Asianet Suvarna News Asianet Suvarna News

ಚೌಧರಿ ಚರಣ್‌ ಸಿಂಗ್‌, ಕರ್ಪೂರಿ ಠಾಕೂರ್‌ ಸೇರಿದಂತೆ ನಾಲ್ವರಿಗೆ ಭಾರತ ರತ್ನ ಪ್ರದಾನ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ನಾಲ್ಕು ಪುರಸ್ಕೃತರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪ್ರದಾನ ಮಾಡಿದರು.

Droupadi Murmu awarded Bharat Ratna to Chaudhary Charan Singh Karpoori Thakur two others san
Author
First Published Mar 30, 2024, 1:26 PM IST

ನವದೆಹಲಿ (ಮಾ.30): ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಭಾರತ ರತ್ನ ಪುರಸ್ಕೃತ ನಾಲ್ವರು ವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಮಾಜವಾದಿ ನಾಯಕ ಚೌಧರಿ ಚರಣ್‌ ಸಿಂಗ್‌, ಮಾಜಿ ಮುಖ್ಯಮಂತ್ರಿ ಪಿವಿ ನರಸಿಂಹರಾವ್‌, ಮಾಜಿ ಬಿಹಾರ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಹಾಗೂ ಹಸಿರು ಕ್ರಾಂತಿಯ ಹರಿಕಾರ ವಿಜ್ಞಾನಿ ಎಂಎಸ್‌ ಸ್ವಾಮಿನಾಥನ್‌ ಅವರಿಗೆ ಮರಣೋತ್ತರವಾಗಿ ದೇಶದ ಶ್ರೇಷ್ಠ ಪುರಸ್ಕಾರವನ್ನು ಪ್ರಧಾನ ಮಾಡಿದರು. ಇವರ ಪರವಾಗಿ ಇವರ ಕುಟುಂಬದ ವ್ಯಕ್ತಿಗಳು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿದರು. ಭಾರತ ರತ್ನ ಪುರಸ್ಕೃತರಾದ ಐದನೇ ವ್ಯಕ್ತಿಯಾಗಿರುವ ಭಾರತದ ಮಾಜಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ, ಬಿಜೆಪಿ ಭೀಷ್ಮ ಎಂದೇ ಪ್ರಖ್ಯಾತರಾಗಿರುವ ಎಲ್‌ಕೆ ಆಡ್ವಾಣಿ ಅವರಿಗೆ ಇಂದು ಸಂಜೆ ಅವರ ನಿವಾಸದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅನಾರೋಗ್ಯದ ಕಾರಣದಿಂದಾಗಿ ಅವರು ಶನಿವಾರದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನರಸಿಂಹರಾವ್ ಅವರ ಪುತ್ರ ಪಿ.ವಿ.ಪ್ರಭಾಕರ್ ರಾವ್ ಅವರು ತಮ್ಮ ತಂದೆಗೆ ಪ್ರದಾನ ಮಾಡಿದ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದರು. ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಸಿಂಗ್ ಮತ್ತು ರಾಷ್ಟ್ರೀಯ ಲೋಕದಳ (RLD) ಅಧ್ಯಕ್ಷ,  ಮುರ್ಮು ಅವರಿಂದ ಗೌರವವನ್ನು ಸ್ವೀಕರಿಸಿದರು.

ಕಾಂಗ್ರೆಸ್ ಕಡೆಗಣಿಸಿದವರಿಗೆ ಸನ್ಮಾನ ಮಾಡಿತಾ ಕಮಲಪಡೆ..? ಎದುರಾಳಿಗಳಿಗೆ ಮೋದಿ ರವಾನಿಸಿದ ಸಂದೇಶವೇನು..?

ಸ್ವಾಮಿನಾಥನ್ ಅವರ ಪುತ್ರಿ ನಿತ್ಯಾ ರಾವ್ ಮತ್ತು ಕರ್ಪೂರಿ ಠಾಕೂರ್ ಅವರ ಪುತ್ರ ರಾಮ್ ನಾಥ್ ಠಾಕೂರ್ ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪಾಧ್ಯಕ್ಷ ಜಗದೀಪ್ ಧಂಖರ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಭಾರತ ರತ್ನ ಮೂರು : ಲೆಕ್ಕಾಚಾರಗಳು ಹಲವಾರು

Follow Us:
Download App:
  • android
  • ios