ಪಾಕ್‌ನಿಂದ ಸಾಗಿಸುತ್ತಿದ್ದ ಬರೋಬ್ಬರಿ 12 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಕ್ಕೆ

ಅಷ್ಘಾನಿಸ್ತಾನದಲ್ಲಿ ಉತ್ಪಾದಿಸಿದ್ದ ಡ್ರಗ್ಸ್‌ ಅನ್ನು ಪಾಕಿಸ್ತಾನ-ಇರಾನ್‌ ಸನಿಹದ ಮಕ್ರಾಮ್‌ ಕರಾವಳಿಯಿಂದ ‘ಮದರ್‌ ಶಿಪ್‌’ ಹೆಸರಿನ ಹಡಗಿನಲ್ಲಿ ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ಗೆ ಸಾಗಿಸಲಾಗುತ್ತಿತ್ತು.

drugs worth 12000 crore seized from ship along kerala coast pak man detained ash

ನವದೆಹಲಿ (ಮೇ 14, 2023): ಪಾಕಿಸ್ತಾನದಿಂದ ಪೂರೈಕೆ ಆಗಿದ್ದ ಭಾರಿ ಪ್ರಮಾಣದ ಮಾದಕ ವಸ್ತುವನ್ನು ಪತ್ತೆ ಮಾಡಿರುವ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ, ಕೇರಳದ ಕೊಚ್ಚಿ ಬಂದರಿನಲ್ಲಿ ಶನಿವಾರ 12 ಸಾವಿರ ಕೋಟಿ ರು. ಮೌಲ್ಯದ 2500 ಕೇಜಿ ಡ್ರಗ್ಸ್‌ ಅನ್ನು ವಶಪಡಿಸಿಕೊಂಡಿದೆ ಹಾಗೂ ಪಾಕ್‌ ನಾಗರಿಕನೊಬ್ಬನನ್ನು ಬಂಧಿಸಿದೆ. ಇದು ದೇಶದ ಅತಿ ದೊಡ್ಡ ‘ಮೆಟಂಫೆಟಮಿನ್‌’ ಡ್ರಗ್ಸ್‌ ವಶದ ಪ್ರಕರಣವಾಗಿದೆ ಎಂದು ಹೇಳಿದೆ.

ನೌಕಾಪಡೆ ಜತೆಗೆ ‘ಆಪರೇಶನ್‌ ಸಮುದ್ರಗುಪ್ತ’ ಹೆಸರಿನಲ್ಲಿ ಮಾದಕ ವಸ್ತು ವಿರುದ್ಧ ನಡೆಯುವ ಜಂಟಿ ಕಾರ್ಯಾಚರಣೆ ಮೂಲಕ ಇದರ ಜಪ್ತಿ ಮಾಡಲಾಗಿದೆ. ಇದು 3ನೇ ಅತಿ ಬೃಹತ್‌ ಪ್ರಮಾಣದ ಮಾದಕ ವಸ್ತು ವಶವಾಗಿದೆ ಹಾಗೂ ಒಂದೂವರೆ ವರ್ಷದಲ್ಲಿ ಮೊದಲ ಬಾರಿಯಾಗಿದೆ ಎಂದು ಎನ್‌ಸಿಬಿ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಉತ್ಪಾದಿಸಿದ್ದ ಡ್ರಗ್ಸ್‌ ಅನ್ನು ಪಾಕಿಸ್ತಾನ-ಇರಾನ್‌ ಸನಿಹದ ಮಕ್ರಾಮ್‌ ಕರಾವಳಿಯಿಂದ ‘ಮದರ್‌ ಶಿಪ್‌’ ಹೆಸರಿನ ಹಡಗಿನಲ್ಲಿ ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ಗೆ ಸಾಗಿಸಲಾಗುತ್ತಿತ್ತು. ಈ ಹಡಗಿನ ಮೂಲಕ ಚಿಕ್ಕ ಚಿಕ್ಕ ದೋಣಿಗಳಿಗೆ ಡ್ರಗ್ಸ್‌ ಚೀಲಗಳನ್ನು ಇಳಿಸಿಕೊಂಡು, ಅವುಗಳ ಮೂಲಕ ಆಯಾ ದೇಶಗಳಿಗೆ ಡ್ರಗ್ಸ್‌ ರವಾನಿಸಲಾಗುತ್ತಿತ್ತು’ ಎಂದು ಎನ್‌ಸಿಬಿ ತಿಳಿಸಿದೆ.

ಇದನ್ನು ಓದಿ: ಡ್ರಗ್ಸ್ ಸೇವಿಸಿ, ಅಶ್ಲೀಲ ಚಿತ್ರ ವೀಕ್ಷಿಸಿ 30 ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಕಾಮಪಿಶಾಚಿ!

‘134 ಚೀಲಗಳಷ್ಟು ಮೆಟಂಫೆಟಮಿನ್‌ ಅನ್ನು ವಶಪಡಿಸಿಕೊಂಡು ಒಬ್ಬ ಪಾಕ್‌ ಪ್ರಜೆಯನ್ನು ಜಂಟಿ ಕಾರ್ಯಾಚಣೆಯಲ್ಲಿ ನೌಕಾಪಡೆ ಸಹಾಯದಿಂದ ಬಂಧಿಸಲಾಗಿದೆ. ಇದು ಅತ್ಯಂತ ಶುದ್ಧವಾದ ಡ್ರಗ್ಸ್‌ ಆಗಿದೆ. ವಶಪಡಿಸಿಕೊಳ್ಳಲಾದ ಡ್ರಗ್ಸ್‌ ಪ್ರಮಾಣವನ್ನು ಅಂದಾಜಿಸುವ ಪ್ರಕ್ರಿಯೆ ಇನ್ನೂ ಮುಂದುವರಿದಿದೆ. ಆದರೆ ಅಂದಾಜಿನ ಪ್ರಕಾರ 2500 ಕೆಜಿ ಇದೆ’ ಎಂದು ಎನ್‌ಸಿಬಿ ತಿಳಿಸಿದೆ.

ಒಟ್ಟಾರೆ ಸಮುದ್ರಗುಪ್ತ ಕಾರ್ಯಾಚರಣೆಯಲ್ಲಿ ಈವರೆಗೆ 3200 ಕೇಜಿ ಮೆಟಂಫೆಟಮಿನ್‌, 500 ಕೆಜಿ ಹೆರಾಯಿನ್‌ ಹಾಗೂ 529 ಕೇಜಿ ಹಶೀಷ್‌ ವಶಪಡಿಸಿಕೊಳ್ಳಲಾಗಿದೆ ಎಂದು ಅದು ಮಾಹಿತಿ ನೀಡಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಸದಸ್ಯರಿಗೆ ಡ್ರಗ್ಸ್‌ ನಿರ್ಬಂಧ: ಸಿಡಬ್ಲ್ಯುಸಿಯಲ್ಲಿ ಶೇ. 50 ರಷ್ಟು ಮೀಸಲಿಗೆ ಅಸ್ತು

Latest Videos
Follow Us:
Download App:
  • android
  • ios