ಭಾರತದಲ್ಲಿ ಮಾರಾಟವಾಗುವ ಶೇ.70 ರಷ್ಟುಆ್ಯಂಟಿಬಯೋಟಿಕ್ ನಿಷೇಧಿತ, ಅಧ್ಯಯನ ವರದಿ ಬಹಿರಂಗ!
ಆರೋಗ್ಯ ಹದಗೆಟ್ಟರೆ ಔಷಧಿ ಪಡೆಯದೇ ಬೇರೆ ಮಾರ್ಗವಿಲ್ಲ. ಇದೀಗ ನಾವು ಪಡೆಯುವ ಔಷಧಿ ಕೂಡ ವಿಷ ಅನ್ನೋ ಮಾಹಿತಿ ಬಹಿರಂಗವಾಗಿದೆ. ಭಾರತದಲ್ಲಿ ಮಾರಾಟವಾಗುವ ಶೇಕಡ 70 ರಷ್ಟು ಆ್ಯಂಟಿಬಯೋಟಿಕ್ ಡ್ರಗ್ಸ್ ನಿಷೇಧಿತ ಅಥವಾ ಡ್ರಗ್ಸ್ ಕಂಟ್ರೋಲರ್‌ನಿಂದ ಅನುಮತಿ ಸಿಗದ ಔಷಧಿಗಳು ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ

ನವದೆಹಲಿ(ನ.15) ಕೆಮಿಕಲ್ ತುಂಬಿದ ಆಹಾರ ಪದಾರ್ಥ, ಶುದ್ಧ ಗಾಳಿ, ನೀರಿನ ಕೊರತೆ, ಕೆಟ್ಟ ಜೀವನ ಪದ್ಧತಿಗಳಿಂದ ಮನುಷ್ಯನ ಆರೋಗ್ಯದ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಆರೋಗ್ಯ ಸುಧಾರಿಸಲು ಔಷಧಿ ತೆಗೆದುಕೊಂಡರೆ ಇದೀಗ ಗುಣಮುಖವಾಗುದಕ್ಕಿಂತ ಮತ್ತಷ್ಟು ರೋಗಗಳಿಗೆ ತುತ್ತಾಗುವುದೇ ಜಾಸ್ತಿ. ಕಾರಣ, ಭಾರತದಲ್ಲಿ ಮಾರಾಟವಾಗುತ್ತಿರುವ ಶೇಕಡ 70 ರಷ್ಟು ಆ್ಯಂಟಿಬಯೋಟಿಕ್ ಔಷಧಿಗಳು ನಿಷೇಧಿತ ಅಥವಾ ಅನುಮತಿಯೇ ಪಡೆಯದ ಔಷಧಿ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಆ್ಯಂಟಿಬಯೋಟಿಕ್ ಫಿಕ್ಸೆಡ್ ಡೋಸ್ ಸಂಯೋಜನೆ(FDC) ಔಷಧಿಗಳು ಇದೀಗ ಜನರ ಪ್ರಾಣವನ್ನೇ ಹಿಂಡುತ್ತಿದೆ. ಭಾರತದ ಮಾರುಕಟ್ಟೆಯಲ್ಲಿರುವ ಶೇಕಡ 70 ರಷ್ಟು ಆಂಟಿಬಯೋಟಿಕ್ ಫಿಕ್ಸೆಡ್-ಡೋಸ್ ಕಾಂಬಿನೇಷನ್ ನಿಷೇಧಿತ ಔಷಧಿಗಳು ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ. ಈ ಐಷಧಿಗಳು ಪರಿಣಾಮಕಾರಿಯಲ್ಲ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು ಅನ್ನೋ ಮಾಹಿತಿಯೂ ಬಹಿರಂಗವಾಗಿದೆ.
Rantac - Zinetac, White Petroleum ನಿಷೇಧ: ಅಗತ್ಯ ಔಷಧಿ ಪಟ್ಟಿಯಿಂದ ತೆಗೆದು ಹಾಕಿದ ಕೇಂದ್ರ
2020ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಶೇಕಡಾ 70 ರಷ್ಟು ಆ್ಯಂಟಿಬಯೋಟಿಕ್ ಡೋಸ್ ನಿಷೇಧಿತ ಔಷಧಿಗಳಾಗಿತ್ತು. ಭಾರತ, ಖತಾರ್ ಹಾಗೂ ಲಂಡನ್ ಸಂಶೋಧಕರು ಜಂಟಿಯಾಗಿ ನಡೆಸಿದ FDC ನಿಯಂತ್ರಕ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಈ ಸ್ಫೋಟಕ ಮಾಹಿತಿಯ ಲೇಖನವನ್ನು ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ಪಾಲಿಸಿ ಮತ್ತು ಪ್ರಾಕ್ಟೀಸ್‌ನಲ್ಲಿ ಪ್ರಕಟಿಸಲಾಗಿದೆ.
2008ರಲ್ಲಿ ಭಾರತದಲ್ಲಿ ಆ್ಯಂಟಿಬಯೋಟಿಕ್ ಫಿಕ್ಸೆಡ್ ಡೋಸ್ ಕಾಂಬಿನೇಷನ್ ಮಾರಾಟ ಶೇಕಡಾ 32.9 ರಷ್ಟಿತ್ತು. ಈ ಪ್ರಮಾಣ 2020ರ ವೇಳೆಗೆ 37.3ರಷ್ಟು ಏರಿಕೆಯಾಗಿದೆ. ಇದೇ ವೇಳೆ ನಿಷೇಧಿತ, ಅನುಮತಿ ಸಿಗದೆ ಆ್ಯಂಟಿ ಬಯೋಟಿಕ್ ಔಷಧಿಗಳು ನೇರವಾಗಿ ಜನರ ದೇಹ ಸೇರುತ್ತಿದೆ. ಭಾರತದ ಡ್ರಗ್ಸ್ ಕಂಟ್ರೋಲ್ ಘಟಕ ಇದರ ವಿರುದ್ಧ ಹಲವು ಕಠಿಣ ಕ್ರಮ ಕೈಗೊಂಡಿದೆ. ಆದರೆ ಈ ನಿಷೇಧಿತ ಔಷಧಿಗಳ ಹಾವಳಿ ನಿಂತಿಲ್ಲ ಎಂದು ಲೇಖನದಲ್ಲಿ ಸಂಶೋಧಕರು ಉಲ್ಲೇಖಿಸಿದ್ದಾರೆ.
ಏನೇನೋ ತಿಂದು ಆ್ಯಸಿಡಿಟಿ ಅಂತ ಡೈಜಿನ್ ಕುಡಿಯೋ ಮುನ್ನ, ಓದಿಯೊಮ್ಮೆ
ವಿಶ್ವದಲ್ಲೇ ಅತ್ಯಧಿಕ ಔಷಧಿಗಳ ಉತ್ಪಾದನೆ ಹಾಗೂ ರಫ್ತು ಮಾಡುತ್ತಿರುವ ದೇಶ ಭಾರತ. ಆದರೆ ಇದೇ ಭಾರತದಲ್ಲಿ ಅತೀ ಹೆಚ್ಚಿನ ನಿಷೇಧಿತ, ಅನುಮೋದನೆ ಸಿಗದ ಔಷಧಿಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತಿದೆ. ಈ ಕುರಿತು ಕಠಿಣ ಕ್ರಮದ ಜೊತೆಗೆ ಜಾಗೃತಿಯ ಅವಶ್ಯಕತೆ ಇದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.