ಬಂಗಾಳಕೊಲ್ಲಿಯಲ್ಲಿ ಚಂಡಮಾರುತ: ಹಲವು ರಾಜ್ಯಗಳಲ್ಲಿ ಮಳೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಇಂದುನ ಚಂಡಮಾರುತವಾಗಿ ಪರಿವರ್ತನೆ ಆಗುವ ಸಾಧ್ಯತೆ ಇದೆ ಹಾಗೂ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)  ಮುನ್ಸೂಚನೆ ನೀಡಿದೆ.

Cyclone in Bay of Bengal Rain in many states akb

ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಇಂದುನ ಚಂಡಮಾರುತವಾಗಿ ಪರಿವರ್ತನೆ ಆಗುವ ಸಾಧ್ಯತೆ ಇದೆ ಹಾಗೂ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)  ಮುನ್ಸೂಚನೆ ನೀಡಿದೆ. ಇದರ ಪರಿಣಾಮ ಒಡಿಶಾ ಹಾಗೂ ಬಂಗಾಳ ಕರಾವಳಿ ಭಾಗಗಳಲ್ಲಿ ಗುರುವಾರವೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆಯಾಗುತ್ತಿದೆ.

ಗುರುವಾರದಂದು ವಾಯುಭಾರ ಕುಸಿತವು ಗಂಟೆಗೆ 17 ಕಿ.ಮೀ. ವೇಗದಲ್ಲಿ ಈಶಾನ್ಯಕ್ಕೆ ಚಲಿಸುತ್ತಿದೆ. ಇದು ಗುರುವಾರ ಬೆಳಗ್ಗೆ 8.30 ಗಂಟೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆಗ್ನೇಯಕ್ಕೆ 390 ಕಿಮೀ ದೂರದಲ್ಲಿ ಮತ್ತು ಒಡಿಶಾದ (Odisha) ಪಾರಾದೀಪ್‌ನಿಂದ (Paradeep)ಆಗ್ನೇಯಕ್ಕೆ 320 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಇದು ಶುಕ್ರವಾರ ಚಂಡಮಾರುತವಾಗಿ ಪರಿವರ್ತನೆಗೊಂಡು ಮತ್ತಷ್ಟು ಈಶಾನ್ಯದತ್ತ ಸಾಗಿ ಗಂಟೆಗೆ 75 ಕಿ.ಮೀ. ವೇಗದಲ್ಲಿ ಬಾಂಗ್ಲಾದೇಶದ ಮೋಂಗ್ಲಾ ಹಾಗೂ ಖೇಪುಪಾರಾ ಕರಾವಳಿ (Khepupara coasts) ಮಧ್ಯೆ ಅಪ್ಪಳಿಸಲಿದೆ ಎಂದು ಅದು ಹೇಳಿದೆ.

ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ‘ತೇಜ್’: ಚಂಡಮಾರುತ ದಿಕ್ಕು ಬದಲಿಸಿದ್ರೆ ಭಾರತಕ್ಕಿದೆ ದೊಡ್ಡ ಆಪತ್ತು!

ದಿಲ್ಲಿ ವಾಯು ಸ್ಥಿತಿ ಮತ್ತೆ ಅತಿ ಗಂಭೀರ

ನವದೆಹಲಿ: ದೆಹಲಿಯನ್ನು ಆವರಿಸುವ ವಿಷಕಾರಿ ಧೂಳಿನ ಪ್ರಮಾಣ ಏರಿಕೆಯಾಗಿದ್ದು, ಬುಧವಾರ ಮತ್ತೆ ಅತಿ ಗಂಭೀರ ಸ್ಥಿತಿಗೆ ತಲುಪಿದೆ. ಕೊಂಚ ಮಟ್ಟಿಗೆ ಸುಧಾರಿಸಿದ್ದ ವಾಯುವಿನ ಗುಣಮಟ್ಟ ಕಳೆದ 2 ದಿನಗಳಿಂದ ಮತ್ತೆ ಗಂಭೀರ ಸ್ಥಿತಿಗೆ ಬದಲಾಗಿದೆ. ಬುಧವಾರ ವಾಯುವಿನ ಗುಣಮಟ್ಟ 401ಕ್ಕೆ ಏರಿಕೆಯಾಗಿದೆ. ಮಂಗಳವಾರ 391, ಸೋಮವಾರ 358 ಮತ್ತು ಭಾನುವಾರ 218ರಷ್ಟು ದಾಖಲಾಗಿತ್ತು. ಕಳೆದ ಗುರುವಾರ 437ಕ್ಕೆ ಏರಿಕೆಯಾಗಿದ್ದ ವಾಯು ಗುಣಮಟ್ಟ ಮಳೆ ಹಾಗೂ ಇತರ ನಿಯಂತ್ರಣ ಕ್ರಮಗಳಿಂದಾಗಿ ಕೊಂಚ ಇಳಿಕೆ ದಾಖಲಿಸಿತ್ತು. ಆದರೆ ಇದೀಗ ಮತ್ತೆ ಅತಿ ಗಂಭೀರ ಸ್ಥಿತಿಗೆ ತಲುಪಿದ್ದು, ಈ ಪರಿಸ್ಥಿತಿ ಅತಿ ಹೆಚ್ಚು ಪ್ರದೇಶವನ್ನು ಆವರಿಸಿದೆ.

ಗಾಜಿಯಾಬಾದ್‌ನಲ್ಲಿ 378, ಗುರುಗ್ರಾಮದಲ್ಲಿ 297, ಗ್ರೇಟರ್‌ ನೋಯ್ಡಾದಲ್ಲಿ 338, ನೋಯ್ಡಾದಲ್ಲಿ 360 ಮತ್ತು ಫರೀದಾಬಾದ್‌ನಲ್ಲಿ 390ರಷ್ಟು ವಾಯು ಗುಣಮಟ್ಟ ದಾಖಲಾಗಿದೆ. ವಾಯುವಿನ ಗುಣಮಟ್ಟವನ್ನು ಸುಧಾರಿಸಲು ಡೀಸೆಲ್‌ ವಾಹನಗಳ ನಿಷೇಧ, ಕಟ್ಟಡ ನಿರ್ಮಾಣ ಮತ್ತು ಕೆಡವುವ ಕಾಮಗಾರಿಗಳಿಗೆ ನಿರ್ಬಂಧ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ವಾರ ಪರಿಸ್ಥಿತಿ ಸುಧಾರಿಸಿದ ಕಾರಣ ಸಮ ಬೆಸ ವಾಹನಗಳ ನಿಯಮವನ್ನು ಮುಂದೂಡಲಾಗಿತ್ತು.

ಶೀಘ್ರದಲ್ಲಿ ಭೀಕರ ಚಂಡಮಾರುತ, ಸುನಾಮಿ- ಉರ್ಫಿ ವಿಡಿಯೋ ನೋಡಿ ನುಡೀತಿದ್ದಾರೆ ಭವಿಷ್ಯ!

Latest Videos
Follow Us:
Download App:
  • android
  • ios