ಡ್ರಗ್‌ ಕಿಕ್ಕಲ್ಲಿ 22 ವರ್ಷದ ಕಾರು ಚಾಲಕನ ಕಿತಾಪತಿ: ಈಗ ಪೊಲೀಸರ ಅತಿಥಿ

ಮಾದಕ ವಸ್ತುವಿನ ನಶೆಯಲ್ಲಿದ್ದ ವ್ಯಕ್ತಿಯೊಬ್ಬ, ಕಾರು ತಡೆಯಲು ಬಂದ ಪೇದೆಯನ್ನು ಕಾರಿನ ಬಾನೆಟ್‌ ಮೇಲಿರುವ ಸ್ಥಿತಿಯಲ್ಲೇ 10 ಕಿ.ಮೀ ಎಳೆದೊಯ್ದ ಆಘಾತಕಾರಿ ಘಟನೆ ಭಾನುವಾರ ಮುಂಬೈನಲ್ಲಿ ನಡೆದಿದೆ.

drug kick Mumbai Car driver drags cop for 10 km by knocking cop on bonnet akb

ಮುಂಬೈ: ಮಾದಕ ವಸ್ತುವಿನ ನಶೆಯಲ್ಲಿದ್ದ ವ್ಯಕ್ತಿಯೊಬ್ಬ, ಕಾರು ತಡೆಯಲು ಬಂದ ಪೇದೆಯನ್ನು ಕಾರಿನ ಬಾನೆಟ್‌ ಮೇಲಿರುವ ಸ್ಥಿತಿಯಲ್ಲೇ 10 ಕಿ.ಮೀ ಎಳೆದೊಯ್ದ ಆಘಾತಕಾರಿ ಘಟನೆ ಭಾನುವಾರ ಮುಂಬೈನಲ್ಲಿ ನಡೆದಿದೆ. ವಾಶಿ ನಗರದಲ್ಲಿ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೇದೆ ಸಿದ್ದೇಶ್ವರ್‌ ಮಾಲಿಗೆ ಎದುರಿನಿಂದ ಬರುತ್ತಿದ್ದ ಕಾರಿನಲ್ಲಿ ಏನೋ ಹೆಚ್ಚು ಕಡಿಮೆ ಆಗಿದೆ ಎಂದು ಅನ್ನಿಸಿತ್ತು. ಹೀಗಾಗಿ ತಪಾಸಣೆಗಾಗಿ ಕಾರನ್ನು ಅಡ್ಡಗಟ್ಟಿದ್ದ. ಆದರೆ ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದ. ಹೀಗಾಗಿ ಮಾಲಿ, ಬೈಕ್‌ ಏರಿ ಕಾರನ್ನು ಹಿಂಬಾಲಿಸಿ ರಸ್ತೆಯ ತಿರುವೊಂದರಲ್ಲಿ ಕಾರನ್ನು ಅಡ್ಡಗಟ್ಟಿದ್ದ. ಆದರೆ ಈ ವೇಳೆಯೂ ಕಾರು ನಿಲ್ಲಿಸದ ಚಾಲಕ, ಪೇದೆಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪೇದೆ ಕಾರಿನ ಬಾನೆಟ್ ಏರಿದ್ದಾರೆ. ಈ ಹೀಗಿದ್ದರೂ ಕಾರು ನಿಲ್ಲಿಸದ ಚಾಲಕ ಅದೇ ಸ್ಥಿತಿಯಲ್ಲೇ ಕಾರು ಚಲಾಯಿಸಿಕೊಂಡು 10 ಕಿ.ಮೀ ಚಲಿಸಿದ್ದಾನೆ. ಬಳಿಕ ಸಿಗ್ನಲ್‌ವೊಂದರಲ್ಲಿ ಆತನನ್ನು ಅಡ್ಡಗಟ್ಟಿ ಬಂಧಿಸಲಾಗಿದೆ.

ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿತ್ತು.  37 ವರ್ಷದ ಪೊಲೀಸ್ ಪೇದೆ ಸಿದ್ದೇಶ್ವರ ಮಾಲಿ ಅವರು ರಾಜ್ಯಕ್ಕೆ ಅಮಿತ್ ಷಾ ಆಗಮನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಹಾಗೂ ತಪಾಸಣಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ 22 ವರ್ಷ ಪ್ರಾಯದ ಆದಿತ್ಯ ಬೆಂಬ್ಡೆ ಮಾದಕ ವಸ್ತು ಸೇವಿಸಿ ಕಾರು ಚಲಾಯಿಸುತ್ತಾ ಬಂದಿದ್ದು, ಪೇದೆ ಕಾರು ನಿಲ್ಲಿಸಲು ಮುಂದಾದಾಗ ಕಾರು ನಿಲ್ಲಿಸದೇ ಡಿಕ್ಕಿ ಹೊಡೆಯಲು ಮುಂದಾಗಿದ್ದು, ಈ ವೇಳೆ ಬಾನೆಟ್ ಏರಿದ ಪೇದೆಯನ್ನು 10 ಕಿ.ಮೀ ದೂರ ಎಳದೊಯ್ದಿದ್ದಾನೆ. ಆತನನ್ನು ಈಗ ಬಂಧಿಸಲಾಗಿದೆ.  ಕಾರಿನ ಬಾನೆಟ್ ಮೇಲೆ ಪೊಲೀಸ್ ಪೇದೆ ಬಿದ್ದಾಗ ಆತ ಕಾರನ್ನು ನಿಲ್ಲಿಸುವ ಬದಲು ಮತ್ತಷ್ಟು ವೇಗಗೊಳಿಸಿದ್ದಾನೆ.  ನಂತರ ಇತರ ಪೊಲೀಸರು ಆತನ ಕಾರನ್ನು ತಡೆದು ನಿಲ್ಲಿಸಿ ಆತನನ್ನು ಬಂಧಿಸಿದ್ದಾರೆ. 

ದಂಡ ಹಾಕಲು ಬಂದ ಪೊಲೀಸ್‌ನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಚಾಲಕ!

ಬಂಧಿತ ಆದಿತ್ಯ ವಿರುದ್ಧ  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ಕೊಲೆಗೆ ಯತ್ನ, 353 ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ,  ಸೆಕ್ಷನ್ 279 ನಿರ್ಲಕ್ಷ್ಯದ ವಾಹನ ಚಾಲನೆ ಹಾಗೂ NDPS ಆಕ್ಟ್‌ನಡಿ ಪ್ರಕರಣ ದಾಖಲಿಸಲಾಗಿದೆ.

ಬಾನೆಟ್‌ ಏರಿದ್ದ ಪೊಲೀಸ್‌ 2 ಕಿ.ಮೀ ದೂರ ಎಳೆದೊಯ್ದ ಕಾರು ಚಾಲಕ!

Latest Videos
Follow Us:
Download App:
  • android
  • ios