ಮುಂಬೈ (ಮೇ.07): ಹಲವು ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಕೊರೋನಾ ವೈರಸ್‌ 2ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ ಮುಂಬೈನಲ್ಲಿ ಇದೀಗ ಡ್ರೈವ್‌ ಇನ್‌ ಲಸಿಕೆ ಅಭಿಯಾನ ಎಂಬ ವಿನೂತನ ಕ್ರಮವನ್ನು ಜಾರಿಗೊಳಿಸಲಾಗಿದೆ. 

ದಾದರ್‌ ವೆಸ್ಟ್‌ನ ಕೊಹಿನೂರ್‌ ಕಾರ್‌ ಪಾರ್ಕಿಂಗ್‌ ಲಾಟ್‌ನಲ್ಲಿ ಇಂಥದ್ದೊಂದು ವಿನೂತನ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರಾಯೋಗಿಕ ಲಸಿಕೆ ಅಭಿಯಾನ ಯಶಸ್ವಿ ಆಗಿರುವ ಹಿನ್ನೆಲೆಯಲ್ಲಿ ಮುಂಬೈನ ಇನ್ನಿತರ ಸ್ಥಳಗಳಿಗೆ ಲಸಿಕೆ ಅಭಿಯಾನವನ್ನು ವಿಸ್ತರಿಸಲು ಮುಂಬೈ ಮಹಾನಗರ ಪಾಲಿಕೆ ಉದ್ದೇಶಿಸಿದೆ. 

ವಾಣಿಜ್ಯ ನಗರಿ ಮುಂಬೈ ಕೊರೋನಾ ಸುನಾಮಿ ಗೆದ್ದಿದ್ದು ಹೇಗೆ?

ಕಾರ್‌ ಪಾರ್ಕಿಂಗ್‌, ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌, ಆಟದ ಮೈದಾನಗಳು ಹೀಗೆ ಲಭ್ಯವಿರುವ ಸ್ಥಳಗಳಲ್ಲಿ ತಾತ್ಕಾಲಿಕ್‌ ಟೆಂಟ್‌ಗಳನ್ನು ಹಾಕಿ ಡ್ರೈವ್‌ ಇನ್‌ ಲಸಿಕೆ ಅಭಿಯಾನ ನಡೆಸಲು ಪಾಲಿಕೆ ಉದ್ದೇಶಿಸಿದೆ.

ಏನಿದು ಯೋಜನೆ?

45 ವರ್ಷ ಮೇಲ್ಪಟ್ಟಹಿರಿಯ ನಾಗರಿಕರು, ಅಂಗವಿಕರಿಗೆ ನೆರವಾಗುವ ಉದ್ದೇಶದಿಂದ ಯೋಜನೆಯನ್ನು ಆರಂಭಿಸಲಾಗಿದೆ. ಫಲಾನುಭವಿಗಳು ತಮ್ಮ ಕಾರಿನಲ್ಲಿ ಬಂದು ಲಸಿಕೆ ಪಡೆದು ಕೆಲ ಸಮಯ ವಿಶ್ರಾಂತಿ ಪಡೆದು ಅಲ್ಲಿಂದ ತೆರಳಬಹುದಾಗಿದೆ. ಇದರಿಂದ ಜನರು ಲಸಿಕಾ ಕೇಂದ್ರಗಳಿಗೆ ತೆರಳಿ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇರುವುದಿಲ್ಲ. 

ಗುಡ್‌ನ್ಯೂಸ್‌: ಮುಂಬೈನಲ್ಲಿ ಸೋಂಕಿನಬ್ಬರ ತೀವ್ರ ಕುಸಿತ! ..

ಜೊತೆ ಸೋಂಕು ತಗುಲುವ ಯಾವುದೇ ಅಪಾಯ ಇಲ್ಲದೇ ಸುರಕ್ಷಿತವಾಗಿ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ, 60 ವರ್ಷ ಮೇಲ್ಪಟ್ಟವರು ಸಿಬ್ಬಂದಿಯ ಬಳಿ ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿರಬೇಕು ಹಾಗೂ ತಾವೇ ಕಾರು ಚಲಾಯಿಸಿಕೊಂಡು ಬರುವಂತಿಲ್ಲ. ತಮ್ಮ ಜೊತೆ ಇನ್ನೊಬ್ಬರನ್ನು ಕರೆದುಕೊಂಡು ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona