ನವದೆಹಲಿ(ಮಾ. 09)  ಸಿಎಎ ವಿರುದ್ಧ  ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರದ ಹಿಂದೆ ಅನೇಕ ಸಂಘಟನೆಗಳ ಕೈವಾಡ ಇದೆ ಎಂದು ಶಂಕೆ ಸಹ ವ್ಯಕ್ತವಾಗಿತ್ತು.

ಸಿಎಎ ವಿರೋಧಿ ಪ್ರತಿಭಟನೆ ವೇಳೆ ಅಪಪ್ರಚಾರ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸ್ ವಿಶೇಷ ಪಡೆ ಉತ್ತರ ಪ್ರದೇಶದ  ಮೊರಾದಾಬಾದ್‌ನ ಪಿಎಫ್‌ಐ ಸದಸ್ಯ ಡ್ಯಾನಿಶ್‌ ಎಂಬಾತನನ್ನು ಸೋಮವಾರ ಬಂಧಿಸಿದೆ.

ಕುದಿಯುತ್ತಿದ್ದ ದೆಹಲಿಯನ್ನು ಗಂಟೆಗಳಲ್ಲೆ ದೋವೆಲ್ ಕಂಟ್ರೋಲ್‌ಗೆ ತಂದಿದ್ದು ಹೇಗೆ?

ಡ್ಯಾನಿಶ್ ಪಿಎಫ್‌ಐನ ಕೌಂಟರ್ ಇಂಟೆಲಿಜೆನ್ಸ್ ವಿಂಗ್‌ನ ಮುಖ್ಯಸ್ಥನಾಗಿದ್ದ. ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿ ಅನೇಕ ದೂರುಗಳು ಈಗಾಗಲೇ ದಾಖಲಾಗಿದ್ದು ಈ ಪ್ರಕರಣವನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್ (ಐಎಸ್) ಖೋರಾಸನ್ ಮಾಡ್ಯೂಲ್ ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಓಖ್ಲಾ ಮೂಲದ ಕಾಶ್ಮೀರಿ ದಂಪತಿಯನ್ನು ದೆಹಲಿ ಪೊಲೀಸ್ ವಿಶೇಷ ಪಡೆ ಭಾನುವಾರ ಬಂಧಿಸಿತ್ತು. ಈಗ ಪಿಎಫ್ ಐ ಕಾರ್ಯಕರ್ತನ ಬಂಧನವಾಗಿದ್ದು ಒಂದೊಂದೆ ಹಂತದ ವಿಚಾರಣೆ ತೆರೆದುಕೊಳ್ಳುತ್ತಿದೆ.

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಡೆದ ಪ್ರತಿಭಟನೆ ನವದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು. ಗಲಭೆಯಲ್ಲಿ 20ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.