ವಿಶ್ವಸಂಸ್ಥೆ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ ಜೈಶಂಕರ್!

*ವಿಶ್ವಸಂಸ್ಥೆ ಭದ್ರತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ಮೋದಿ
*ಮೋದಿ ಬಳಿಕ ಇದೀಗ ಜೈಶಂಕರ್ UNSC ವಿಶೇಷ ಅಧಿವೇಶನದಲ್ಲಿ ಅಧ್ಯಕ್ಷತೆ
*UN ಭದ್ರತಾ ಮಂಡಳಿಯ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಅಧಿವೇಶನ

EAM S Jaishankar to chair United Nations Security Council sessions on terrorism and peacekeeping ckm

ನವದೆಹಲಿ(ಆ.10): ಆಗಸ್ಟ್ ತಿಂಗಳು ಭಾರತದ ಪಾಲಿಗೆ ಅತ್ಯಂತ ಸ್ಮರಣೀಯವಾಗಿದೆ. ಸ್ವಾತಂತ್ರ್ಯ ಸಿಕ್ಕ ಬಳಿಕ ವಿಶ್ವಮಟ್ಟದಲ್ಲಿ ಭಾರತ ತನ್ನದೇ ಚಾಪು ಮೂಡಿಸುತ್ತಿದೆ. ಒಲಿಂಪಿಕ್ಸ್‌ನ ಅಥ್ಲೀಟಿಕ್ಸ್ ವಿಭಾಗದಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದ ಸಾಧನೆಯನ್ನೂ ಮಾಡಿದೆ. ಇನ್ನು ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ.  ಇದೀಗ ಇದೇ ಆಗಸ್ಟ್ ತಿಂಗಳಲ್ಲಿ ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಳಿಕ ಇದೀಗ ಭಾರತದ ವಿದೇಶಾಂಗ ಸಚಿವ ಜೈಶಂಕರ್ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಮೋದಿ ಇತಿಹಾಸ ಸೃಷ್ಟಿ: UNSC ಸಭೆ ನಡೆಸಿದ ಮೊದಲ ಪಿಎಂ!

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲು ಜೈಶಂಕರ್ ಮುಂದಿನ ವಾರ ನ್ಯೂಯಾರ್ಕ್‌ಗೆ ಪ್ರಯಾಣ ಮಾಡಲಿದ್ದಾರೆ. ಆಗಸ್ಟ್ 18 ಮತ್ತು 19ರಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಸಭೆ ನಡೆಯಲಿದ್ದು, ಜೈಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. 

ಆಗಸ್ಟ್ 16 ರಂದು ಜೈಶಂಕರ್ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ. ಎರಡು ಸಭೆಗಳಲ್ಲಿ ಪಾಲ್ಗೊಂಡ ಬಳಿಕ ಜೈಶಂಕರ್ ಭಾರತಕ್ಕೆ ಮರಳಲಿದ್ದಾರೆ. ಬಳಿಕ ಹಲವು ದಿನಗಳಿಂದ ಬಾಕಿ ಉಳಿದಿರುವ ದ್ವಿಪಕ್ಷೀಯ ಭೇಟಿಗಾಗಿ ನ್ಯೂಯಾರ್ಕ್ ಮೂಲಕ ಮೆಕ್ಸಿಕೋ, ಗಯಾನ ಹಾಗೂ ಪನಾಮಾಗೆ ಪ್ರಯಾಣ ಬೆಳೆಸಲಿದ್ದಾರೆ.

ಭಾರತಕ್ಕೆ  1 ತಿಂಗಳು ವಿಶ್ವಸಂಸ್ಥೆ ಭದ್ರತಾ ಸಮಿತಿ ಅಧ್ಯಕ್ಷತೆ!

ಸದ್ಯ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಅತ್ಯಂತ ಅವಶ್ಯಕ ಸಭೆಯಾಗಿದೆ. ಕಾರಣ ಆಫ್ಘಾನಿಸ್ತಾನದಲ್ಲಿ ಹೆಚ್ಚಾಗುತ್ತಿರುವ ತಾಲಿಬಾನ್ ಉಗ್ರರ ಉಪಟಳ, ಹಲವು ದೇಶಗಳು ಎದುರಿಸಿದು ಭಯೋತ್ಪಾದನೆ ಆತಂಕಗಳಿಂದ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆಗಳು ಇದೀಗ ಆಫ್ಘಾನಿಸ್ತಾನ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತನ್ನ ಕೃತ್ಯ ಎಸೆಗುತ್ತಿದೆ.  1986ರಿಂದ ಭಾರತ ಭಯೋತ್ಪಾದನೆ ವಿರುದ್ಧ ಹಾಗೂ ಭಯೋತ್ಪಾದನೆಯನ್ನು ಹತ್ತಿಕ್ಕಲು ಕಠಿಣ ಕ್ರಮದ ಅಗತ್ಯತೆಯನ್ನು ಒತ್ತಿಹೇಳುತ್ತಲೇ ಬಂದಿತ್ತು. ಆದರೆ ಹಲವು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಭಯೋತ್ಪಾದನೆ ಕಲ್ಪನೆಯೆ ಇರಲಿಲ್ಲ. ಇದೀಗ ಬಹುತೇಕ ಎಲ್ಲಾ ರಾಷ್ಟ್ರಗಳು ಒಂದಲ್ಲಾ ಒಂದು ರೀತಿಯಿಂದ ಭಯೋತ್ಪಾದನೆ ದಾಳಿಗೆ ನಲುಗಿದೆ. ಹೀಗಾಗಿ ವಿಶ್ವಸಂಸ್ತೆ ಭದ್ರತಾ ಮಂಡಳಿಯಲ್ಲಿ ನಡೆಯಲಿರುವ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. 

ಕೈ ಮೀರಿ ಹೋಗುತ್ತಿದೆ ಜಾಗತಿಕ ತಾಪಮಾನ: ಹೀಗಾದರೆ ಮನುಕುಲ ಉಳಿಯುವುದೇ ಅನುಮಾನ

ಭಾರ ವಿಶ್ವಸಂಸ್ಥೆಯ ಶಾಂತಿಪಾಲನೆಯಲ್ಲಿ ಅತೀದೊಡ್ಡ ಇತಿಹಾಸ ಹೊಂದಿದೆ. 1950ರಿಂದ ಭಾರತದ ಶಾಂತಿಪಾಲನೆಗಾಗಿ ಹೋರಾಟ ಆರಂಭಗೊಳ್ಳುತ್ತದೆ. ಶಾಂತಿಪಾಲನೆಗಾಗಿ ಭಾರತದ 1,95,000ಕ್ಕೂ ಹೆಚ್ಚು ಸೈನಿಕರು ಕೊಡುಗೆ ನೀಡಿದ್ದಾರೆ. ಇತರರ ದೇಶಗಳಿಗೆ ಹೋಲಿಸಿದರೆ ಗರಿಷ್ಠವಾಗಿದೆ. ಈ ಸೈನಿಕರು 49ಕ್ಕೂ ಹೆಚ್ಚು ಕಾರ್ಯಚರಣೆಗಳಲ್ಲಿ ಭಾಗವಹಿಸಿದ್ದಾರೆ. ಇನ್ನು 168 ಭಾರತೀಯ ಶಾಂತಿಪಾಲಕರು ಸೇವೆ ಸಲ್ಲಿಸುವಾಗ ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಪ್ರಮುಖ ಸೇನಾ ಕಮಾಂಡರ್ ಒದಗಿಸಿದೆ. ಇದೀಗ ಆಯೋಜಿಸಿದ ಸಭೆ ಹೊಸ ಆ್ಯಪ್ಲಿಕೇಶನ್ ಮೂಲಕ ಶಾಂತಿಪಾಲಕರನ್ನು ಕೇಂದ್ರೀಕರಿಸಿ ವಿಶ್ವದಲ್ಲಿ ಶಾಂತಿ ಸಹಬಾಳ್ವೆ ವಾತಾವರಣ ನಿರ್ಮಿಸುವುದಾಗಿದೆ ಎಂದು ವಿಶ್ವಸಂಸ್ಥೆ ರಾಜತಾಂತ್ರಿಕರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಕಡಲ ಭದ್ರತೆ ಹಾಗೂ ವಿವಾದಗಳ ಇತ್ಯರ್ಥ ಕುರಿತು ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ಇದೇ ಮೊದಲ ಬಾರಿಗೆ UNSC ಸಭೆ ಅಧ್ಯಕ್ಷತೆ ವಹಿಸಿದ್ದ ಭಾರತದ ಮೊದಲ ಪ್ರಧಾನಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

ಜಾಗತಿಕ ಸೈಬರ್ ಸೆಕ್ಯೂರಿಟಿ ಸೂಚ್ಯಂಕದಲ್ಲಿ ಭಾರತಕ್ಕೆ 10ನೇ ಸ್ಥಾನ; ಚೀನಾ, ಪಾಕ್‌ಗಿಂತ ಸುರಕ್ಷಿತ!

ಕಡಲ ಅಭದ್ರತೆ, ಸವಾಲು, ಶಾಂತಿ ಕಾಪಾಡಲು ಪರಿಹಾರಿ ಸೂತ್ರದ ಕುರಿತು ಮುಕ್ತ ಚರ್ಚೆ ನಡೆದಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಮೋದಿ ವಹಿಸಿದ್ದರು. ಅಧ್ಯಕ್ಷ ಭಾಷಣ ಮಾಡಿದ್ದ ಮೋದಿ ಐದು ತತ್ವಗಳ ಕುರಿತು ವಿವರಣೆ ನೀಡಿದ್ದಾರೆ. ಸಮುದ್ರ ಮಾರ್ಗದ ಮೂಲಕ ನಡೆಯುವ ವ್ಯಾಪಾರ ವಹಿವಾಟುಗಳಿಗೆ ಇರುವ ತೊಡಕುಗಳನ್ನು ನಿವಾರಿಸುವ, ಕಡಲ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸುವ, ಕಡಲ ಸಂಪರ್ಕ, ಕಡಲ ಭಯೋತ್ಪಾದನೆ ಎದುರಿಸಲು ಒಗ್ಗಟ್ಟಿನ ಹೋರಾಟ, ಪ್ರಾಕೃತಿಕ ವಿಕೋಪಕ್ಕೆ ನೆರವು ಸೇರಿದಂತೆ ಕಡಲ ಸಂಪನ್ಮೂಲಗಳ ರಕ್ಷಣೆ ಕುರಿತು ಪ್ರಧಾನಿ ಮಹತ್ವದ ತತ್ವ ಮುಂದಿಟ್ಟಿದ್ದಾರೆ. 

Latest Videos
Follow Us:
Download App:
  • android
  • ios