MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಮುಸ್ಲಿಂ ರಾಷ್ಟ್ರ ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನದ ಅತ್ಯಾಕರ್ಷಕ ಒಳಾಂಗಣ ಚಿತ್ರಗಳು!

ಮುಸ್ಲಿಂ ರಾಷ್ಟ್ರ ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನದ ಅತ್ಯಾಕರ್ಷಕ ಒಳಾಂಗಣ ಚಿತ್ರಗಳು!

ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟನೆ ಮಾಡಲಿರುವ ಅಬುಧಾಬಿಯ ಮೊಟ್ಟಮೊದಲ ಹಿಂದೂ ದೇವಸ್ಥಾನದ ಅತ್ಯಾಕರ್ಷಕ ಒಳಾಂಗಣ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

2 Min read
Author : Santosh Naik
Published : Feb 12 2024, 05:58 PM IST
Share this Photo Gallery
  • FB
  • TW
  • Linkdin
  • Whatsapp
113

ಮುಸ್ಲಿಂ ಬಾಹುಳ್ಯ ಯುಎಇಯ ಅಬುಧಾಬಿಯಲ್ಲಿ ಅಂದಾಜು 700 ಕೋಟಿ ರೂಪಾಯಿ ವೆಚ್ಚದಲ್ಲಿ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ (BAPS) ನಿರ್ಮಾಣ ಮಾಡಿರುವ ಮಂದಿರ ಬುಧವಾರ ಲೋಕಾರ್ಪಣೆಗೊಳ್ಳಲಿದೆ.

213

ಬೃಹತ್‌ ಪ್ರಮಾಣದಲ್ಲಿ ನಿರ್ಮಾಣವಾಗಿರುವ ಮಂದಿರ 108 ಓಈಟ್‌ ಎತ್ತರವಾಗಿದ್ದು, ಅಬುಧಾಬಿಯ ಕೊಂಚ ಹೊರ ಆವರಣದಲ್ಲಿರುವ ರಾಜಧಾನಿ ಅಬು ಮುರಿಯಾಖಾ ಪ್ರದೇಶದನ್ಲಲಿ ನಿರ್ಮಾಣವಾಗಿದೆ.

313

ಯುನೈಟೆಡ್‌ ಅರಬ್‌ ಒಕ್ಕೂಟದ ಮೊದಲ ಕಲ್ಲಿನ ದೇವಸ್ಥಾನ ಇದಾಗಿದದಯ, ಪೂರ್ಣ ಏಷ್ಯಾದ ಅತೀದೊಡ್ಡ ಹಾಗೂ ಭಾರತದ ಹೊರಗಿನ ಅತಿದೊಡ್ಡ ದೇವಸ್ಥಾನ ಎನ್ನುವ ಕೀರ್ತಿಗೆ ಭಾಜನವಾಗಿದೆ.

413

ಬಾಪ್ಸ್‌ ಸ್ವಾಮಿನಾರಾಯಣ ಸಂಸ್ಥೆಯ ಪ್ರಸ್ತುತ ಆಧ್ಯಾತ್ಮಿಕ ಗುರು ಮಹಂತ್ ಸ್ವಾಮಿ ಮಹಾರಾಜ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 14 ರಂದು ಬಹುನಿರೀಕ್ಷಿತ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

513

ಫೆಬ್ರವರಿ 18 ರಿಂದ ಭಕ್ತಾದಿಗಳು ಈ ಮಂದಿರದ ಬೇಟಿಗೆ ನೋಂದಾಯಿಸಿಕೊಳ್ಳಲು ಆರಂಭ ಮಾಡಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

613


ಸಂಕೀರ್ಣವಾದ ಕೆತ್ತಿದ ಕಲಾಕೃತಿಗಳ ವಾಸ್ತುಶಿಲ್ಪದ ಅದ್ಭುತ ಮತ್ತು ಆಕರ್ಷಕ ಕಥೆಗಳ ಸಮೃದ್ಧವಾಗಿದೆ, ಇದು ಪ್ರಶಾಂತತೆಯ ಆಧ್ಯಾತ್ಮಿಕ ಧಾಮ ಎಂದು ಹೊಗಳಿಸಿಕೊಂಡಿದೆ.

713

ರಾಷ್ಟ್ರದ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಒದಗಿಸಿದ 27 ಎಕರೆ ಭೂಮಿಯಲ್ಲಿ ನೆಲೆನಿಂತ ಈ ದೇವಾಲಯವು ಎರಡು ಅದ್ಭುತವಾದ ಗುಮ್ಮಟಗಳು ಮತ್ತು ಪ್ರತಿ ಎಮಿರೇಟ್ಸ್‌ನ ಪ್ರತಿನಿಧಿ ಎನ್ನುವಂತೆ ಏಳು ಗೋಪುರಗಳನ್ನು ಹೊಂದಿರುವ ಸುಂದರವಾದ ರಚನೆಯಾಗಿದೆ.

813

ದುಬೈ-ಅಬುಧಾಬಿ ಹೆದ್ದಾರಿಯಿಂದ ಅಬು ಮುರೇಖಾದಲ್ಲಿರುವ ಸಾಂಸ್ಕೃತಿಕ ಗ್ರಾಮಕ್ಕೆ ರಸ್ತೆ ಮಾರ್ಗದಲ್ಲಿ ಹೋಗುವಾಗ ದೂರದಿಂದಲೂ ಗೋಪುರಗಳನ್ನು ವೀಕ್ಷಿಸಬಹುದು. 

913

ಅನೇಕ ಸ್ವಯಂಸೇವಕರು ದೇವಸ್ಥಾನದ ಕಾರ್ಯವಿಧಾನಕ್ಕೆ ಸಹಾಯ ಮಾಡುತ್ತಿದ್ದಾರೆ, ಆದರೆ 100 ಕ್ಕೂ ಹೆಚ್ಚು ಉದ್ಯೋಗಿಗಳು ಪ್ರಸ್ತುತ ಭವ್ಯವಾದ ದೇವಾಲಯದ ನಿರ್ಮಾಣಕ್ಕೆ ಅಂತಿಮ ಸ್ಪರ್ಶವನ್ನು ನೀಡುತ್ತಿದ್ದಾರೆ.

1013

ಭಾರತೀಯ ಕುಶಲಕರ್ಮಿಗಳಿಂದ ರಚಿಸಲ್ಪಟ್ಟ ಗುಲಾಬಿ ಮರಳುಗಲ್ಲಿನ ಕಟ್ಟಡವು ಹಿಂದೂ ಧರ್ಮವನ್ನು ಮಾತ್ರವಲ್ಲದೆ ಎಲ್ಲಾ ಧರ್ಮಗಳು ಮತ್ತು ನಾಗರಿಕತೆಗಳ ಪ್ರಾತಿನಿಧ್ಯವನ್ನು ಪ್ರದರ್ಶಿಸುತ್ತದೆ.

1113

1997 ರಲ್ಲಿ ಶಾರ್ಜಾ ಮರುಭೂಮಿಯ ನಡುವೆ ಅಬುಧಾಬಿಯಲ್ಲಿ ದೇವಾಲಯವನ್ನು ನಿರ್ಮಿಸಲು ತೀರ್ಮಾನ ಮಾಡಿದ್ದ ಸಂಸ್ಥಾದ ದಿವಂಗತ ಆಧ್ಯಾತ್ಮಿಕ ನಾಯಕರಾದ ಅವರ ಪವಿತ್ರ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಸ್ಮಾರಕವಾಗಿ ಇದನ್ನು ಕಟ್ಟಲಾಗಿದೆ. 

1213

ಪವಿತ್ರ ಭಾರತೀಯ ನದಿಗಳಾದ ಸರಸ್ವತಿ, ಯಮುನಾ ಮತ್ತು ಗಂಗಾ ಮೂಲವನ್ನು ಸಂಕೇತಿಸುವ ಸುಂದರವಾದ ವಾಟರ್‌ಫಾಲ್‌  ಜೆಕ್ ಗಣರಾಜ್ಯದಿಂದ ಆಮದು ಮಾಡಿಕೊಂಡ ಆರು ಮರಗಳಿಂದ ನಿರ್ಮಾಣ ಮಾಡಿದ್ದಾಗಿದೆ.

1313

ಈ ದೇವಾಲಯವು ಅರೇಬಿಯಾ, ಈಜಿಪ್ಟ್, ಮೆಸೊಪಟ್ಯಾಮಿಯಾ, ಅಜ್ಟೆಕ್ ಮತ್ತು ಭಾರತದ ನಾಗರಿಕತೆಗಳಿಂದ ಪಡೆದ ಪ್ರಮುಖ ಕಥೆಗಳ ಕೆತ್ತನೆಯ ನಿರೂಪಣೆಗಳನ್ನು ಒಳಗೊಂಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಅಬುಧಾಬಿ
ನರೇಂದ್ರ ಮೋದಿ
ಸಂಯುಕ್ತ ಅರಬ್ ಎಮಿರೇಟ್ಸ್

Latest Videos
Recommended Stories
Recommended image1
ರೈಲಿನಲ್ಲಿ ಚೆಲ್ಲಿದ್ದ ಚಿಪ್ಸ್‌ನ್ನು ಪುಟ್ಟ ಮಗನ ಕೈಯಲ್ಲೇ ಹೆಕ್ಕಿಸಿ ಆತನಿಗೆ ಮೂಲಭೂತ ಕರ್ತವ್ಯದ ಪಾಠ ಮಾಡಿದ ಅಪ್ಪ
Recommended image2
ಐಷಾರಾಮಿ ಹೋಟೆಲ್‌ಗಿಂತಲೂ ಚಂದ ಈ ರೈಲ್ವೆ ಸ್ಟೇಷನ್ ವಾಸ್ತವ್ಯ! ನೀಲಗಿರಿ ತಪ್ಪಲಿನಲ್ಲಿ 'ರಾಜಮನೆತನದ' ಅನುಭವ!
Recommended image3
Shirtless Protest: ಶರ್ಟ್ ಬಿಚ್ಚಿ ಪ್ರತಿಭಟನೆ: ಇದೊಂದು ನಾಚಿಕೆಗೇಡು, ಕಾಂಗ್ರೆಸ್ ವಿರುದ್ಧ ನಿರ್ಮಲಾ ಗರಂ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved