ದಂಡ ಹಾಕಲು ಬಂದ ಪೊಲೀಸ್‌ನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಚಾಲಕ!

ಕೊರೋನಾ ವೈರಸ್ ಕಾರಣ ಮಾಸ್ಕ್ ಕಡ್ಡಾಯವಾಗಿದೆ. ಹಲವರು ಮಾಸ್ಕ್ ಧರಿಸದೆ ದಂಡ ತೆತ್ತಿದ್ದಾರೆ. ವಿಶೇಷವಾಗಿ ವಾಹನ ಚಾಲಕರು, ಪ್ರಯಾಣಿಕರು ಮಾಸ್ಕ್ ಹಾಕದೆ ದಂಡಕ್ಕೆ ಗುರಿಯಾಗಿದ್ದಾರೆ. ಇಲ್ಲೊಬ್ಬ ಕಾರು ಚಾಲಕ, ಮಾಸ್ಕ್ ಧರಿಸದ ಕಾರಣ ದಂಡ ಹಾಕಲು ಬಂದ ಪೊಲೀಸನ್ನು 1 ಕಿಮೀ ಕಾರಿನಲ್ಲಿ ಎಳೆದೊಯ್ದ ಘಟನೆ ನಡೆದಿದೆ.

Pune Traffic policeman was dragged on car bonnet for about one kilometer ckm

ಪುಣೆ(ನ.07):  ಮಾಸ್ಕ್ ಕಡ್ಡಾಯ ನಿಯಮಕ್ಕೆ ಪರ ವಿರೋಧಗಳಿವೆ. ಅದರಲ್ಲೂ ಖಾಸಗಿ ವಾಹನದೊಳಗೆ ಮಾಸ್ಕ್ ಹಾಕಬೇಕು ಅನ್ನೋ ನಿಯಮಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗೆ ಖಾಸಗಿ ವಾಹನದಲ್ಲಿ ಮಾಸ್ಕ್ ಹಾಕದೆ ತೆರಳುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಪುಣೆ ಪೊಲೀಸರು ದಂಡ ಹಾಕಲು ಮುಂದಾಗಿದ್ದಾರೆ. ಆದರೆ ಚಾಲಕಿ ಚಾಲಕ ಕಾರು ನಿಲ್ಲಿಸುವಂತೆ ಮಾಡಿ, ಅಡ್ಡನಿಂತಿದ್ದ ಪೊಲೀಸನನ್ನೇ ಎಳೆದೊಯ್ದು ಘಟನೆ ನಡೆದಿದೆ.

ದಂಡ ಕಟ್ಟಿ ಜಾರಿಕೊಳ್ಳೋ ಚಾನ್ಸೇ ಇಲ್ಲ, ನಿಯಮ ಉಲ್ಲಂಘಿಸಿದರೆ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್!.

ಯುವರಾಜ್ ಹನುವಟೆ ತನ್ನ ಮಾರುತಿ 800 ಕಾರಿನಲ್ಲಿ ಮಾಸ್ಕ್ ಹಾಕದೆ ಪುಣೆ ನಗರದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಪೊಲೀಸ್ ಕಾರು ನಿಲ್ಲಿಸಲು ಅಡ್ಡಗಟ್ಟಿದ್ದಾರೆ. ಆಧರೆ ಯುವರಾಜ್, ಕಾರು ನಿಲ್ಲಿಸುವಂತ ನಾಟಕವಾಗಿ, ಮತ್ತೆ ವೇಗವಾಗಿ ಕಾರು ಚಲಾಯಿಸಲು ಮುಂದಾಗಿದ್ದಾನೆ. ಇದನ್ನು ಅರಿತ ಪೊಲೀಸ್, ಕಾರಿನ ಬಾನೆಟ್ ಹಿಡಿದು ನಿಂತಿದ್ದಾರೆ.

ದುಬಾರಿ ಫೈನ್ ಕಟ್ಟಗಲಾಗದೇ ಪೊಲೀಸರ ಬಳಿ ಸ್ಕೂಟರ್ ಬಿಟ್ಟು ಹೋದ ಸವಾರ!.

ಇಷ್ಟಕ್ಕೆ ಸುಮ್ಮನಾಗದ ಯುವರಾಜ್ ಕಾರು ವೇಗವಾಗಿ ಚಲಾಯಿಸಿದ್ದಾನೆ. ಪೊಲೀಸ್ ಕಾರಿನ ಬಾನೆಟ್ ಹತ್ತಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಸುಮಾರು 1 ಕೀಲೋಮೀಟರ್ ವರೆಗೂ ಈ ಸಿನಿಮೀಯ ಘಟನೆ ನಡೆದಿದೆ. 1 ಕಿಮೀ ಸಾಗಿದರೂ ಪೊಲೀಸ್ ಗಟ್ಟಿಯಾಗಿ ಹಿಡಿದು ಪಟ್ಟು ಸಿಡಿಸಲಿಲ್ಲ. ಆದರೆ ಕಾರಿನ ಬಂಪರ್‌ನಲ್ಲಿ ಕಾಲು ಸಿಲುಕಿಕೊಂಡ ಕಾರಣ ಪೊಲೀಸ್‌ಗೆ ಗಾಯಗಳಾಗಿದೆ.

ಪಟ್ಟು ಸಡಿಲಿಸದ ಪೊಲೀಸ್ ಮುಂದೆ ಯುವರಾಜ ಸೋತಿದ್ದಾನೆ. ಕಾರು ನಿಲ್ಲಿಸಿ ಯುವರಾಜನನ್ನು ಪೊಲೀಸರು ಬಂಧಿಸಿದ್ದಾರೆ. ಮಾಸ್ಕ್ ದಂಡ ತಪ್ಪಿಸಿಕೊಳ್ಳಲು ಹೋದ ಯುವರಾಜ ಇದೀಗ ಬಂಧನಕ್ಕೊಳಗಾಗಿದ್ದಾನೆ. ಯುವರಾಜ್ ಮೇಲೆ ಕೊಲೆ ಯತ್ನ(307), ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿ ಮೇಲೆ ಹಲ್ಲೆ ಯತ್ನ(353) ಸಾರ್ವಜನಿಕ ಸೇವೆಯಲ್ಲಿದ್ದ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ(333) ಪ್ರಕರಣಗಳು ದಾಖಲಾಗಿದೆ.

 

Latest Videos
Follow Us:
Download App:
  • android
  • ios