Asianet Suvarna News Asianet Suvarna News

Assembly Election ಪಂಜಾಬ್‌ನಲ್ಲಿ ಫೆ.14ಕ್ಕೆ ಚುನಾವಣೆ, ಮಾ.10ಕ್ಕೆ ಫಲಿತಾಂಶ, ಕಾಂಗ್ರೆಸ್ ಕೈತಪ್ಪುತ್ತಾ ಅಧಿಕಾರ?

  • ಪಂಚ ರಾಜ್ಯ ವಿಧಾಸಭಾ ಚುನಾವಣೆ ದಿನಾಂಕ ಪ್ರಕಟ
  • ಮೋದಿ ಭದ್ರತಾ ಲೋಪದ ನಡುವೆ ಪಂಜಾಬ್‌ನಲ್ಲಿ ಚುನಾವಣೆ ಗಾಳಿ
  • ಫೆಬ್ರವರಿ 14ಕ್ಕೆ ಮತದಾನ, ಮಾರ್ಚ್ 10ಕ್ಕೆ ಫಲಿತಾಂಶ
  • ಬಿಜೆಪಿಗೆ ವರವಾಗುತ್ತಾ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮೈತ್ರಿ?
Assembly Election Punjab vote in single phase on February 14 Counting On March 10 ckm
Author
Bengaluru, First Published Jan 8, 2022, 6:56 PM IST

ಪಂಜಾಬ್(ಜ.08): ಚುನಾವಣಾ ಆಯೋಗ(Election Commission) ಪಂಚ ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸಿದೆ. ಫೆಬ್ರವರಿ 10 ರಿಂದ ಮಾರ್ಚ್ 7ರ ವರೆಗೆ ಐದು ರಾಜ್ಯಗಳ(Five States Elections 2022) ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ ಹಾಗೂ ಮಣಿಪುರ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಕೊರೋನಾ ಕಾರಣ ಕಟ್ಟು ನಿಟ್ಟಿನ ನಿಯಮದೊಂದಿಗ ಚುನಾವಣೆ ನಡೆಯಲಿದೆ. ಇದೀಗ ಎಲ್ಲರ ಚಿತ್ತ ಪಂಜಾಬ್‌ನತ್ತ ನೆಟ್ಟಿದೆ. ಕಾರಣ ಘೋಷಣೆಯಾಗಿರುವ 5 ರಾಜ್ಯಗಳ ಪೈಕಿ ಕೇವಲ ಪಂಜಾಬ್‌ನಲ್ಲಿ(Punjab) ಮಾತ್ರ ಕಾಂಗ್ರೆಸ್ ಆಡಳಿತದಲ್ಲಿದೆ. ಇನ್ನುಳಿದ 4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇಷ್ಟೇ ಅಲ್ಲ, ಇದರೊಂದಿಗೆ ಪಂಜಾಬ್‌ನಲ್ಲಿನ ನಡೆದ ಭದ್ರತಾ ಲೋಪ, ಕಾಂಗ್ರೆಸ್ ಪಕ್ಷದೊಳಗಿನ ಕಚ್ಟಾ, ರೈತರ ಹೋರಾಟ ಸೇರಿದಂತೆ ಹಲವು ವಿಚಾರಗಳು ಈ ಬಾರಿ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಪಂಜಾಬ್ ವಿಧಾನಸಭಾ ಚುನಾವಣೆ 2022
ಪಂಜಾಬ್‌ನಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ. ಇನ್ನು ಮಾರ್ಚ್ 10 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಜನವರಿ 28ಕ್ಕೆ ನಾಮಪತ್ರ ನೀಡಲು ಕೊನೆಯ ದಿನವಾಗಿದೆ. ಇನ್ನು ನಾಪಪತ್ರ ಹಿಂಪಡೆಯಲು ಜನವರಿ 31ರ ವರೆಗೆ ಅವಕಾಶ ನೀಡಲಾಗಿದೆ. ಸದ್ಯ ಆಡಳಿತದಲ್ಲಿರುವ ಪಂಜಾಬ್ ಕಾಂಗ್ರೆಸ್ ಸರ್ಕಾರದ ಅವಧಿ ಮಾರ್ಚ್ 27, 2022ಕ್ಕೆ ಅಂತ್ಯಗೊಳ್ಳಲಿದೆ.

Assembly Election 2022: ಫೆ. 10 ರಿಂದ ಮಾರ್ಚ್ 7ರವರೆಗೆ ಪಂಚರಾಜ್ಯ ಚುನಾವಣೆ, ರ‍್ಯಾಲಿ, ಪಾದಯಾತ್ರೆ, ರೋಡ್‌ಶೋ ಎಲ್ಲವೂ ಬಂದ್!

ಪಂಜಾಬ್ ಚುನಾವಣೆಯ ಮ್ಯಾಜಿಂಕ್ ನಂಬರ್
ಪಂಜಾಬ್ ವಿಧಾನಸಬಾ ಚುನಾವಣೆ ಮ್ಯಾಜಿಕ್ ನಂಬರ್ 59. ಹೌದು, 117 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಪಂಜಾಬ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 59 ಸ್ಥಾನಗಳನ್ನು ಗೆಲ್ಲಬೇಕು. ಈ ಸ್ಥಾನಕ್ಕಾಗಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಆಪ್, ಶಿರೋಮಣಿ ಅಕಾಲಿ ಧಳ, ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಅಖಾಡಕ್ಕಿಳಿಯಲಿದೆ. ಬಿಜೆಪಿ ಈಗಾಗಲೇ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಹೊಸ ಪಕ್ಷ ಸ್ಥಾಪಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆ ಮೈತ್ರಿ ಮಾಡಿಕೊಂಡಿದೆ. ಆದರೆ ಸಮೀಕ್ಷೆಗಳ ಪ್ರಕಾರ ಆಮ್ ಆದ್ಮಿ ಪಾರ್ಟಿ ಪಂಜಾಬ್‌ನಲ್ಲಿ ಅಧಿಕಾರಕ್ಕೇರುವ ಸಾಧ್ಯತೆಗಳನ್ನು ವರದಿ ಮಾಡಿದೆ. ಹೀಗಾಗಿ ಆಡಳಿತರೂಢ ಕಾಂಗ್ರೆಸ್ ತಲೆನೋವು ಹೆಚ್ಚಾಗಿದೆ. 

Five States Election: ರ‍್ಯಾಲಿ, ಪಾದಯಾತ್ರೆ ರೋಡ್‌ ಶೋ ನಡೆಸುವಂತಿಲ್ಲ, ಏನಿದ್ರೂ ಡಿಜಿಟಲ್ ಪ್ರಚಾರ!

2017ರ ವಿಧಾನಸಭಾ ಚುನಾವಣೆ ಫಲಿತಾಂಶ:
ಈ ಹಿಂದೆ ನಡೆದ 2017ರ ವಿಧಾನಸಭಾ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಇತ್ತ ಆಮ್ ಆದ್ಮಿ ಪಾರ್ಟಿ 2ನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಪ್ 20 ಸ್ಥಾನಗಳನ್ನು ಗೆದ್ದು ಪಂಜಾಬ್‌ನಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಇತ್ತ ಶಿರೋಮಣಿ ಅಖಾಲಿದಳ ಹಾಗೂ ಬಿಜೆಪಿ ಮೈತ್ರಿ ಪಕ್ಷ 18 ಸ್ಥಾನ ಗೆದ್ದು 3ನೇ ಸ್ಥಾನಕ್ಕೆ ಕುಸಿದಿತ್ತು. 

ನವಜೋತ್ ಸಿಂಗ್ ಸಿಧು Vs ಕ್ಯಾಪ್ಟನ್ ಅಮರಿಂದ್ ಸಿಂಗ್
2017ರಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವಿಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವ ಪ್ರಮುಖ ಕಾರಣವಾಗಿತ್ತು. ಆದರೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜೊತೆಗಿನ ಮನಸ್ತಾಪ, ಹೈಕಮಾಂಡ್ ನಿರ್ಲಕ್ಷ್ಯದಿಂದ ಮುಖ್ಯಮಂತ್ರಿ ಅಮರಿಂದ್ ಸಿಂಗ್ ಸಿಎಂ ಸ್ಥಾನ ತ್ಯಜಿಸಿ ಪಕ್ಷ ತೊರೆದರು. ಬಳಿಕ ಹೊಸ ಪಕ್ಷ ಪಂಜಾಬ್ ಲೋಕಕಾಂಗ್ರೆಸ್ ಪಕ್ಷ ಸ್ಥಾಪಿಸಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಇತ್ತ ನವಜೋತ್ ಸಿಂಗ್ ಅಸಂಬದ್ದ ಹೇಳಿಕೆ, ಪಾಕಿಸ್ತಾನ ಪ್ರೇಮ, ರಾಜೀನಾಮೆ ಪ್ರಹಸನಗಳು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ ತಂದಿದೆ. 

ಭದ್ರತಾ ಲೋಪದ ಕಿಚ್ಚಿನ ನಡುವೆ ಚುನಾವಣೆ:
ಪ್ರಧಾನಿ ನರೇಂದ್ರ ಮೋದಿ ಹಲವು ಅಭಿವೃದ್ಧಿಯೋಜನೆಗಳ ಉದ್ಘಾಟನೆಗೆ ಪಂಜಾಬ್‌ಗೆ ಜನವರಿ 5 ರಂದು ಭೇಟಿ ನೀಡಿದ್ದರು. ಆದರೆ ಈ ವೇಳೆ ಮಾರ್ಗ ಮಧ್ಯ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರು. ಇದರಿಂದ ಪ್ರದಾನಿ ಮೋದಿ 15 ರಿಂದ 20 ನಿಮಿಷಗಳ ಕಾರ ಪ್ರತಿಭಟನಾಕಾರರ ನಡುವೆ ಸಿಲುಕಿದ್ದರು. ಈ ಭದ್ರತಾ ಲೋಪದ ತನಿಖೆ ನಡೆಯುತ್ತಿದೆ. ಪಂಜಾಬ್ ಸರ್ಕಾರ ಹಾಗೂ ಪಂಜಾಬ್ ಪೊಲೀಸರ ವಿರುದ್ದ ಆಕ್ರೋಶ ಹೆಚ್ಚಾಗುತ್ತಿದೆ. ಇದರ ನಡುವೆ ಚುನಾವಣೆ ಘೋಷಣೆಯಾಗಿದ್ದು ಪಂಜಾಬ್ ಕಾಂಗ್ರೆಸ್‌ಗೆ ಮತ್ತಷ್ಟು ಸಂಕಷ್ಟ ತಂದಿದೆ. ಪಂಜಾಬ್‌ನಲ್ಲಿ ಬಿಜೆಪಿ ಮೋದಿ ಅಭಿವೃದ್ಧಿ ಯೋಜನೆಗಳು ಹಾಗೂ ಕಾಂಗ್ರೆಸ್ ಸರ್ಕಾರದ ಭದ್ರತಾ ಲೋಪಗಳ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದೆ. 

UP Elections: ಕೊರೋನಾ ಮಧ್ಯೆ ಚುನಾವಣೆ, ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ ಆಯೋಗ!

ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೊಸ ಪಕ್ಷ, ಬಿಜೆಪಿ ಮೈತ್ರಿ ಒಂದಡೆಯಾದರೆ, ಮತ್ತೊಂದೆಡೆ ಆಮ್ ಆದ್ಮಿ ಪಕ್ಷ ಪಂಜಾಬ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಕೇಂದ್ರದ ವಿರುದ್ಧ ರೈತ ಪ್ರತಿಭಟನೆ ಲಾಭವನ್ನು ಆಪ್ ಪಡೆದುಕೊಂಡಿದೆ. ಪಂಜಾಬ್‌ನಲ್ಲಿ ಹೆಚ್ಚಿನವರ ಒಲವು ಆಮ್ ಆದ್ಮಿ ಪಕ್ಷದತ್ತ ಇದೆ. ಇದು ಹಲವು ಸಮೀಕ್ಷೆಗಳಲ್ಲಿ ಬಹಿರಂಗವಾಗಿದೆ. ಹೀಗಾಗಿ ಕಾಂಗ್ರೆಸ್‌ಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇತ್ತ ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್, ಬಿಜೆಪಿ, ಶಿರೋಮಣಿ ಅಕಾಲಿದಳ ಹಾಗೂ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷಗಳಿಂದ ತಮ್ಮ ಮತಗಳು ಹಾಗೂ ಗೆಲುವಿನ ಸ್ಥಾನ ಹರಿದು ಹಂಚಿಹೋಗಲಿದೆ ಅನ್ನೋ ಆತಂಕವೂ ಇದೆ. 

Follow Us:
Download App:
  • android
  • ios