Asianet Suvarna News Asianet Suvarna News

ಉದ್ಯೋಗಕ್ಕಾಗಿ ಭೂಮಿ ಹಗರಣ: ಡಿಸಿಎಂ ಪಟ್ಟ ಹೋದ ಬೆನ್ನಲ್ಲೇ ತೇಜಸ್ವಿ 8 ತಾಸು ಇ.ಡಿ. ವಿಚಾರಣೆ

ವಿಚಾರಣೆಗೆ ಹಾಜರಾಗುವಂತೆ ಜನವರಿ 19ರಂದು ಸಮನ್ಸ್‌ ನೀಡಲಾಗಿದ್ದ ಹಿನ್ನೆಲೆಯಲ್ಲಿ ತೇಜಸ್ವಿ ಮಂಗಳವಾರ ಬೆಳಗ್ಗೆ 11:35ರ ಸುಮಾರಿಗೆ ಇ.ಡಿ. ಕಚೇರಿಗೆ ಹಾಜರಾಗಿ ವಿಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ed quizzes tejashwi yadav for 8 hours asks 60 questions ash
Author
First Published Jan 31, 2024, 9:41 AM IST

ಪಟನಾ (ಜನವರಿ 31, 2023): ಉದ್ಯೋಗಕ್ಕಾಗಿ ಭೂಮಿ ಲಂಚ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಹಾಗೂ ಆರ್‌ಜೆಡಿ ನೇತಾರ ಲಾಲು ಪ್ರಸಾದ್‌ ಯಾದವ್‌ ಪುತ್ರ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರನ್ನು ಜಾರಿ ನಿರ್ದೇಶನಾಲಯ 8 ತಾಸು ತೀವ್ರ ವಿಚಾರಣೆಗೊಳಪಡಿಸಿದೆ. ತೇಜಸ್ವಿ ಅವರ ಡಿಸಿಎಂ ಪಟ್ಟ ಹೋದ 2 ದಿನದಲ್ಲೇ ಇ.ಡಿ. ವಿಚಾರಣೆ ನಡೆಸಿರುವುದು ಗಮನಾರ್ಹ.

ವಿಚಾರಣೆಗೆ ಹಾಜರಾಗುವಂತೆ ಜನವರಿ 19ರಂದು ಸಮನ್ಸ್‌ ನೀಡಲಾಗಿದ್ದ ಹಿನ್ನೆಲೆಯಲ್ಲಿ ತೇಜಸ್ವಿ ಮಂಗಳವಾರ ಬೆಳಗ್ಗೆ 11:35ರ ಸುಮಾರಿಗೆ ಇ.ಡಿ. ಕಚೇರಿಗೆ ಹಾಜರಾಗಿ ವಿಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರನ್ನು ಇ.ಡಿ. ಸತತ 9 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

 

'ಕೇವಲ ಗುಜರಾತಿಗಳು ದರೋಡೆಕೋರರಾಗಲು ಸಾಧ್ಯ' ಎಂಬ ಹೇಳಿಕೆ: ಲಾಲೂ ಪುತ್ರನ ವಿರುದ್ಧ ಮಾನಹಾನಿ ಕೇಸ್‌

ಏನಿದು ಹಗರಣ?:
ಲಾಲು ಪ್ರಸಾದ್‌ ಯಾದವ್‌ ಅವರು 2004-2009ರಲ್ಲಿ ರೈಲ್ವೆ ಸಚಿವರಾಗಿದ್ದ ವೇಳೆ ರೈಲ್ವೆಯಲ್ಲಿ ಉದ್ಯೋಗ ನೀಡಲು ಹಲವರಿಂದ ಲಂಚ ರೂಪದಲ್ಲಿ ಭೂಮಿಯನ್ನು ಪಡೆದಿದ್ದಾರೆ. ಈ ಭೂಮಿ ಲಾಲು ಪತ್ನಿ ರಾಬ್ಡಿ, ಪುತ್ರ ತೇಜಸ್ವಿಗೂ ಸಂದಾಯವಾಗಿದೆ ಎಂಬ ಪ್ರಕರಣವನ್ನು ಇ.ಡಿ. ತನಿಖೆ ಮಾಡುತ್ತಿದೆ.

Bihar Politics: ನಿತೀಶ್ ನಡೆಯಿಂದ ಕಂಗಾಲಾಯ್ತು ಆರ್‌ಜೆಡಿ..! ಹೇಗಿತ್ತು ಜಂಪಿಂಗ್ ಸ್ಟಾರ್ ಪೊಲಿಟಿಕಲ್ ಗೇಮ್..?

Follow Us:
Download App:
  • android
  • ios