Asianet Suvarna News Asianet Suvarna News

ಕಾಲೇಜಿನಲ್ಲಿ ಡ್ರೆಸ್‌ಕೋಡ್‌ ಸಂಬಂಧ ಹೈವೋಲ್ಟೇಜ್ ಡ್ರಾಮಾ; ನಿಯಮ ಉಲ್ಲಂಘಿಸಿದ್ರೆ ನೋ ಎಂಟ್ರಿ

ತರಗತಿಯಲ್ಲಿ ಔಪಚಾರಿಕ ಮತ್ತು ಸಭ್ಯವಾಗಿ ಬಟ್ಟೆ ಧರಿಸಿ ಹಾಜರಾಗಬೇಕು ಎಂಬುವುದು ನಮ್ಮಮ ಉದ್ದೇಶವಾಗಿದೆ. ಈ ಸಮಯದಲ್ಲಿಯೇ ಮಕ್ಕಳಿಗೆ ಸಂಸ್ಕೃತಿ ಮತ್ತು ನಮ್ಮ ಪರಂಪರೆಯ ಕುರಿತು ಕಲಿಸಬೇಕು.

dress code row in mumbai chembur college mrq
Author
First Published Jul 3, 2024, 2:43 PM IST

ಮುಂಬೈ: ಮುಂಬೈನ ಚೆಂಬೂರು ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿಗಳು ವಸ್ತ್ರನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಕಾಲೇಜಿನ ಡ್ರೆಸ್‌ಕೋಡ್ ನಿಯಮ ಉಲ್ಲಂಘನೆ ಹಿನ್ನೆಲೆ ಮಂಗಳವಾರ ವಿದ್ಯಾರ್ಥಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕಳೆದ ವರ್ಷ ಕಾಲೇಜಿನ ಕ್ಲಾಸ್‌ರೂಮ್‌ನಲ್ಲಿ ಹಿಜಾಬ್ ಮತ್ತು ಬರ್ಖಾಗೆ ನಿಷೇಧ ಹೇರಲಾಗಿತ್ತು. ಈ ಶೈಕ್ಷಣಿಕ ವರ್ಷದ ಆರಂಭದಿಂದಲೇ ವಿದ್ಯಾರ್ಥಿಗಳಿಗೆ ಸಮವಸ್ತ್ರ ಫಿಕ್ಸ್ ಮಾಡಲಾಗಿತ್ತು. ಈ ಸಂಬಂಧ ಮೇ 1ರಂದು ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು. 

ವಿದ್ಯಾರ್ಥಿನಿಯರಿಗೆ ಫಾರ್ಮಲ್ ಶರ್ಟ್-ಪ್ಯಾಂಟ್, ಇಂಡಿಯನ್ ಮತ್ತು ವೆಸ್ಟರ್ನ್ ಔಟ್‌ಫಿಟ್ ಅಂತ ನಿಗದಿ ಮಾಡಿ ಆದೇಶಿಸಲಾಗಿತ್ತು. ಜೂನ್ 27ರಂದು ಮತ್ತೊಂದು ಆದೇಶ ಪ್ರಕಟಿಸಿದ ಕಾಲೇಜು ಆಡಳಿತ ಮಂಡಳಿ ಕ್ಯಾಂಪಸ್‌ನಲ್ಲಿ ಟೀ ಶರ್ಟ್, ಜೀನ್ಸ್  ಹಾಗೂ ಜರ್ಸಿ ಮೇಲೆಯೂ ನಿರ್ಬಂಧ ಹಾಕಿತ್ತು. 

ನಿಯಮ ಉಲ್ಲಂಘಿಸಿದ್ರೆ ನೋ ಎಂಟ್ರಿ

ಜುಲೈ 1ರಿಂದ ಈ ನಿಯಮ ಉಲ್ಲಂಘನೆ ಸಂಬಂಧ  ಕಾಲೇಜಿನೊಳಗೆ ವಿದ್ಯಾರ್ಥಿಗಳನ್ನು ಪ್ರವೇಶದ್ವಾರದಲ್ಲಿಯೇ ತಡೆ ಹಿಡಿಯಲಾಗುತ್ತಿತ್ತು. ಕಾಲೇಜಿನ ಆದೇಶ ಪ್ರಶ್ನಿಸಿ ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ವಿದ್ಯಾರ್ಥಿಗಳ ಅರ್ಜಿಯನ್ನು ವಜಾಗೊಳಿದೆ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ತನ್ನ ನಿಯಮವನ್ನು ಜುಲೈ 1ರಿಂದ ಜಾರಿಗೆ ತಂದಿದೆ. ನಿಯಮ ಉಲ್ಲಂಘಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿಲ್ಲ. 

ಇಲ್ಲಿದೆ ನೋಡಿ ಸ್ಪೀಕರ್ ಕೊಕ್ ಕೊಟ್ಟ ರಾಹುಲ್ ಭಾಷಣದ 6 ಪ್ರಮುಖ ವಿಷಯಗಳು

ಜೂನ್ 27ರ ಆದೇಶದಲ್ಲಿ ಯಾವುದೇ ಧರ್ಮ, ಸಂಸ್ಕೃತಿಯನ್ನು ಪ್ರದರ್ಶಿಸುವ ಬಟ್ಟೆ ಧರಿಸಬಾರದು ಎಂದು ನಿಯಮವಿದೆ. ಕಾಲೇಜಿನೊಳಗೆ ಬರುವ ವಿದ್ಯಾರ್ಥಿನಿಯರು ನಿಗದಿತ ಕೋಣೆಯಲ್ಲಿ ಹಿಜಾಬ್, ಬುರ್ಖಾ, ಸ್ಟಾರ್ಫ್ ತೆಗೆದಿಟ್ಟು ತರಗತಿಗಳಿಗೆ ಹಾಜರಾಗಬೇಕು. ಅದೇ ರೀತಿ ಟೈಟ್ ಜೀನ್ಸ್, ಟೀಶರ್ಟ್, ದೇಹದ ಭಾಗವನ್ನು ತೋರಿಸುವ ಹರಿದ ಜೀನ್ಸ್ ಮೇಲೆ ನಿರ್ಬಂಧ ಹಾಕಲಾಗಿದೆ. 

ವಿದ್ಯಾರ್ಥಿಗಳಿಂದ ಖಂಡನೆ

ಕಾಲೇಜು ಆಡಳಿತ ಮಂಡಳಿಯ ಈ ನಿಯಮವನ್ನು ಕೆಲ ವಿದ್ಯಾರ್ಥಿಗಳು ಖಂಡಿಸಿದ್ದಾರೆ. ಜೀನ್ಸ್ ಪ್ಯಾಂಟ್ ಹಾಕಿದ್ದರಿಂದ ಕಾಲೇಜಿನೊಳಗೆ ನನ್ನನ್ನು ಬಿಡಲಿಲ್ಲ ಎಂದು ವಿದ್ಯಾರ್ಥಿಯೋರ್ವ ಹೇಳಿಕೊಂಡಿದ್ದಾನೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪ್ರಿನ್ಸಿಪಾಲ್ ವಿದ್ಯಾಗೌರಿ ಲೆಲೆ, ಕಾಲೇಜಿಗೆ ದಾಖಲಾತಿ ಪಡೆದುಕೊಳ್ಳುವ ಮುನ್ನವೇ ಇಲ್ಲಿಯ ಡ್ರೆಸ್‌ಕೋಡ್ ಬಗ್ಗೆ ಮಾಹಿತಿ ನೀಡಲಾಗಿತ್ತು. ತರಗತಿಯಲ್ಲಿ ಔಪಚಾರಿಕ ಮತ್ತು ಸಭ್ಯವಾಗಿ ಬಟ್ಟೆ ಧರಿಸಿ ಹಾಜರಾಗಬೇಕು ಎಂಬುವುದು ನಮ್ಮಮ ಉದ್ದೇಶವಾಗಿದೆ. ಈ ಸಮಯದಲ್ಲಿಯೇ ಮಕ್ಕಳಿಗೆ ಸಂಸ್ಕೃತಿ ಮತ್ತು ನಮ್ಮ ಪರಂಪರೆಯ ಕುರಿತು ಕಲಿಸಬೇಕು. ತುಂಬಾ ಯೋಚಿಸಿ ಶಿಸ್ತುಪಾಲನೆ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳುತ್ತಾರೆ.

ಹತ್ರಾಸ್ ಹೆಣಗಳ ರಾಶಿ ನೋಡಿ ಡ್ಯೂಟಿ ಪೊಲೀಸ್ ಕಾನ್‌ಸ್ಟೇಬಲ್ ಹೃದಯಾಘಾತದಿಂದ ಸಾವು

Latest Videos
Follow Us:
Download App:
  • android
  • ios