ಅಮಿತ್ ಶಾಗೆ ಕಪ್ಪು ಧ್ವಜ ತೋರಿಸಿದ ಮಹಿಳೆಯರು: ಇದು ದೀದಿ ಕೆಲಸ ಎಂದ ಶಾ
ಪಶ್ಚಿಮ ಬಂಗಾಳದಲ್ಲಿ ಗೃಹ ಸಚಿವ ಅಮಿತ್ ಶಾಗೆ ಮಹಿಳೆಯರು ಕಪ್ಪು ಧ್ವಜ ತೋರಿಸಿ ಪ್ರತಿಭಟಿಸಿದ್ದಾರೆ.
ಪಶ್ಚಿಮ ಬಂಗಾಳದ ಸಾರ್ವಜನಿಕ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾಗೆ ಮಹಿಳೆಯರು ಕಪ್ಪು ಧ್ವಜಗಳನ್ನು ಎತ್ತಿ ತೋರಿಸಿ ಪ್ರತಿಭಟಿಸಿದ್ದಾರೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ನಡೆದ ಸಭೆಯಲ್ಲಿ ಕೆಲವು ಮಹಿಳೆಯರು ಕಪ್ಪು ಧ್ವಜ ಹಿಡಿದುಕೊಂಡು ಬ್ಯಾರಿಕೇಟ್ ದಾಟಿ ಬಂದಿದ್ದಾರೆ.
ಲಡಾಖ್‌ನಿಂದ ಚೀನಾ ಸೇನೆ ಹಿಂದೆ ಹೋಗಿದ್ದರ ಗುಟ್ಟೇನು?
ಬ್ಯಾರಿಕೇಡ್ ದಾಟಿ ಬಂದು ಕಪ್ಪು ಧ್ವಜ ತೋರಿಸಿದ ಮಹಿಳೆಯರನ್ನು ಭದ್ರತಾ ಸಿಬ್ಬಂದಿ ತಕ್ಷಣ ಸ್ಥಳದಿಂದ ತೆರವು ಮಾಡಿದ್ದಾರೆ.
ಸಿಎಂ ಮಮತಾ ಬ್ಯಾನರ್ಜಿ ಇದಕ್ಕೆ ಆರ್ಡರ್ ಕೊಟ್ಟಿದ್ದಾರಾ..? ಎಲ್ಲವನ್ನೂ ಅವ್ಯವಸ್ಥೆ ಮಾಡಲೆಂದೇ ಮಮತಾ ಮಹಿಳೆಯರನ್ನು ಕಳಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಹತ್ತಿರವಾದಂತೆ ಬಿಜೆಪಿ ರಾಜ್ಯವನ್ನು ಕಮಲದ ತೆಕ್ಕೆಗೆ ಪಡೆಯಲು ಪ್ರಯತ್ನಿಸುತ್ತಿರುವುದು ಸಿಎಂ ಮಮತಾ ಬ್ಯಾನರ್ಜಿಗೆ ತಲೆನೋವಾಗಿದೆ. ತೃಣಮೂಲಕ ಕಾಂಗ್ರೆಸ್ನ ಕೆಲವು ಪ್ರಮುಖ ಸಚಿವರು ಮತ್ತು ಮುಖಂಡರು ಬಿಜೆಪಿ ಸೇರಿದ ನಂತರ ಇದೀಗ ಬೃಹತ್ ಸಭೆ ನಡೆದಿದೆ.