Asianet Suvarna News Asianet Suvarna News

ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಮಧ್ಯವರ್ತಿ ಪ್ರೇಮ್ ಪ್ರಕಾಶ್ ಬಂಧಿಸಿದ ಇಡಿ

ಜಾರ್ಖಂಡ್‌ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಧ್ಯವರ್ತಿಗಳು ಪ್ರೇಮ್‌ ಪ್ರಕಾಶ್‌ ಅವರನ್ನು ಬಂಧಿಸಿದೆ. 

ed arrests middlemen prem prakash in jharkhand illegal mining case ash
Author
Bangalore, First Published Aug 25, 2022, 9:41 AM IST

ಜಾರ್ಖಂಡ್‌ನಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ (Jharkhand Illeal Mining Case) ಸಂಬಂಧಿಸಿದಂತೆ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಗೆ (Money Laundering) ಸಂಬಂಧಿಸಿದಂತೆ ಪ್ರೇಮ್ ಪ್ರಕಾಶ್ ಎಂಬ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) (Enforcement Directorate) ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕಾಶ್ ಅವರನ್ನು ಬಂಧಿಸಿದ್ದು, ಫೆಡರಲ್ ಏಜೆನ್ಸಿ ಅವರನ್ನು ಕಸ್ಟಡಿಗೆ ಪಡೆಯಲು ರಾಂಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇನ್ನು, ಈ ಪ್ರಕರಣದಲ್ಲಿ ಇದು ಮೂರನೇ ಬಂಧನವಾಗಿದೆ. ಇದಕ್ಕೂ ಮುನ್ನ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ರಾಜಕೀಯ ಸಹಾಯಕ ಪಂಕಜ್ ಮಿಶ್ರಾ ಮತ್ತು ಮಿಶ್ರಾ ಅವರ ಸಹವರ್ತಿ ಮತ್ತು ಬಾಡಿ ಬಿಲ್ಡರ್‌ ಬಚ್ಚು ಯಾದವ್ ಅವರನ್ನು ಇಡಿ ಬಂಧಿಸಿತ್ತು.

ಜಾರ್ಖಂಡ್, ಬಿಹಾರ, ತಮಿಳುನಾಡು ಮತ್ತು ದೆಹಲಿ-ಎನ್‌ಸಿಆರ್‌ನ ಇತರ ಕೆಲವು ಸ್ಥಳಗಳನ್ನು ಹೊರತುಪಡಿಸಿ ರಾಂಚಿಯಲ್ಲಿನ ಪ್ರೇಮ್‌ ಪ್ರಕಾಶ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಂಸ್ಥೆ ಬುಧವಾರ ಶೋಧ ನಡೆಸಿತು ಮತ್ತು ಅವರಿಗೆ ಸಂಬಂಧಿಸಿದ ಮನೆಯಿಂದ ಎರಡು ಎಕೆ -47 ರೈಫಲ್‌ಗಳು ಮತ್ತು 60 ಬುಲೆಟ್‌ಗಳನ್ನು ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ವಶಪಡಿಸಿಕೊಂಡಿತ್ತು. ಇನ್ನು, ಈ ಶಸ್ತ್ರಾಸ್ತ್ರಗಳು ಇಬ್ಬರು ಜಾರ್ಖಂಡ್ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಸೇರಿದ್ದು, ಇಡಿ ವಶಪಡಿಸಿಕೊಂಡ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ಬಿಜೆಪಿಯ ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಅವರು ಟ್ವೀಟ್‌ನಲ್ಲಿ ಪ್ರೇಮ್‌ ಪ್ರಕಾಶ್ ಅವರು "ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಕುಟುಂಬ ಸ್ನೇಹಿತ ಅಮಿತ್ ಅಗರ್ವಾಲ್ ಅವರ ಸಹವರ್ತಿ" ಮತ್ತು ಪ್ರೇಮ್‌ ಪ್ರಕಾಶ್‌ ಸಂಪರ್ಕಗಳನ್ನು ಎನ್‌ಐಎ ತನಿಖೆ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ.

ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಸಿಎಂ ಸಹಾಯಕನ ನಿವಾಸದಲ್ಲಿ 2 ಎಕೆ-47, 60 ಬುಲೆಟ್‌ ವಶಕ್ಕೆ..!

ಫೆಡರಲ್ ತನಿಖಾ ಸಂಸ್ಥೆಯು ಜಾರ್ಖಂಡ್, ನೆರೆಯ ಬಿಹಾರ, ತಮಿಳುನಾಡು ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ತನಿಖೆಯ ಭಾಗವಾಗಿ ಸುಮಾರು 17-20 ಆವರಣದಲ್ಲಿ ಶೋಧ ನಡೆಸುತ್ತಿದೆ.
ಪ್ರಕಾಶ್ ಅವರು ಎಕೆ-47 ರೈಫಲ್‌ಗಳನ್ನು ಹೇಗೆ ಪಡೆದರು ಮತ್ತು ಇದಕ್ಕೆ ಭಯೋತ್ಪಾದಕ ಸಂಬಂಧವಿರುವ ಸಾಧ್ಯತೆಯಿದೆ ಎಂದು ತನಿಖೆಯಾಗಬೇಕು ಎಂದು ಮಾಜಿ ಬಿಜೆಪಿ ನಾಯಕ, ಹಾಗೂ ಜಾರ್ಖಂಡ್‌ನ ಸ್ವತಂತ್ರ ಶಾಸಕರಾಗಿರುವ ಸರಯೂ ರಾಯ್ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಈ ಮಧ್ಯೆ, ಜಾರ್ಖಂಡ್ ಸರ್ಕಾರವು ಸೋರೆನ್ ಅವರ ಹೆಸರನ್ನು ಇಡಿ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದ ವ್ಯಕ್ತಿಗೆ ಸಂಬಂಧಿಸಿದ ಸುದ್ದಿ ವರದಿಗಳಿಗಾಗಿ ಕಾನೂನು ಕ್ರಮ ಕೈಗೊಳ್ಳುವ ಮಾಧ್ಯಮ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.

ಕಳೆದ ತಿಂಗಳು, ಅಕ್ರಮ ಗಣಿಗಾರಿಕೆ ಮತ್ತು ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರ್ಖಂಡ್‌ನ ಸಾಹಿಬ್‌ಗಂಜ್, ಬರ್ಹೆತ್, ರಾಜಮಹಲ್, ಮಿರ್ಜಾ ಚೌಕಿ ಮತ್ತು ಬರ್ಹರ್ವಾದಲ್ಲಿನ 19 ಸ್ಥಳಗಳನ್ನು ಒಳಗೊಂಡ ಹೇಮಂತ್‌ ಸೋರೆನ್‌ನ ರಾಜಕೀಯ ಸಹಾಯಕ ಪಂಕಜ್ ಮಿಶ್ರಾ ಮತ್ತು ಅವರ ಸಹಚರರ ಮೇಲೆ ಇಡಿ ದಾಳಿ ನಡೆಸಿತ್ತು. ಮಿಶ್ರಾ ಮತ್ತು ಇತರರ ವಿರುದ್ಧ ಮಾರ್ಚ್‌ನಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ ನಂತರ ತನಿಖಾ ಸಂಸ್ಥೆ ಹುಡುಕಾಟವನ್ನು ಪ್ರಾರಂಭಿಸಿತು. ಹಾಗೂ, ಹೇಮಂತ್‌ ಸೋರೆನ್‌ನ ರಾಜಕೀಯ ಸಹಾಯಕ ಪಂಕಜ್ ಮಿಶ್ರಾ "ಅಕ್ರಮವಾಗಿ ತನ್ನ ಪರವಾಗಿ ಅಪಾರ ಪ್ರಮಾಣದ ಆಸ್ತಿಯನ್ನು ದೋಚಿದ್ದಾರೆ ಅಥವಾ ಸಂಗ್ರಹಿಸಿದ್ದಾರೆ" ಎಂದು ಆರೋಪಿಸಿದರು.

ಐಎಎಸ್‌ ಅಧಿಕಾರಿ ಆಪ್ತೆ ಬಳಿ 25 ಕೋಟಿ ನಗದು!

Follow Us:
Download App:
  • android
  • ios