Asianet Suvarna News Asianet Suvarna News

ತಿರುಪತಿ ದೇಗುಲದ ಮೇಲೆ ಡ್ರೋನ್‌ ವಿಡಿಯೋ: ಡ್ರೋನ್‌ ಬಿಟ್ಟವರ ಮೇಲೆ ಕ್ರಿಮಿನಲ್‌ ಕೇಸ್‌..!

ತಿರುಪತಿ ದೇಗುಲದ ಮೇಲೆ ಡ್ರೋನ್‌ ವಿಡಿಯೋ ವೈರಲ್‌ ಆಗುತ್ತಿದ್ದು, ವಿವಾದವಾಗಿದೆ. ದೇಗುಲದ ಮೇಲೆ ವೈಮಾನಿಕ ಸಾಧನ ಹಾರಾಟ ನಿಷಿದ್ಧ ಮಾಡಲಾಗಿದ್ದು, ಹೀಗಾಗಿ ಡ್ರೋನ್‌ ಬಿಟ್ಟವರ ಮೇಲೆ ಕ್ರಿಮಿನಲ್‌ ಕೇಸು ಹಾಕಲು ಆಡಳಿತ ಮಂಡಳಿ ತೀರ್ಮಾನ ಮಾಡಿದೆ. 

drone visuals of tirumala tirupati temple go viral temple to take legal action ash
Author
First Published Jan 22, 2023, 10:13 AM IST

ತಿರುಪತಿ (ಜನವರಿ 22, 2023): ಪ್ರಮುಖ ಭದ್ರತಾ ಲೋಪದಲ್ಲಿ, ತಿರುಮಲ ತಿರುಪತಿ ದೇವಸ್ಥಾನದ ಆವರಣದಲ್ಲಿ ಕೆಲವರು ಡ್ರೋನ್‌ಗಳನ್ನು ಹಾರಿಸುತ್ತಿರುವುದು ಕಂಡುಬಂದಿದೆ. ಕೆಲ ದಿನಗಳ ಹಿಂದೆ ಚಿತ್ರೀಕರಣ ಮಾಡಲಾಗಿದೆ ಎನ್ನಲಾದ ವಿಡಿಯೋ ಇದೀಗ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸ್ಥಳೀಯರು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ತಿರುಮಲ ವೆಂಕಟೇಶ್ವರನ ದೇಗುಲದ (Tirumala Venkateswara Temple) ಮೇಲೆ ಡ್ರೋನ್‌ ಕ್ಯಾಮರಾ (Drone Camera) ಬಿಟ್ಟು ವಿಡಿಯೋವೊಂದನ್ನು (Video) ಚಿತ್ರೀಕರಿಸಲಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಇದರ ತನಿಖೆ ನಡೆಸಲು ದೇಗುಲದ ಆಡಳಿತ ಮಂಡಳಿ (Temple Administration Board) ನಿರ್ಧರಿಸಿದ್ದು, ತಪ್ಪಿತಸ್ಥರ ಮೇಲೆ ಕ್ರಿಮಿನಲ್‌ ಕೇಸು (Criminal Case) ಹಾಕುವುದಾಗಿ ಹೇಳಿದೆ. ಆಗಮ ಶಾಸ್ತ್ರದ ಪ್ರಕಾರ ಭೂ ವೈಕುಂಠ ತಿರುಪತಿ ದೇವಸ್ಥಾನದ ಮೇಲೆ ಯಾವುದೇ ವೈಮಾನಿಕ ಸಾಧನಗಳು ಹಾರಾಡುವಂತಿಲ್ಲ. ಈ ಪ್ರಕಾರ ದೇವಸ್ಥಾನದ ಮೇಲೆ ಹಾರಾಟ ನಿಷೇಧವಿದ್ದರೂ ಡ್ರೋನ್‌ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ (Social Media) ಸದ್ದು ಮಾಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ತೆಗೆಯಲಾದ ವಿಡಿಯೋ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: ತಿರುಪತಿ ತಿಮ್ಮಪ್ಪ ವಿಶೇಷ ದರ್ಶನಕ್ಕೆ ಆನ್‌ಲೈನ್ ಟಿಕೆಟ್ಸ್ ಬಿಡುಗಡೆ, ಬುಕಿಂಗ್ ಓಪನ್

ಈ ಬಗ್ಗೆ ಹೇಳಿಕೆ ನೀಡಿರುವ ಟಿಟಿಡಿ, ‘ಹೈದರಾಬಾದ್‌ ಮೂಲದ ಕಂಪನಿಯೊಂದು ವಿಡಿಯೋ ಹಾಕಿರುವ ಸಾಧ್ಯತೆಗಳಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ದೇಗುಲ ಮಂಡಳಿ, ಇದರ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ವಿಡಿಯೋ ಕಳಿಸಿದೆ. ವರದಿಯಲ್ಲಿ ವಿಡಿಯೋವನ್ನುಡ್ರೋನ್‌ ಮೂಲಕ ತೆಗೆಯಲಾಗಿದೆ ಎಂದು ತಿಳಿದುಬಂದರೆ ವಿಡಿಯೋ ಹಾಕಿರುವ ಕಂಪನಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು’ ಎಂದಿದೆ.

ಮತ್ತೊಂದೆಡೆ, ಟಿಟಿಡಿ ಅಧ್ಯಕ್ಷ (TTD President) ವೈ.ವಿ. ಸುಬ್ಬಾ ರೆಡ್ಡಿ, ಇದು ಉಲ್ಲಂಘನೆಯಾಗಿದ್ದು, ಟಿಟಿಡಿ ಆವರಣದಲ್ಲಿ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ. ಘಟನೆಯ ಕುರಿತು ಟಿಟಿಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ರೆಡ್ಡಿ ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು.

ಇದನ್ನು ಓದಿ: ತಿರುಮಲದಲ್ಲಿ ವಸತಿ ಕೊಠಡಿಗಳ ಬಾಡಿಗೆ ದರ ಭಾರಿ ಹೆಚ್ಚಳ

ವೈರಲ್ ದೃಶ್ಯಾವಳಿಗಳನ್ನು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ವರದಿಯಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಹೈದರಾಬಾದ್ ಮೂಲದ ಸಂಸ್ಥೆಯೊಂದು ಈ ತುಣುಕನ್ನು ಅಪ್‌ಲೋಡ್ ಮಾಡಿದೆ. ಆದರೆ, ಇದೀಗ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

ಟಿಟಿಡಿ ಪ್ರಕಾರ, ಪ್ರತಿದಿನ 50,000 ಯಾತ್ರಿಕರು ವೆಂಕಟೇಶ್ವರನ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ವೈಕುಂಠ ದ್ವಾರ ದರ್ಶನದ ಕಾರಣದಿಂದ ಈ ತಿಂಗಳ ಆರಂಭದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜನ ಜಂಗುಳಿ ಹೆಚ್ಚಾಯಿತು. ವೈಕುಂಠ ಏಕಾದಶಿಯ ಜನವರಿ 2 ರಿಂದ ಜನವರಿ 11 ರವರೆಗೆ ಅಂದರೆ 10 ದಿನಗಳ ಕಾಲ ಆಚರಿಸಲಾಯಿತು. ಇನ್ನು, ಈ ತಿಂಗಳ ಆರಂಭದಲ್ಲಿ, ಟಿಟಿಡಿ ಆನ್‌ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಪ್ರಾರಂಭಿಸಿದೆ. ಭಕ್ತರು ತಲಾ 300 ರೂ.ಗೆ ವಿಶೇಷ ದರ್ಶನ ಟಿಕೆಟ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ. ಆನ್‌ಲೈನ್ ಟಿಕೆಟ್ ವಿಂಡೋವನ್ನು ಜನವರಿ 12 ರಂದು ತೆರೆಯಲಾಗಿದ್ದು, ಫೆಬ್ರವರಿ 28 ರವೆರೆಗೆ ಅವಕಾಶವಿದೆ.

ಇದನ್ನೂ ಓದಿ: Tirupati: ಒಂದೇ ದಿನದಲ್ಲಿ ಹತ್ತಿರತ್ತಿರ 8 ಕೋಟಿ ರೂ. ಹುಂಡಿ ಹಣ ಕಂಡ ತಿರುಪತಿ!

Follow Us:
Download App:
  • android
  • ios