* ಬಂಗಾಳದ ಮಹಿಳೆಯಲ್ಲಿ ‘ಮ್ಯಾಗ್ನೆಟ್‌ ಪ್ರಭಾವ’* ಲಸಿಕೆ ಪಡೆದಿದ್ದಕ್ಕೆ ಹೀಗಾಗಿದೆ ಎಂದು ಎನ್ನಿಸಿಲ್ಲ: ಅನಿಮಾ ಸ್ಪಷ್ಟನೆ* ‘ನಾನು ಪರೀಕ್ಷೆಗೆ ಒಳಗಾಗಲಿದ್ದೇನೆ. ಏಕೆ ಹೀಗಾಗುತ್ತಿದೆ ಎಂದು ತಿಳಿಯಲು ಬಯಸುತ್ತೇನೆ’ 

ಕೋಲ್ಕತಾ(ಜೂ.116): ಲಸಿಕೆ ಪಡೆದ ನಂತರ ಕೆಲವರ ದೇಹದಲ್ಲಿ ಆಯಸ್ಕಾಂತೀಯ ಪ್ರಭಾವ ಉಂಟಾಗುತ್ತಿದೆ ಎಂಬ ನಂಬಲನರ್ಹ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಬಂಗಾಳದ 66 ವರ್ಷದ ಮಹಿಳೆಯೂ ತಮಗೂ ಇಂಥದ್ದೇ ಅನುಭವ ಆಗಿದೆ ಎಂದಿದ್ದಾರೆ.

24 ಪರಗಣ ಜಿಲ್ಲೆಯ ಅನಿಮಾ ನಾಸ್ಕರ್‌ ಎಂಬಾಕೆಯೇ ಈ ಮಹಿಳೆ. ಆದರೆ ಲಸಿಕೆಯಿಂದಲೇ ಹೀಗಾಗಿದೆ ಎಂದು ತಮಗೆ ಅನ್ನಿಸಿತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಲಸಿಕೆಯ 2 ಡೋಸ್‌ ಪಡೆದ ಕೆಲವರಲ್ಲಿ ಆಯಸ್ಕಾಂತೀಯ ಟೀವಿಗಳಲ್ಲಿ ಸುದ್ದಿಯಾಗಿದ್ದನ್ನು ಕಂಡು ನನ್ನ ಮಗನೂ ನನ್ನ ಮೇಲೆ ಇಂಥದ್ದೇ ಪ್ರಯೋಗ ಮಾಡಿದ. ದೇಹದ ಮೇಲೆ ಕಾಯಿನ್‌ ಹಾಗೂ ಕತ್ತರಿಗಳನ್ನು ಇಟ್ಟ. ಅದು ಅಂಟಿಕೊಂಡಿತು’ ಎಂದಿದ್ದಾರೆ.

ಆದರೆ ಲಸಿಕೆಯಿಂದಾಗಿಯೇ ಹೀಗಾಯಿತು ಎಂದು ಮಹಿಳೆ ಆರೋಪಿಸಿಲ್ಲ. ‘ನಾನು ಪರೀಕ್ಷೆಗೆ ಒಳಗಾಗಲಿದ್ದೇನೆ. ಏಕೆ ಹೀಗಾಗುತ್ತಿದೆ ಎಂದು ತಿಳಿಯಲು ಬಯಸುತ್ತೇನೆ’ ಎಂದಿದ್ದಾರೆ.

ಲಸಿಕೆ ಪಡೆದ ಬಳಿಕ ಆಯಸ್ಕಾಂತೀಯ ಪ್ರಭಾವ ಉಂಟಾಗುತ್ತಿದೆ ಎಂದು ಕೆಲವರು ನೀಡಿದ ಹೇಳಿಕೆಯನ್ನು ಕೇಂದ್ರ ಸರ್ಕಾರ ಪದೇ ಪದೇ ನಿರಾಕರಿಸುತ್ತಿದೆ. ‘ಲಸಿಕೆಯಿಂದ ಅಡ್ಡಪರಿಣಾಮ ಇಲ್ಲ’ ಎಂದು ಸ್ಪಷ್ಟಪಡಿಸಿದೆ.