ಅರಬ್ಬಿ ಸಮುದ್ರದಲ್ಲಿ ಚಂಡಮಾರುತ : ಗುಜರಾತ್‌ನಲ್ಲಿ ಸಿಡಿಲಿಗೆ ಒಂದೇ ದಿನ 20 ಮಂದಿ ಬಲಿ

ಅರಬ್ಬಿ ಸಮುದ್ರದಲ್ಲಿ ಉಂಟಾದ ಚಂಡಮಾರುತದ ಪರಿಣಾಮ ಗುಜರಾತ್‌ನ ಸೌರಾಷ್ಟ್ರ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ಸಿಡಿಲು ಬಡಿತದಿಂದ ಭಾನುವಾರ ಒಂದೇ ದಿನ 20 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಪಕ್ಕದ ಮಧ್ಯಪ್ರದೇಶದಲ್ಲೂ ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ.

Effect of Cyclone in Arabian Sea 20 killed in lightning strike at Gujarat in Single Day akb

ಅಹಮದಾಬಾದ್‌/ಭೋಪಾಲ್‌: ಅರಬ್ಬಿ ಸಮುದ್ರದಲ್ಲಿ ಉಂಟಾದ ಚಂಡಮಾರುತದ ಪರಿಣಾಮ ಗುಜರಾತ್‌ನ ಸೌರಾಷ್ಟ್ರ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ಸಿಡಿಲು ಬಡಿತದಿಂದ ಭಾನುವಾರ ಒಂದೇ ದಿನ 20 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಪಕ್ಕದ ಮಧ್ಯಪ್ರದೇಶದಲ್ಲೂ ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ.

ಗುಜರಾತ್‌ನ ದಾಹೋದ್‌ನಲ್ಲಿ 4, ಭರೂಚ್‌ನಲ್ಲಿ 3, ತಾಪಿಯಲ್ಲಿ 2, ಅಹ್ಮದಾಬಾದ್‌, ಅಮ್ರೇಲಿ, ಬನಾಸ್‌ಕಾಂಠಾ, ಬೋತಾದ್‌, ಖೇಡಾ, ಮೆಹ್ಸಾನಾ, ಪಂಚಮಹಲ್‌, ಸಾಬರ್‌ಕಾಂಠಾ, ಸೂರತ್‌, ಸುರೇಂದ್ರನಗರ ಮತ್ತು ದ್ವಾರಕಾ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ತುರ್ತು ನಿರ್ವಹಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಪ್ರದೇಶದ ಧಾರ್, ಜಬುವಾ ಹಾಗೂ ಬರ್ವಾನಿ ಜಿಲ್ಲೆಗಳಲ್ಲಿ 4 ಸಾವು ಸಂಭವಿಸಿವೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ: ಹಲವು ರಾಜ್ಯಗಳಲ್ಲಿ ಮಳೆ

ಗುಜರಾತ್‌ನ ಜಿಲ್ಲೆಗಳಲ್ಲಿ ಭಾನುವಾರ ಒಂದೇ ದಿನ 16 ಘಂಟೆಗಳ ಅವಧಿಯಲ್ಲಿ 50-117ಮಿ.ಮೀ ಮಳೆ ಸುರಿದ ಪರಿಣಾಮ ಜೀವಹಾನಿಯ ಜೊತೆಗೆ ಹಲವಾರು ಜನ ಗಾಯಗೊಂಡಿದ್ದು, ಹಲವು ಬೆಳೆ ನಷ್ಟವಾಗಿವೆ. ಜೊತೆಗೆ ಮೊರ್ಬಿ ಜಿಲ್ಲೆಯಲ್ಲಿ ಸೆರಾಮಿಕ್‌ ಕಾರ್ಖಾನೆಗಳಿಗೆ ಭಾರೀ ತೊಂದರೆಯಾಗಿದೆ.

ಅಮಿತ್‌ ಶಾ ಸಂತಾಪ

ಈ ಕುರಿತು ಸಂತಾಪ ವ್ಯಕ್ತಪಡಿಸಿದ ಕೇಂದ್ರಗೃಹ ಸಚಿವ ಅಮಿತ್‌ ಶಾ (Union Home Minister Amit Shah), ಈ ಘಟನೆಯಲ್ಲಿ ಅಸುನೀಗಿದ ಎಲ್ಲರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲು ದೇವರಲ್ಲಿ ಪ್ರಾರ್ಥಿಸುತ್ತೇನೆ. ಹಾಗೆಯೇ ಉಳಿದವರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಕರಾವಳಿಯಲ್ಲಿ ಮತ್ತೊಂದು ಚಂಡಮಾರುತ ಭೀತಿ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Latest Videos
Follow Us:
Download App:
  • android
  • ios