ನೇತಾಜಿ ಪರಂಪರೆ ಶಾಶ್ವತ; ದೀದಿ ವೋಟ್‌ಬ್ಯಾಂಕ್ ಪಾಲಿಟಿಕ್ಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ!
ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅಮಿತ್ ಶಾ, ಮತ್ತೆ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ನೇತಾಜಿ ಪರಂಪರೆ ಅಳಿಸಿಹಾಕುವ ಯತ್ನ ಕುರಿತು ದೀದಿ ವಿರುದ್ಧ ಶಾ ಹರಿಹಾಯ್ದಿದ್ದಾರೆ. ಶೌರ್ಯಾಂಜಲಿ ಕಾರ್ಯಕ್ರಮದಲ್ಲಿ ಅಮತ್ ಶಾ ಭಾಷಣ ಹೈಲೈಟ್ಸ್ ಇಲ್ಲಿದೆ.
ಕೋಲ್ಕತ್ತಾ(ಫೆ.19): ಕ್ರಾಂತಿಕಾರಿಗಳಿಗೆ ಗೌರವ ನಮನ ಶೌರ್ಯಾಂಜಲಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳದ ಭವ್ಯ ಪರಂಪರೆ ಅಳಿಸಿಹಾಕುವ ಯತ್ನ ನಡೆಸುತ್ತಿರುವ ಮಮತಾ ಬ್ಯಾನರ್ಜಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಕೀರ್ತಿ ಪತಾಕೆಯನ್ನು ಕಿತ್ತೊಗೆಯುವ ಪ್ರಯತ್ನ ಮಾಡಲಾಗಿದೆ. ಆದರೆ ಅದು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾಗೆ ಕಪ್ಪು ಧ್ವಜ ತೋರಿಸಿದ ಮಹಿಳೆಯರು: ಇದು ದೀದಿ ಕೆಲಸ ಎಂದ ಶಾ
ಸ್ವಾತಂತ್ರ್ಯ ವೀರ, ದೇಶಭಕ್ತ ಸುಭಾಷ್ ಚಂದ್ರಬೋಸ್ ಅವರ ಕೀರ್ತಿಯನ್ನು ಮರೆಮಾಚುವ, ನೇತಾಜಿಯನ್ನು ಮರೆತು ಬಿಡುವ ಪ್ರಯತ್ನಗಳು ನಡೆದಿದೆ. ಆದರೆ ನೇತಾಜಿ ಸೇವೆ ಅಜರಾಮರವಾಗಿದೆ. ಅವರ ಕೂಡುಗೆ, ಮಾರ್ಗದರ್ಶಗಳು ಎಲ್ಲರಿಗೂ ದಾರಿದೀಪವಾಗಿದೆ. ಯಾವುದೇ ಕಾರಣಕ್ಕೂ ನೇತಾಜಿ ಪರಂಪರೆ ಅಳಿಸಲು ಸಾಧ್ಯವಿಲ್ಲ ಎಂದು ಶಾ ಹೇಳಿದ್ದಾರೆ
ಕೇಂದ್ರ ಸರ್ಕಾರ ನೇತಾಜಿ 125ನೇ ಜಯಂತಿ ಆಚರಣೆಯನ್ನು ವರ್ಷವಿಡಿ ಆಚರಿಸುತ್ತಿದೆ. ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪಶ್ಚಿಮ ಬಂಗಾಳದ ಪರಂಪರೆಯನ್ನ ಎತ್ತಿ ಹಿಡಿಯುವ ಹಾಗೂ ಬಂಗಾಳ ಭವಿಷ್ಯವನ್ನು ಉಜ್ವಲಗೊಳಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.