು (Nukkad Sabha) ಮಾಡುವಂತಿಲ್ಲ

* ಚುನಾವಣೆಯ ಫಲಿತಾಂಶ ಘೋಷಣೆ ಆದ ಬಳಿಕ ಯಾವುದೇ ರಾಜಕೀಯ ಪಕ್ಷಗಳು ವಿಜಯಯಾತ್ರೆಗಳು ಹಾಗೂ ವಿಜಯ ಸಮಾವೇಶಗಳನ್ನು ಮಾಡುವಂತಿಲ್ಲ.

* ಮನೆಮನೆ ಪ್ರಚಾರದ (dor-to-dor campaigning) ವೇಳೆ ಕಟ್ಟುನಿಟ್ಟಾಗಿ ಕೋವಿಡ್ ಸೂಕ್ತ ನಿಯಮಾವಳಿಗಳನ್ನು ಅನುಸರಿಸಬೇಕು. ಐದಕ್ಕಿಂತ ಹೆಚ್ಚಿನ ಜನರು ಮನೆಮನೆ ಪ್ರಚಾರಕ್ಕೆ ಹೋಗುವಂತಿಲ್ಲ.

* ಸಮಾವೇಶಗಳಿಗೆ ಅನುಮತಿ ಸಿಕ್ಕಲ್ಲಿ, ಕೋವಿಡ್ ಸೂಕ್ತ ನ ನಿಯಮಾವಳಿಗಳನ್ನು ಅನುಸರಿಸಬೇಕು. ಇದರ ಉಲ್ಲಂಘನೆ ಆದಲ್ಲಿ ಯಾವ ಮುನ್ಸೂಚನೆ ಇಲ್ಲದೆಯೇ ಚುನಾವಣಾ ಆಯೋಗ ಸಮಾವೇಶಗಳನ್ನು ರದ್ದು ಮಾಡಲಿದೆ.

* ಮತದಾನದ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ.

* ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ಎಲ್ಲಾ ರಾಜ್ಯಗಳಲ್ಲಿ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಗಿದೆ.

* ಭೌತಿಕ ಪ್ರಚಾರವನ್ನು ಕಡಿಮೆ ಮಾಡಲು ಮತ್ತು ವರ್ಚುವಲ್ ಅಥವಾ ಡಿಜಿಟಲ್  ಪ್ರಚಾರವನ್ನು ಹೆಚ್ಚಿಸಲು ಅಭ್ಯರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. 

Assembly Election 2022: ರ‍್ಯಾಲಿ, ಪಾದಯಾತ್ರೆ ರದ್ದು, ವಿರೋಧಪಕ್ಷಗಳ ಗುದ್ದು!
* ಪ್ರತಿ ರಾಜಕೀಯ ಪಕ್ಷ/ಅಭ್ಯರ್ಥಿಯು ಅರ್ಜಿ ನಮೂನೆಯಲ್ಲಿ (ಸುವಿಧಾ ಅಡಿಯಲ್ಲಿ) ಎಲ್ಲಾ ಕೋವಿಡ್-19 ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು ಎಂಬ ಭರವಸೆಯನ್ನು ಒದಗಿಸಬೇಕು.

* ರಾತ್ರಿ 8 ರಿಂದ ಬೆಳಿಗ್ಗೆ 8 ರ ನಡುವೆ ಕ್ಯಾಂಪೇನ್ ಕರ್ಫ್ಯೂ: ಈ ಸಮಯದಲ್ಲಿ ಯಾವುದೇ ದಿನ ಯಾವುದೇ ಪ್ರಚಾರ ಇರುವಂತಿಲ್ಲ.

Uttarakhand Poll ಉತ್ತರಾಖಂಡ ಚುನಾವಣೆಗೆ ಮುಹೂರ್ತ ಫಿಕ್ಸ್, ಕಮಾಲ್ ಮಾಡುತ್ತಾ AAP?
* ಬೆಂಗಾವಲು ಪಡೆಯೊಂದಿಗೆ ಪ್ರಚಾರಕ್ಕೆ ಹೊರಟಲ್ಲಿ, ಪ್ರತಿ ಐದು ವಾಹನಗಳ ನಂತರ ಅದನ್ನು ಬೇರೆ ಮಾಡಬೇಕು.

* ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳಿಗೆ ಗರಿಷ್ಠ ಸಂಖ್ಯೆಯ ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು 40 ರಿಂದ 30 ಕ್ಕೆ ಇಳಿಸಲಾಗಿದೆ. ಸಣ್ಣ ಹಾಗೂ ಅತೀ ಸಣ್ಣ ಪಕ್ಷಗಳಿಗೆ, ಸಂಖ್ಯೆಯನ್ನು 20 ರ ಸ್ಥಳದಲ್ಲಿ 15 ಕ್ಕೆ ಇಳಿಸಲಾಗಿದೆ.

Follow Us:
Download App:
  • android
  • ios