Nupur Sharma ಉಗ್ರರಿಗೆ ತಲೆಬಾಗಬೇಡಿ, ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಡಚ್ ಸಂಸದ!
- ಭಾರಿ ಟೀಕೆ ವಿರೋಧದ ಬೆನ್ನಲ್ಲೇ ನೂಪುರ್ ಶರ್ಮಾಗೆ ಬೆಂಬಲ
- ಸತ್ಯ ಹೇಳಿದ ನೂಪರ್ ಶರ್ಮಾಗೆ ನನ್ನ ಬೆಂಬಲ ಎಂದ ಡಚ್ ಸಂಸದ
- ನೂಪರ್‌ಗೆ ಬೆಂಬಲ ನೀಡಿದ ಸಂಸದನಿಗೆ ಮುಸ್ಲಿಮರಿಂದ ಕೊಲೆ ಬೆದರಿಕೆ
ನವದೆಹಲಿ(ಜೂ.08): ಪ್ರವಾದಿ ಮೊಹಮ್ಮದ್ ನಿಂದನೆ ಮಾಡಿದ ಆರೋಪ ಹೊತ್ತಿರುವ ಬಿಜೆಪಿಯಿಂದ ಅಮಾನತುಗೊಂಡಿರುವ ನಾಯಕಿ ನೂಪರ್ ಶರ್ಮಾ ವಿರುದ್ಧ ಟೀಕೆ, ಆಕ್ರೋಶ ಹೆಚ್ಚಾಗುತ್ತಿದೆ. ಅರಬ್ ರಾಷ್ಟ್ರಗಳು ಇದೇ ವಿಚಾರ ಮುಂದಿಟ್ಟು ಭಾರತದ ವಿರುದ್ಧ ಕೆಂಡ ಕಾರುತ್ತಿದೆ. ಇದರ ನಡುವೆ ನೂಪುರ್ ಶರ್ಮಾಗೆ ಡಚ್ ಸಂಸದ ಗ್ರೀಟ್ ವಿಲ್ಡರ್ಸ್ ಸಂಪೂರ್ಣ ಬೆಂಬಲ ನೀಡಿದ್ದಾರೆ. ಸತ್ಯ ಹೇಳಿರುವ ನೂಪರ್ ಶರ್ಮಾಗೆ ನನ್ನ ಬೆಂಬಲ ಎಂದಿದ್ದಾರೆ. ಇಷ್ಟೇ ಅಲ್ಲ ಭಾರತೀಯರು ನೂಪುರ್ ಶರ್ಮಾಗೆ ಬೆಂಬಲ ನೀಡಿ, ಆದರೆ ಉಗ್ರರಿಗೆ ತಲೆಬಾಗಬೇಡಿ ಎಂದು ಕಿವಿ ಮಾತು ನೀಡಿದ್ದಾರೆ.
ನೂಪುರ್ ಶರ್ಮಾ ವಿವಾದಿತ ಹೇಳಿಕೆಯಿಂದ ಭಾರತದಲ್ಲಿ ಹಿಂಸಾಚಾರವೇ ನಡೆದು ಹೋಗಿದೆ. ಅರಬ್ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಮೇಲೆ ಮುಗಿಬಿದ್ದಿವೆ. ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆಯಾಗಲಿದೆ ಅನ್ನೋ ಆತಂಕವನ್ನೂ ವ್ಯಕ್ತಪಡಿಸಿದೆ. ಆದರೆ ಡಚ್ ಸಂಸದ ಗ್ರೀಟ್ ವಿಲ್ಡರ್ಸ್, ನೂಪರ್ ಶರ್ಮಾಗೆ ಸಪೂರ್ಟ್ ನೀಡಿದ್ದಾರೆ. ಟ್ವೀಟ್ ಮೂಲಕ ಬೆಂಬಲ ಸೂಚಿಸಿರುವ ಗ್ರೀಟ್, ನನಗೆ ಕೊಲೆ ಬೆದರಿಕೆ ಇದೆ ಎಂದಿದ್ದಾರೆ.
ಪ್ರವಾದಿ ಅವಹೇಳನ: ನೂಪುರ್ ಶರ್ಮಾಗೆ ಉಗ್ರರಿಂದ ಬೆದರಿಕೆ!
ನೂಪುರ್ ಶರ್ಮಾಗೆ ಬೆಂಬಲ ನೀಡಿದ ಕಾರಣಕ್ಕೆ ನನಗೆ ಹಲವು ಮುಸ್ಲಿಮರು ಕೊಲೆ ಬೆದರಿಕೆ ಹಾಕಿದ್ದಾರೆ. ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಹಾಗೂ ಆಯಿಷಾ ಕುರಿತು ಸತ್ಯವನ್ನು ಹೇಳಿದ್ದಾರೆ. ನನಗೆ ಬೆದರಿಕೆ ಹಾಕಿರುವವರಿಗೆ ನನ್ನ ಸಂದೇಶ ನರಕ್ಕೆ ಹೋಗಿ, ನಿಮಗೆ ಯಾವ ನೈತಿಕತೆಯೂ ಇಲ್ಲ. ನಾವು ಸತ್ಯದ ಪರವಾಗಿ ನಿಲ್ಲಬೇಕು, ನಾವು ಸ್ವಾತಂತ್ರ್ಯದ ಪರವಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಗ್ರೀಟ್ ವಿಲ್ಡರ್ಸ್, ಭಾರತೀಯರು ಪ್ರವಾದಿ ಕುರಿತು ಸತ್ಯ ಹೇಳಿರುವ ನೂಪುರ್ ಶರ್ಮಾ ಬೆಂಬಲಿಸಬೇಕು. ಇದರ ಬದಲು ನಿಮ್ಮ ದೇಶವನ್ನು ಇಸ್ಲಾಮಿಕ್ ಉಗ್ರಗಾಮಿ ಅಲ್ ಖೈದಾ ಸೇರಿದಂತೆ ಉಗ್ರ ಸಂಘಟನೆಗಳ ಕೈಗೆ ನೀಡಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.
ಅಲ್ ಖೈದಾ, ತಾಲಿಬಾನ್ ವರ್ಷದ ಹಿಂದೆ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಅವರ ಹಿಟ್ ಲಿಸ್ಟ್‌ನಲ್ಲಿ ನನ್ನ ಹೆಸರು ಇದೆ. ಆದರೆ ನಿಮ್ಮಲ್ಲರಲ್ಲಿ ನನ್ನ ವಿನಂತಿ ಎನಂದರೇ ಉಗ್ರರಿಗೆ ತಲೆಬಾಗಬೇಡಿ ಎಂದು ಗ್ರೀಟ್ ಹೇಳಿದ್ದಾರೆ.
ನೂಪರ್ ಶರ್ಮಾ ಹೇಳಿಕೆ ಕುರಿತು ಅಲ್ ಖೈದ ಉಗ್ರ ಸಂಘಟನೆ ಭಾರತಕ್ಕೆ ಬೆದರಿಕೆ ಹಾಕಿದೆ. ಭಾರತದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ಸೂಚಿಸಿದೆ. ದೆಹಲಿ, ಮುಂಬೈ, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಹಲವು ಭಾಗಗಲ್ಲಿ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ.
ಧಾರ್ಮಿಕ ಸ್ವಾತಂತ್ರ್ಯದ ಕುರಿತು ಭಾರತಕ್ಕೆ ಪಾಠ ಮಾಡಿದ ತಾಲಿಬಾನ್!
ಪ್ರವಾದಿ ನಿಂದನೆ: ಮತ್ತಷ್ಟುದೇಶಗಳಿಂದ ಖಂಡನೆ
ಟೀವಿ ಚರ್ಚೆ ವೇಳೆ ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಹೇಳಿದ್ದಾರೆ ಎನ್ನಲಾದ ಅವಹೇಳನಕಾರಿ ಮಾತುಗಳನ್ನು ಇರಾಕ್, ಲಿಬಿಯಾ, ಮಲೇಷ್ಯಾ, ಟರ್ಕಿ ದೇಶಗಳು ಟೀಕಿಸಿವೆ. ಮತ್ತೊಂದೆಡೆ ವಿಶ್ವಸಂಸ್ಥೆ ಕೂಡಾ ನಾವು ಧರ್ಮ ಸಹಿಷ್ಣುತೆಯನ್ನು ಬಲವಾಗಿ ಬೆಂಬಲಿಸುತ್ತೇವೆ ಎನ್ನುವ ಮೂಲಕ ಪ್ರವಾದಿ ಮೊಹಮ್ಮದ್ ಕುರಿತ ಹೇಳಿಕೆ ಖಂಡಿಸಿದೆ.
‘ಪ್ರವಾದಿ ನಿಂದನೆಯ ಹೇಳಿಕೆ ದುರುದ್ದೇಶಪೂರ್ವಕ ಮತ್ತು ಅಪಮಾನಕರವಾಗಿದೆ. ಇಂತಹವುಗಳನ್ನು ನಿಗ್ರಹಿಸದಿದ್ದರೆ ಪರಿಣಾಮ ಗಂಭೀರವಾಗಿರಲಿದೆ ಎಂದು ಇರಾಕ್ ಹೇಳಿದೆ. ಇನ್ನು, ಇಂಥ ಹೇಳಿಕೆ ಅಪಮಾನಕರ ಎಂದು ಲಿಬಿಯಾ ಪ್ರತಿಕ್ರಿಯಿಸಿದೆ. ಮಲೇಷ್ಯಾದ ದೇಶಾಂಗ ಸಚಿವಾಲಯ ಸಹ ಈ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದು, ಭಾರತೀಯ ರಾಯಭಾರಿಗೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ನಾಯಕರನ್ನು ಅಮಾನತು ಮಾಡಿರುವ ಕ್ರಮವನ್ನು ಸ್ವಾಗತಿಸಿದೆ.