ಅರುಣಾಚಲ ಪ್ರದೇಶ(ಮೇ.21): ಕೊರೋನಾ ವೈರಸ್ 2ನೇ ಅಲೆ, ತೌಕ್ಟೆ ಚಂಡ ಮಾರುತದಿಂದ ಸಂಪೂರ್ಣ ಭಾರತ ನಲುಗಿ ಹೋಗಿದೆ. ಇದರ ಬೆನ್ನಲ್ಲೇ ಇದೀಗ ಭೂಕಂಪನ ಆಘಾತ ಎದುರಾಗಿದೆ. ಹಿಮಾಚಲ ಪ್ರದೇಶದ ಚಾಂಗ್ಲಾಂಗ್ ವಲಯದಲ್ಲಿ ಭೂಕಂಪ ಸಂಭಿವಿಸಿದೆ.

ಕೊರೋನಾ ಸಂಕಷ್ಟದ ನಡುವೆ ಎದುರಾಗಿದೆ ಇನ್ನೊಂದು ಪ್ರಾಕೃತಿಕ ಸಂಕಷ್ಟ

ಚಾಂಗ್ಲಾಂಗ್‌ನಲ್ಲಿ ನಡೆದ ಭೂಕಂಪನ ರಿಕ್ಟರ್ ಮಾಪಕದಲ್ಲಿ 5.8  ರಷ್ಟು ತೀವ್ರತೆ ದಾಖಲಾಗಿದೆ. ಚಾಂಗ್ಲಾಂಗ್‌ನ ಆಗ್ನೇಯ ದಿಕ್ಕು ಭೂಕಂಪದ ಕೇಂದ್ರ ಬಿಂದುವಾಗಿದೆ ಎಂದು ಭಾರತೀಯ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ. ಮೇಲ್ಮೆಯಿಂದ 100 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ.

ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.18ಕ್ಕೆ ಭೂಕಂಪನವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿದ ವರದಿಗಳಿಲ್ಲ.