Asianet Suvarna News Asianet Suvarna News

ಮೈದುನನ ಮಗುವಿಗೆ ವಿಷ ಉಣಿಸಿದ ಅಣ್ಣನ ಹೆಂಡ್ತಿ: ಆಘಾತಕಾರಿ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಮೈದುನನ ಮಗುವಿಗೆ ಆತನ ಅಣ್ಣನ ಹೆಂಡತಿ(ಅತ್ತಿಗೆ) ವಿಷಪ್ರಾಶನ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನ ಬರ್ಮೇರ್ ಜಿಲ್ಲೆಯಲ್ಲಿ ನಡೆದಿದ್ದು, ಈ ಅಮಾನವೀಯ ಘಟನೆಯ ವಿಡಿಯೋ ಕ್ಯಾಮರಾದಲ್ಲಿ ಸೆರೆ ಆಗಿದೆ.

Elder Brothers wife poisoned her husband's younger brother baby in Rajasthan shocking incident went viral on social media akb
Author
First Published May 24, 2024, 12:57 PM IST

ರಾಜಸ್ಥಾನ: ಮೈದುನನ ಮಗುವಿಗೆ ಆತನ ಅಣ್ಣನ ಹೆಂಡತಿ(ಅತ್ತಿಗೆ) ವಿಷಪ್ರಾಶನ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನ ಬರ್ಮೇರ್ ಜಿಲ್ಲೆಯಲ್ಲಿ ನಡೆದಿದ್ದು, ಈ ಅಮಾನವೀಯ ಘಟನೆಯ ವಿಡಿಯೋ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ನಿನ್ನೆ ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ NCMIndia ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ತಲೆಗೆ ಸೆರಗು ಹಾಕಿಕೊಂಡಿರುವ ಮಹಿಳೆಯೊಬ್ಬಳು, ತನ್ನ ಮಗುವನ್ನು ಕಂಕುಳಲ್ಲಿ ಇರಿಸಿಕೊಂಡು ಮೈದುನನ ಮಗುವಿದ್ದ ಕೋಣೆಗೆ ಬರುತ್ತಾಳೆ. ಇತ್ತ ಮೈದುನನ ಮಗುವನ್ನು ಸೊಳ್ಳೆ ಪರದೆಯ ಒಳಗೆ ಜೋಪಾನವಾಗಿ ಮಲಗಿಸಲಾಗಿದೆ. ಈ ಸೊಳ್ಳೆ ಪರದೆಯನ್ನು ನಿಧಾನವಾಗಿ ಮೇಲಕ್ಕೆತಿದ್ದ ಆಕೆ ಪುಟ್ಟ ಮಕ್ಕಳಿಗೆ ಔಷಧಿ ಕುಡಿಸುವಂತಹ ಸಾಧನದಲ್ಲಿ ಮಗುವಿನ ಬಾಯಿಗೆ ಡ್ರಾಪ್‌ಗಳ ಮೂಲಕ ವಿಷಪ್ರಾಶನ ಮಾಡಿದ್ದಾಳೆ ಎಂದು ವರದಿಯಾಗಿದೆ. ಮಗುವಿನ ಬಾಯಿಗೆ ಬಿಂದು ಬಿಂದುವಾಗಿ ಆಕೆ ವಿಷವನ್ನು ಇಳಿಸುತ್ತಾಳೆ. ನಂತರ ಕ್ಷಣದಲ್ಲಿ ಆ ರೂಮ್‌ನಿಂದ ಹೊರಗೆ ಹೋಗುತ್ತಾಳೆ. 

ಟ್ವಿಟ್ಟರ್‌ ಪೋಸ್ಟ್‌ನಲ್ಲಿ ಇರುವ ಮಾಹಿತಿಯಂತೆ ಈ ಕುಟುಂಬದಲ್ಲಿ ಈ ಹಿಂದೆಯೂ ಇಂತಹದೇ ವಿಷಪ್ರಾಶನ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಆದರೆ ಅದೃಷ್ಟವಶಾತ್ ಈ ಮಗು ವಿಷಪ್ರಾಶನವಾದರೂ ಮಗು ಬದುಕುಳಿದಿದೆ. ಘಟನೆಯ ಬಳಿಕ ಅಸ್ವಸ್ಥಗೊಂಡಿದ್ದ ಮಗುವನ್ನು ಕೂಡಲೇ ಐಸಿಯುಗೆ ದಾಖಲಿಸಿ ಮೂರು ದಿನಗಳ ಕಾಲ  ಚಿಕಿತ್ಸೆ ನೀಡಿದ ಪರಿಣಾಮ ಮಗು ಬದುಕುಳಿದಿದೆ. 

ಪ್ರೀತಿಸಿ ಮದುವೆಯಾದವಳಿಗೆ ವಿಷ ಉಣಿಸಿದ ಗಂಡ..!ಮುದ್ದೆಯಲ್ಲಿ ಸೈನೈಡ್ ಹಾಕಿದ್ನಾ ಪಾಪಿ ಗಂಡ..?

ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿರುವ ಮಾಹಿತಿ ಪ್ರಕಾರ, ಹೀಗೆ ವಿಷಪ್ರಶಾನಕ್ಕೆ ಒಳಗಾದ ಮಗುವಿನ ತಾಯಿ ಈ ಹಿಂದೆಯೂ ತನ್ನ ಇಬ್ಬರು ಮಕ್ಕಳನ್ನು ಇಂತಹದೇ ಪ್ರಕರಣದಲ್ಲಿ ಕಳೆದುಕೊಂಡಿದ್ದಳು. ಹೀಗಾಗಿ ಆಕೆಗೆ ಅನುಮಾನ ಮೂಡಿದ್ದು, ಮಕ್ಕಳ ಸುರಕ್ಷತೆಯ ಹಿನ್ನೆಲೆಯಲ್ಲಿ ಆಕೆ ಮನೆಯಲ್ಲಿ ಸಿಸಿಟಿವಿ ಅಳವಡಿಸಿ ಮುಂಜಾಗೃತ ಕ್ರಮ ಕೈಗೊಂಡಿದ್ದಳು. ಹೀಗಾಗಿ ತನ್ನ ಓರಗಿತ್ತಿಯ ಈ ಕೃತ್ಯವೆಸಗಿದ್ದು ಕ್ಯಾಮರಾದಲ್ಲಿ ಸೆರೆ ಆಗಿದ್ದು, ಆಕೆಯನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾಳೆ. ಆದರೆ ಈ ಬಗ್ಗೆ ಪ್ರಕರಣ ದಾಖಲಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಜೊತೆಗೆ ಟ್ವಿಟ್ಟರ್‌ ಪೋಸ್ಟ್ ಪ್ರಕಾರ, ಈ ಬಗ್ಗೆ ಕುಟುಂಬದವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. 

ಹೆತ್ತ ಮೂರು ಮಕ್ಕಳಿಗೆ ವಿಷ ಉಣಿಸಿದ ತಂದೆ; ವಿಜಯಪುರದಲ್ಲಿ ದಾರುಣ ಘಟನೆ

 

Latest Videos
Follow Us:
Download App:
  • android
  • ios