Asianet Suvarna News Asianet Suvarna News

Rantac - Zinetac, White Petroleum ನಿಷೇಧ: ಅಗತ್ಯ ಔಷಧಿ ಪಟ್ಟಿಯಿಂದ ತೆಗೆದು ಹಾಕಿದ ಕೇಂದ್ರ

Rantac - Zinetac - White Petroleum Banned: ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಪರಿಷ್ಕೃತ ಅಗತ್ಯ ಔಷಧ ಪಟ್ಟಿಯಿಂದ ಹೊಟ್ಟೆ ಸಂಬಂಧಿತ ಸಮಸ್ಯೆಗೆ ಅತಿ ಹೆಚ್ಚು ಬಳಕೆಯಲ್ಲಿದ್ದ Rantac - Zinetac ಮತ್ತು ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಬಳಸುತ್ತಿದ್ದ ವೈಟ್‌ ಪೆಟ್ರೋಲಿಯಮ್‌ ಅನ್ನು ನಿಷೇಧಿಸಿದೆ.

Rantac Zinetac Vaseline banned in India you can't by these anti acidity tablets anymore
Author
First Published Sep 13, 2022, 5:31 PM IST

ನವದೆಹಲಿ: ಕೇಂದ್ರ ಪರಿಷ್ಕೃತ ಅಗತ್ಯ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಅತಿ ಹೆಚ್ಚು ಬಳಕೆಯಲ್ಲಿರುವ Rantac ಮತ್ತು Zinetac ಮಾತ್ರೆ ಸೇರಿದಂತೆ ಒಟ್ಟೂ 26 ಔಷಧಗಳ ಬಳಕೆ ನಿಷೇಧಿಸಿದೆ. ಇನ್ಮುಂದೆ ಎದೆಯುರಿ, ಗ್ಯಾಸ್ಟಿಕ್‌ಗೆ ಬಳಸುತ್ತಿದ್ದ Rantac ಮತ್ತು Zinetac ಮೆಡಿಕಲ್‌ ಶಾಪ್‌ನಲ್ಲಿ ಲಭ್ಯವಾಗುವುದಿಲ್ಲ. ಇಂದಿನವರೆಗೆ ಎದೆಯುರಿ, ಗ್ಯಾಸ್‌ ಸಮಸ್ಯೆಗೆ Rantidine ಔಷಧಿಯನ್ನು Aciloc, Rantac ಮತ್ತು Zinetac ಎಂಬ ಬ್ರ್ಯಾಂಡ್‌ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹೊಟ್ಟೆ ಸಂಬಂಧಿತ ಸಮಸ್ಯೆಗೆ ಜನ ಹೆಚ್ಚು ಈ ಮಾತ್ರೆಗಳನ್ನು ಸೇವಿಸುತ್ತಿದ್ದರು. ಆದರೆ ಈ ಮಾತ್ರೆಗಳಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಯ ಹಿನ್ನೆಲೆ ಕೇಂದ್ರ ಈ ಕ್ರಮ ಕೈಗೊಂಡಿದೆ. ಹಲವಾರು ದೇಶಗಳಲ್ಲಿ ಈಗಾಗಲೇ ಈ ಮಾತ್ರೆಗಳನ್ನು ನಿಷೇಧಿಸಲಾಗಿದೆ. 

ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ರಾಷ್ಟ್ರೀಯ ಅಗತ್ಯ ಔಷಧಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 384 ಔಷಧಗಳನ್ನು ಅಗತ್ಯ ಔಷಧಿ ಎಂದು ಪರಿಗಣಿಸಿದೆ. 24 ಔಷಧಿಗಳು ಈ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ. 

ನಿಷೇಧಿತ ಔಷಧಗಳ ಪಟ್ಟಿ:
1. Alteplase
2. Atenolol
3. Bleaching Powder
4. Capreomycin
5. Cetrimide
6. Chlorpheniramine
7. Diloxanide furoate
8. Dimercaprol
9. Erythromycin
10. Ethinylestradiol
11. Ethinylestradiol(A) Norethisterone (B)
12. Ganciclovir
13. Kanamycin
14. Lamivudine (A) + Nevirapine (B) + Stavudine (C)
15. Leflunomide
16. Methyldopa
17. Nicotinamide
18. Pegylated interferon alfa 2a, Pegylated interferon alfa 2b
19. Pentamidine
20. Prilocaine (A) + Lignocaine (B)
21. Procarbazine
22. Ranitidine
23. Rifabutin
24. Stavudine (A) + Lamivudine (B) 
25. Sucralfate
26. White Petrolatum

ಇದನ್ನೂ ಓದಿ: ಸರ್ಕಾರದ ವಿರುದ್ಧ ಈಗ ಔಷಧ ಪೂರೈಕೆದಾರರಿಂದ ಲಂಚ ದೂರು

Ranitidine ಔಷಧಿಯ ಅಡ್ಡ ಪರಿಣಾಮಗಳ ಬಗ್ಗೆ ಪ್ರಪಂಚಾದ್ಯಂತ ಆರೋಗ್ಯ ಇಲಾಖೆಗಳು ಚರ್ಚೆ ನಡೆಸುತ್ತಿವೆ. ಈ ಔಷಧ ಸೇವಿಸುವುದರಿಂದ ಕ್ಯಾನ್ಸರ್‌ ಬರುತ್ತದೆ ಎಂಬ ಆರೋಪಗಳಿವೆ. ಇದೇ ಕಾರಣಕ್ಕಾಗಿ ಭಾರತದ ಡ್ರಗ್‌ ಕಂಟ್ರೋಲರ್‌ ಜನರಲ್‌ (Drug Controller General of India) ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (All India Institute of Medical Sciences) Ranitidine ಔಷಧವನ್ನು ನಿಷೇಧಿಸಲು ನಿರ್ಧರಿಸಿದೆ. 

2019ರಿಂದ ಈ ಔಷಧಿಯ ಮೇಲೆ ತನಿಖೆ ನಡೆಯುತ್ತಿದ್ದು, ಮೊದಲ ಬಾರಿಗೆ ಅಮೆರಿಕಾ ಮೂಲದ ಆಹಾರ ಮತ್ತು ಔಷಧ ಆಡಳಿತ Ranitidine ಸೇವನೆಯಿಂದ ಕ್ಯಾನ್ಸರ್‌ ಬರುವ ಸಾಧ್ಯತೆಯ ಬಗ್ಗೆ ಹೇಳಿತ್ತು. ಡ್ರಗ್‌ ರೆಗ್ಯುಲೇಟರ್‌ ಸಂಸ್ಥೆಗೆ Ranitidineನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಹೆಚ್ಚು ಪ್ರಮಾಣದಲ್ಲಿ ಪತ್ತೆಯಾಗಿತ್ತು. ಈ ಎಲ್ಲಾ ಬೆಳವಣಿಗೆಯ ನಂತರ ಕೇಂದ್ರ ಮಹತ್ವದ ನಿರ್ಧಾರ ತಳೆದಿದ್ದು, ನಾಗರಿಕರ ಆರೋಗ್ಯದ ಕುರಿತು ಗಂಭೀರ ನಿರ್ಣಯ ತಳೆದಿದೆ.

ಇದನ್ನೂ ಓದಿ: ಇವುಗಳನ್ನು ತಿಂದ ಬಳಿಕ ಮೆಡಿಸಿನ್ ತೆಗೊಂಡ್ರೆ ಅಪಾಯ !

ವ್ಯಾಸಲೀನ್‌ ಕೂಡ ಸಿಗಲ್ವಾ?:

ಜತೆಗೆ ನಿಷೇಧಿತ ಔಷಧ ಪಟ್ಟಿಯಲ್ಲಿ ವೈಟ್‌ ಪೆಟ್ರೋಲಿಯಮ್‌ ಕೂಡ ಇದ್ದು, ಚಳಿಗಾಲದಲ್ಲಿ ಮುಖ, ತುಟಿ ಒಡೆಯದಂತೆ ತಡೆಯಲು ಬಳಸುವ ವ್ಯಾಸಲಿನ್‌, ಬಯೋಲಿನ್‌ ಸೇರಿದಂತೆ ಇತರ ವೈಟ್‌ ಪೆಟ್ರೋಲಿಯಮ್‌ ಜೆಲ್ಲಿಗಳು ನಿಷೇಧವಾಗಲಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಇದಕ್ಕೆ ಸ್ಪಷ್ಟ ಉತ್ತರ ಸದ್ಯಕ್ಕೆ ಸಿಕ್ಕಿಲ್ಲ. ನಿಷೇಧಿತ ಪಟ್ಟಿಯಲ್ಲಿ ವೈಟ್‌ ಪೆಟ್ರೋಲಿಯಮ್‌ ಹೆಸರಿದೆ, ಆದರೆ ವೈಟ್‌ ಪೆಟ್ರೋಲಿಯಮ್‌ ಜೆಲ್ಲಿ ಎಂದು ನಮೂದಿಸಿಲ್ಲ. 

Follow Us:
Download App:
  • android
  • ios