Asianet Suvarna News Asianet Suvarna News

ಭಾರತಕ್ಕೆ ಇಂದಿನಿಂದ 1 ತಿಂಗಳು ವಿಶ್ವಸಂಸ್ಥೆ ಭದ್ರತಾ ಸಮಿತಿ ಅಧ್ಯಕ್ಷತೆ!

* ಭಾರತಕ್ಕೆ ಇಂದಿನಿಂದ 1 ತಿಂಗಳು ವಿಶ್ವಸಂಸ್ಥೆ ಭದ್ರತಾ ಸಮಿತಿ ಅಧ್ಯಕ್ಷತೆ

* 8ನೇ ಬಾರಿಗೆ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭಾರತ

* 2 ವರ್ಷದ ಈ ಅವಧಿಯಲ್ಲಿ ಭಾರತಕ್ಕೆ ಎರಡು ಬಾರಿ ಅಧ್ಯಕ್ಷ ಸ್ಥಾನ

* 2021ರ ಆಗಸ್ಟ್‌ ಮತ್ತು 2022ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಅಧ್ಯಕ್ಷ ಸ್ಥಾನ

India to take over as President of UNSC on August 1 pod
Author
Bangalore, First Published Aug 1, 2021, 10:34 AM IST

ನವದೆಹಲಿ(ಆ.01): ಜನವರಿ 1, 2021ರಿಂದ ಡಿಸೆಂಬರ್‌ 31, 2022ರವರೆಗೆ ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಈ ಎರಡು ವರ್ಷದ ಈ ಸದಸ್ಯತ್ವದ ಅವಧಿಯಲ್ಲಿ ಮೊದಲ ಬಾರಿಗೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಭಾರತ ಆ.1 ರಿಂದ ಒಂದು ತಿಂಗಳ ಕಾಲ ವಹಿಸಿಕೊಳ್ಳಲಿದೆ. 2022ರ ಡಿಸೆಂಬರ್‌ನಲ್ಲಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಭಾರತಕ್ಕೆ ದೊರೆಯಲಿದೆ.

‘ಭಾರತದ ದೇಶವು ತನ್ನ 75ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಸಮಯದಲ್ಲೇ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಬಹಳ ಹೆಮ್ಮೆ ತಂದಿದೆ. ಭಾರತವು ಎಂದಿನಂತೆ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದೆನಯ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್‌. ತಿರುಮೂರ್ತಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಸದಸ್ಯತ್ವದ ಈ ಅವಧಿಯಲ್ಲಿ ಆ.2ರಂದು ಮೊದಲ ಬಾರಿಗೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾರತದ ನಿಲುವುಗಳ ಕುರಿತು ಟಿ.ಎಸ್‌.ತಿರುಮೂರ್ತಿ ಅವರು ಭಾಷಣ ಮಾಡಲಿದ್ದಾರೆ.

 

Follow Us:
Download App:
  • android
  • ios