ಕುಡಿದ ನಶೆಯಲ್ಲಿ ಎಂಎನ್ಎಸ್ ನಾಯಕನ ಪುತ್ರ ಪುಂಡಾಟಿಕೆ ನಡೆಸಿದ್ದಾನೆ. ಮಹಿಳೆ ಕಾರಿಗೆ ಡಿಕ್ಕಿಯಾಗಿ ಬಳಿಕ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈತನ ವಿಡಿಯೋವನ್ನು ಮಹಿಳೆ ಸೆರೆ ಹಿಡಿದಿದ್ದು. ಇದೀಗ ಪ್ರಕರಣ ದಾಖಲಾಗಿದೆ. 

ಮುಂಬೈ (ಜು.07) ಮಹಾಷ್ಟ್ರದಲ್ಲಿ ಹಿಂದಿ ಹಾಗೂ ಮರಾಠಿ ಭಾಷೆಗಳ ವಿವಾದ ಕಿಡಿ ಜೋರಾಗುತ್ತಿದೆ. ಇದೇ ಭಾಷಾ ವಿಚಾರಕ್ಕೆ ರಾಜ್ ಠಾಕ್ರೆ ಹಾಗೂ ಉದ್ಧವ್ ಠಾಕ್ರೆ ಒಂದಾಗಿ ಮರಾಠಿ ಪರ ನಿಲ್ಲುವುದಾಗಿ ಗುಡುಗಿದ್ದಾರೆ. ಇದರ ನಡುವೆ ನಡೆದ ಬೆಳವಣಿಗೆ ಠಾಕ್ರೆ ಹಾಗೂ ವಿರೋಧ ಪಕ್ಷಗಳಿಗೆ ತೀವ್ರ ಹಿನ್ನಡೆ ತಂದಿದೆ. ಮುಂಬೈ ನವ ನಿರ್ಮಾಣ ಸೇನೆ (ಎಂಎನ್ಎಸ್) ಪಕ್ಷದ ನಾಯಕ ಜಾವೇದ್ ಶೇಕ್ ಪುತ್ರ ರಾಹಿಲ್ ಶೇಕ್ ಕಂಠ ಪೂರ್ತಿ ಕುಡಿದು ಪುಂಡಾಟಿಕೆ ನಡೆಸಿದ ವಿಡಿಯೋ ಸೆರೆಯಾಗಿದೆ. ಮಹಿಳಾ ಕಾರಿಗೆ ಡಿಕ್ಕಿ ಹೊಡೆದು ಬಳಿಕ ಮಹಿಳೆ ವಿರುದ್ಧವೇ ಕಿಡಿ ಕಾರಿದ ಘಟನೆ ನಡೆದಿದೆ. ಮರಾಠಿ ಮಾತನಾಡುತ್ತಿರುವ ಮಹಿಳೆ ವಿರುದ್ಧ ಜಾವೇದ್ ಶೇಕ್ ಪುತ್ರನ ಪುಂಡಾಟಿಕೆ ವಿಡಿಯೋ ಇದೀಗ ಭಾರಿ ವಿವಾದ ಸೃಷ್ಟಿಸಿದೆ.

ಮಹಿಳೆಗೆ ಬೆದರಿಕೆ ಹಾಕಿದ ವಿಡಿಯೋ

ಕಂಠಪೂರ್ತಿ ಕುಡಿದ ರಾಹಿಲ್ ಶೇಕ್, ಅರೆ ಬರೆ ಬಟ್ಟೆ ಹಾಕಿ ನಗರದಲ್ಲಿ ಕಾರಿನ ಮೂಲಕ ಸುತ್ತಾಡಿದ್ದಾನೆ. ಕುಡಿದ ನಶೆಯಲ್ಲಿ ರಾಹಿಲ್ ಶೇಕ್, ಮಹಿಳೆಯೊಬ್ಬರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಕಾರು ನಿಲ್ಲಿಸಿ ಮಹಿಳೆ ವಿರುದ್ಧ ರೇಗಾಡಿದ್ದಾನೆ. ಮಹಿಳೆ ಕಾರಿನಿಂದ ಇಳಿದು ವಿಡಿಯೋ ರೆಕಾರ್ಡ್ ಮಾಡಿದ್ದಾಳೆ. ಇಷ್ಟೇ ಅಲ್ಲ ಮರಾಠಿಯಲ್ಲಿ ಮಾತಾಡುತ್ತಿರುವ ಮಹಿಳೆ ವಿರುದ್ಧ ರಾಹಿಲ್ ಶೇಕ್ ತನ್ನ ತಂದೆ ಪಕ್ಷದ ನಾಯಕನ ಎಂದು ಬೆದರಿಕೆ ಹಾಕಿದ್ದಾನೆ.

Scroll to load tweet…

ಎಂಎನ್ಎಸ್ ಪುಂಡಾಟಿಕೆ ಪ್ರಶ್ನಿಸಿದ ಶಿವಸೇನಾ ನಾಯಕ

ಎಂಎನ್ಎಸ್ ನಾಯಕನ ಪುತ್ರನ ಪುಂಡಾಟಿಕೆಯನ್ನು ಶಿವಸೇನಾ ನಾಯಕ ಸಂಜಯ್ ನಿರುಪಮ್ ಪ್ರಶ್ನಿಸಿದ್ದಾರೆ. ಮರಾಠಿ ಮಾತನಾಡು ಮಹಿಳೆ ಕಾರಿಗೆ ಎಂಎನ್ಎಸ್ ನಾಯಕನ ಜಾವೇದ್ ಶೇಕ್ ಪುತ್ರ ಡಿಕ್ಕಿ ಹೊಡೆದು ಬೆದರಿಸಿದ್ದಾನೆ. ತಂದೆಯ ಇನ್‌ಫ್ಲುಯೆನ್ಸ್ ಬಳಸಿ ಮಹಿಳೆಗೆ ಬೆದರಿಸಿದ್ದಾನೆ.ಮರಾಠಿಯನ್ನು ರಕ್ಷಿಸುತ್ತೇವೆ ಎಂದು ಡಂಗುರ ಸಾರಿದವಲರ ನಿಜವಾದ ಮುಖ ಇದು ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ. ಎಂಎನಸ್ ಕಾರ್ಯಕರ್ತರು ಮುಸ್ಲಿಮರ ಒತಡಕ್ಕೆ ಮಣಿದು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರ? ಎಂದು ಸಂಜಯ್ ನಿರುಪಮ್ ಪ್ರಶ್ನಿಸಿದ್ದಾರೆ.

ಪ್ರಕರಣ ದಾಖಲಿಸಿದ ಮುಂಬೈ ಪೊಲೀಸ್

ಪುಂಡಾಟಿಕೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಪಶ್ಚಿಮ ಅಂಧೇರಿಯ ವೀರ ದೇಸಾಯಿ ರಸ್ತೆಯಲ್ಲಿ ನಡೆದಿದೆ. ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದಾರೆ. ಯುವಕನ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ತನಿಖೆ ಆರಂಭಗೊಂಡಿದೆ.

ಎಂಎನ್‌ಎಸ್ ಮಹಾರಾಷ್ಟ್ರದಲ್ಲಿ ಲಾಲು ಪ್ರಸಾದ್ ಬಳಸಿದ ಮುಸ್ಲಿಮ್ ಯಾದವ್ ತಂತ್ರ ಬಳಸುತ್ತಿದೆ. ಇದೀಗ ಎಂಎನ್ಎಸ್ ಮುಸ್ಲಿಮ್ ಮರಾಠಿ ತಂತ್ರ ಬಳಕೆ ಮಾಡುತ್ತಿದೆ. ಎಂಎನ್ಎಸ್ ಹಿಂದೂಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಘಟನೆ ಮುಂಬೈನಲ್ಲಿ ವಿಪಕ್ಷಗಳಿಗೆ ಭಾರಿ ಹಿನ್ನಡೆ ತಂದಿದೆ.