ಆಲಿಘಡ(ಮೇ.29): ಭಾರತದಲ್ಲಿ ಹುಟ್ಟಿ ಬೆಳೆದು, ಭಾರತದ ಸೌಲಭ್ಯಗಳನ್ನು ಉಪಯೋಗಿಸಿ, ಭಾರತದಲ್ಲಿ ಪ್ರಾಥಮಿಕ ಶಿಕ್ಷಗಳನ್ನು ಪೂರೈಸಿ, ಕಾಲೇಜು ಮಟ್ಟಿಲು ಹತ್ತಿದಾಗ ದೂರದ ಪಾಕಿಸ್ತಾನವೇ ಹಲವರಿಗೆ ಸ್ವರ್ಗವಾಗಿ ಕಾಣುತ್ತೆ. ಭಾರತದಲ್ಲಿರುವ ಕೆಲವರಿಗೆ ಪಾಕಿಸ್ತಾನ ಪ್ರೀತಿ ತುಸು ಹೆಚ್ಚೇ ಇದೆ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಲೇ ಇದೆ.  ಬಹಿರಂಗ ಸಭೆಯಲ್ಲಿ, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಹೇಳಿಕೆಗಳು ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ.  ಇದೀಗ ಸಂತಸ, ಖುಷಿ ಎಂದರೆ ಪಾಕಿಸ್ತಾನ ಎಂದು ಆಲಿಘಡ ಮುಸ್ಲಿಂ ವಿಶ್ವಿವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಇವರಿಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ. 

‘ಫ್ರೀ ಕಾಶ್ಮೀರ’: ಆರ್ದ್ರಾಗೆ ಷರತ್ತು ಬದ್ಧ ಜಾಮೀನು ಮಂಜೂರು

ಇತ್ತೀಚೆಗಷ್ಟೇ ಮುಸ್ಲಿಂ ಬಾಂಧವರ ಈದ್ ಹಬ್ಬವನ್ನ ಆಚರಿಸಿದ್ದಾರೆ. ಕೊರೋನಾ ವೈರಸ್ ಕಾರಣ ಸಾಮೂಹಿಕ ಪ್ರಾರ್ಥನೆ ಮಾಡುವ ಅವಕಾಶ ಇರಲಿಲ್ಲ. ಹೀಗಾಗಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದ್ದರು. ಹೀಗೆ ಆಲಿಘಡ ಮುಸ್ಲೀಂ ಯುನಿವರ್ಸಿಟಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಈದ್ ಹಬ್ಬದಂದು, ಭಾರತ ವಿರೋಧಿ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಈದ್ ಹಬ್ಬ ಎಂದರೆ ಸಂತಸ, ಖುಷಿ ಎಂದರ್ಥ. ಈ ಸಂತೋಷ, ಖುಷಿ ಎಂದರೆ ಪಾಕಿಸ್ತಾನ ಎಂದು ಫೇಸ್‌ಬುಕ್‌ನಲ್ಲಿ ಬರಹ ಪೋಸ್ಟ್ ಮಾಡಿದ್ದರು.

ದೆಹಲಿ ಹಿಂಸಾಚಾರಕ್ಕೆ ಲಿಂಕ್ ಪಿಎಫ್ಐ ಕಾರ್ಯಕರ್ತನ ಬಂಧನ!

ಇಬ್ಬರು ವಿದ್ಯಾರ್ಥಿಗಳ ವಿರುದ್ಧ ದೇಶವಿರೋಧಿ, ಶಾಂತಿ ಕದಡುವ, ಐಕ್ಯತೆ ಭಂಗ ತಂದ ಆರೋಪ ಮೇಲೆ ಐಪಿಎಸ್ ಸೆಕ್ಷನ್ 153A, 153B ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಇದೇ ವೇಳೆ ವಿಶ್ವವಿದ್ಯಾಲಯದ ಕಾನೂನಿಡಿಯಲ್ಲಿ ಇಬ್ಬರು ವಿದ್ಯಾರ್ಥಿಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮ ತೆಗೆದಕೊಳ್ಳಲಿದ್ದೇವೆ ಎಂದು ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವಕ್ತಾರ ಶೆಫಿ ಕಿದ್ವಾಯಿ ಹೇಳಿದ್ದಾರೆ.

ಇದರ ನಡುವೆ ಆಲಿಘಡ ಮುಸ್ಲಿಂ ಯುನಿವರ್ಸಿಟಿ ವಿದ್ಯಾರ್ಥಿ ನಾಯಕ ಫರಾನ್ ಜುಬೇರಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 15 ರಂದು ನಡೆದ ಪೌರತ್ವ ವಿರೋಧಿ ಹೋರಾಟವನ್ನು ಹಿಂಸಾರೂಪಕ್ಕೆ ತಿರುಗಿಸಿದ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಸೇರಿದಂತೆ ಆಲಿಘಡ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ 11 ಕೇಸ್ ದಾಖಲಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಫರಾನ್ ಜುಬೇರಿಯನ್ನು ಪೊಲೀಸರು ಅರಸ್ಟ್ ಮಾಡಿದ್ದಾರೆ.