Asianet Suvarna News Asianet Suvarna News

ಧಾರ್ಮಿಕ ಸ್ವಾತಂತ್ರ್ಯದ ಕುರಿತು ಭಾರತಕ್ಕೆ ಪಾಠ ಮಾಡಿದ ತಾಲಿಬಾನ್!

ಗ್ಯಾನವಾಪಿ ಶಿವಲಿಂಗದ ಕುರಿತಾಗಿ ನಡೆದ ಚರ್ಚೆಯ ವೇಳೆ ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ಟಿವಿ ಮಾಧ್ಯಮದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮ ವಿರುದ್ಧ ಪಕ್ಷ ಕ್ರಮ ಕೈಗೊಂಡಿದೆ. ಆದರೆ ಮುಸ್ಲಿಂ ರಾಷ್ಟ್ರಗಳು ಈ ಕುರಿತಾಗಿ ಭಾರತದ ವಿರುದ್ಧ ಮುಗಿಬಿದ್ದಿದೆ. ಅಂದಾಜು 15 ರಾಷ್ಟ್ರಗಳು ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ನಡುವೆ, ಅಫ್ಘಾನಿಸ್ತಾನದ ತಾಲಿಬಾನ್ ಕೂಡ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದೆ.
 

Comment on Prophet Controversy Now Taliban gave lecture to India on fundamentalism said do not let holy Islam be insulted san
Author
Bengaluru, First Published Jun 7, 2022, 6:44 PM IST

ನವದೆಹಲಿ (ಜೂನ್ 7): ಪ್ರವಾದಿ ಮೊಹಮ್ಮದ್ ಪೈಗಂಬರ್ (Prophet Mohammad) ವಿರುದ್ಧ ಬಿಜೆಪಿಯ (BJP) ಮಾಜಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರ ಆಕ್ಷೇಪಾರ್ಹ ಹೇಳಿಕೆಯಿಂದ ಉದ್ಭವಿಸಿದ ವಿವಾದ 15 ದೇಶಗಳಿಗೆ ತಲುಪಿದೆ. ಇತ್ತೀಚೆಗೆ, ಅಫ್ಘಾನಿಸ್ತಾನದ (Afghanistan) ಆಡಳಿತಾರೂಢ ತಾಲಿಬಾನ್ (Taliban) ಕೂಡ ನೂಪುರ್ ಶರ್ಮಾ ಅವರ ಹೇಳಿಕೆಗಳ ಕುರಿತು ಭಾರತಕ್ಕೆ ಮೂಲಭೂತೀಕರಣದ (radicalization )  ಕುರಿತು ಉಪನ್ಯಾಸವನ್ನು ನೀಡಿದೆ.

ಬಿಜೆಪಿಯ ಮಾಜಿ ವಕ್ತಾರೆಯ ಹೇಳಿಕೆಯನ್ನು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ( Zabihullah Mujahid ) ಖಂಡಿಸಿದ್ದು, "ಇಸ್ಲಾಂನ ಪವಿತ್ರ ಧರ್ಮವನ್ನು ಅವಮಾನಿಸಲು ಮತ್ತು ಮುಸ್ಲಿಮರ ಭಾವನೆಗಳನ್ನು ಕೆರಳಿಸಲು ಇಂತಹ ಮೂಲಭೂತವಾದಿಗಳಿಗೆ ಅವಕಾಶ ನೀಡದಂತೆ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದು ಹೇಳಿದ್ದಾರೆ. "ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನವು ಭಾರತದಲ್ಲಿನ ಆಡಳಿತ ಪಕ್ಷದ ಪದಾಧಿಕಾರಿಯಿಂದ ಇಸ್ಲಾಂನ ಪ್ರವಾದಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುವುದನ್ನು ಬಲವಾಗಿ ವಿರೋಧಿಸುತ್ತದೆ." ಎಂದು ಮುಜಾಹಿದ್ ಹೇಳಿದ್ದಾರೆ.

ಸದ್ಯಕ್ಕೆ, ಇರಾನ್, ಇರಾಕ್, ಕುವೈತ್, ಕತಾರ್, ಸೌದಿ ಅರೇಬಿಯಾ, ಓಮನ್, ಯುಎಇ, ಜೋರ್ಡಾನ್, ಅಫ್ಘಾನಿಸ್ತಾನ, ಪಾಕಿಸ್ತಾನ, ಬಹ್ರೇನ್, ಮಾಲ್ಡೀವ್ಸ್, ಲಿಬಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ 14 ದೇಶಗಳು ಟೀಕೆಗಳನ್ನು ತಿರಸ್ಕರಿಸಿ ಖಂಡನೆ ವ್ಯಕ್ತಪಡಿಸಿವೆ.
 


ಹೊಸದಾಗಿ ಚುನಾಯಿತರಾದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಹೇಳಿಕೆಗಳನ್ನು ಖಂಡಿಸಿದ್ದು, "ನಮ್ಮ ಪ್ರೀತಿಯ ಪ್ರವಾದಿ ಬಗ್ಗೆ ಭಾರತದ ಬಿಜೆಪಿ ನಾಯಕರ ನೋವುಂಟುಮಾಡುವ ಕಾಮೆಂಟ್‌ಗಳನ್ನು ನಾನು ಪ್ರಬಲ ಪದಗಳಲ್ಲಿ ಖಂಡಿಸುತ್ತೇನೆ. ಮೋದಿ ನೇತೃತ್ವದಲ್ಲಿ ಭಾರತವು ಧಾರ್ಮಿಕ ಸ್ವಾತಂತ್ರ್ಯಗಳನ್ನು ತುಳಿಯುತ್ತಿದೆ ಮತ್ತು ಮುಸ್ಲಿಮರನ್ನು ಹಿಂಸಿಸುತ್ತಿದೆ ಎಂದು ಪದೇ ಪದೇ ಹೇಳಿದ್ದೇನೆ. . ಜಗತ್ತು ಭಾರತವನ್ನು ಗಮನಿಸಬೇಕು ಮತ್ತು ತೀವ್ರವಾಗಿ ಖಂಡಿಸಬೇಕು. ಪವಿತ್ರ ಪ್ರವಾದಿ ಮೇಲಿನ ನಮ್ಮ ಪ್ರೀತಿ ಸರ್ವೋಚ್ಚವಾಗಿದೆ. ಎಲ್ಲಾ ಮುಸ್ಲಿಮರು ತಮ್ಮ ಪವಿತ್ರ ಪ್ರವಾದಿ ಪ್ರೀತಿ ಮತ್ತು ಗೌರವಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಬೇಕು' ಎಂದು ಹೇಳಿದ್ದರು.

ವಿವಾದಾತ್ಮಕ ಹೇಳಿಕೆಯ ನಂತರ ಬಿಜೆಪಿ ಭಾನುವಾರ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತುಗೊಳಿಸಿದೆ. ಪಕ್ಷವು ತನ್ನ ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಉಚ್ಚಾಟಿಸಿದೆ. ಈ ನಾಯಕರ ಅವಹೇಳನಕಾರಿ ಹೇಳಿಕೆಗಳು ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.

ತಾಲಿಬಾನ್‌ ಜತೆ ಭಾರತೀಯ ಅಧಿಕಾರಿಗಳ ಮೊದಲ ಭೇಟಿ!

ಈ ನಡುವೆ ದೆಹಲಿ ಪೊಲೀಸರು ನೂಪುರ್ ಶರ್ಮಾ ಮತ್ತು ಅವರ ಕುಟುಂಬಕ್ಕೆ ಭದ್ರತೆ ಒದಗಿಸಿದ್ದಾರೆ. ನೂಪುರ್ ಅವರು ಪ್ರವಾದಿ ವಿರುದ್ಧದ ಹೇಳಿಕೆಗಳಿಂದ ಜೀವ ಬೆದರಿಕೆ ಕರೆಯನ್ನು ಎದುರಿಸಿದ್ದರು. ಅದರ ವಿರುದ್ಧ ಅವರು ಪೊಲೀಸ್ ಠಾಣೆಗೆ ದೂರು ನೀಡಿ ರಕ್ಷಣೆ ಕೋರಿದ್ದರು. ಈ ಎಫ್‌ಐಆರ್‌ ಆಧಾರದ ಮೇಲೆ ಪೊಲೀಸರು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಭದ್ರತೆ ಒದಗಿಸಿದ್ದಾರೆ. ನೂಪುರ್ ಶರ್ಮಾ ಅವರು ತಮಗೆ ಬರುತ್ತಿರುವ ನಿರಂತರ ಬೆದರಿಕೆಗಳ ಬಗ್ಗೆ ದೂರು ನೀಡಿದ್ದಾರೆ ಎಂದು ದೆಹಲಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದಾದ ಬಳಿಕ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ. ಈ ನಡುವೆ ನೂಪುರ್ ಶರ್ಮ ತಾವು ಹೇಳಿದ್ದ ಹೇಳಿಕೆಗಳ ಕುರಿತಾಗಿ 10 ದಿನಗಳ ಹಿಂದೆಯೇ ಕ್ಷಮೆಯಾಚಿಸಿದ್ದಾರೆ.

ಈಗಲೂ ಆಫ್ಘನ್‌ನಲ್ಲಿ ಪಾಕ್‌ ಉಗ್ರ ಸಂಘಟನೆಗಳ ತರಬೇತಿ

ಭಾರತೀಯ ಉತ್ಪನ್ನಗಳಿಗೆ ಬಹಿಷ್ಕಾರ: ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ತೀವ್ರ ಸ್ವರೂಪ ಪಡೆದ ತಕ್ಷಣ ಹಲವು ದೇಶಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಕೇಳಿಬಂದಿತ್ತು. ವರದಿಗಳ ಪ್ರಕಾರ, ಕುವೈತ್‌ನಲ್ಲಿ ಭಾರತೀಯ ಉತ್ಪನ್ನಗಳನ್ನು ಅಂಗಡಿಗಳಿಂದ ಹೊರತೆಗೆಯಲಾಗಿದೆ. ಭಾರತ ಸರ್ಕಾರವು ಈ ಸಮಸ್ಯೆಯನ್ನು ತಕ್ಷಣವೇ ಅರಿತುಕೊಂಡಿತು, ಅದರ ನಂತರ ಬಿಜೆಪಿ ಕ್ರಮ ಕೈಗೊಂಡಿತು ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿತು.

 

Follow Us:
Download App:
  • android
  • ios