ಹತ್ರಾಸ್ ಹೆಣಗಳ ರಾಶಿ ನೋಡಿ ಡ್ಯೂಟಿ ಪೊಲೀಸ್ ಕಾನ್‌ಸ್ಟೇಬಲ್ ಹೃದಯಾಘಾತದಿಂದ ಸಾವು

ಮೃತದೇಹಗಳನ್ನು ನೋಡಿಯೇ ಹೃದಯಾಘಾತವಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ.

A duty police constable died of a heart attack after seeing a hatrasa dead boby mrq

ಹತ್ರಾಸ್ (ಉತ್ತರ ಪ್ರದೇಶ): ಹತ್ರಾಸ್‌ನಲ್ಲಿ ಕಾಲ್ತುಳಿತಕ್ಕೊಳಗಾದ ಹೆಣಗಳ ರಾಶಿ ನೋಡಿ ಕರ್ತವ್ಯ ನಿರತ ಪೊಲೀಸ್ ಕಾನ್‌ಸ್ಟೇಬಲ್ ಹೃದಯಾಘಾತದಿಂದ ಮೃತರಾಗಿದ್ದಾರೆ. ರಜನೀಶ್ ಮೃತ ಪೊಲೀಸ್ ಕಾನ್‌ಸ್ಟೇಬಲ್. ಇಟಾಹ್ ಜಿಲ್ಲಾಸ್ಪತ್ರೆಯಲ್ಲಿ ಬಿದ್ದಿದ್ದ ಹೆಣಗಳ ರಾಶಿಯನ್ನು ನೋಡಿದ ರಜನೀಶ್ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತದೇಹಗಳನ್ನು ನೋಡಿಯೇ ಹೃದಯಾಘಾತವಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ.

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಪುಲೈ ಎಂಬ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಭೋಲಾ ಬಾಬಾ ಎಂಬ ಸಂತನ ಸತ್ಸಂಗಕ್ಕೆ ಜನರು ತೆರಳಿದ್ದ ವೇಳೆ ಹಿಂದಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಸಣ್ಣ ಮೋರಿ ಕಾಲ್ತುಳಿತ ಎಂಬಲ್ಲಿ ಕಾಲ್ತುಳಿತ ಉಂಟಾಗಿದೆ. ಭೋಲಾ ಬಾಬಾ ಕಾಲಿಟ್ಟ ಜಾಗದಲ್ಲಿಯ ಧೂಳು ಸಂಗ್ರಹಿಸಲು ಜನರು ಮುಗಿಬಿದ್ದ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಸತ್ಸಂಗಕ್ಕೆ 80 ಸಾವಿರ ಜನರನ್ನು ಸೇರಿಸಲು ಅನುಮತಿ ಪಡೆಯಲಾಗಿತ್ತು. ಆದರೆ ಸತ್ಸಂಗಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಸೇರಿಸಲಾಗಿತ್ತು ಎಂದು ವರದಿಯಾಗಿದೆ.

121 ಜನರ ಬಲಿ ಪಡೆದ ಹತ್ರಾಸ್ ಸತ್ಸಂಗದ ಹಿಂದಿರುವ ಗುರು ಬೋಲೇಬಾಬಾ ಯಾರು?

ಯಾರೂ ಈ ಬೋಲೆ ಬಾಬಾ? 

ಉತ್ತರ ಪ್ರದೇಶದ ಇಟಾಹ್ ಮೂಲದ ಭೋಲಾ ಬಾಬಾ ಗುಪ್ತಚರ ದಳದಲ್ಲಿ ಪೊಲೀಸ್ ಆಗಿದ್ದವರು. ಪೊಲೀಸ್ ಇಲಾಖೆಯಲ್ಲಿ 26 ವರ್ಷ ಸೇವೆ ಸಲ್ಲಿಸಿದ ಬಳಿಕ ರಾಜೀನಾಮೆ ನೀಡಿ ಧಾರ್ಮಿಕ ಪ್ರವಚನ ನೀಡಲು ಆರಂಭಿಸಿದ್ದರು. ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ, ದೆಹಲಿ ಸೇರಿದಂತೆ ದೇಶದಾದ್ಯಂತನ ಬಾಬಾ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಬಾಬಾ ಮಾತುಗಳನ್ನು ಕೇಳಲು ದೂರ ದೂರದಿಂದ ಜನರು ಬರುತ್ತಾರೆ. ಇದೀಗ ಕಾಲ್ತುಳಿತ ಪ್ರಕರಣದಿಂದ ಬಾಬಾಗೆ ಬಂಧನದ ಭೀತಿ ಎದುರಾಗಿದೆ.

ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ

ನವದೆಹಲಿ: ಹಾಥ್ರಸ್‌ ಭೋಲೆಬಾಬಾ ಸತ್ಸಂಗ್‌ ಕಾಲ್ತುಳಿತ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿನ ತಮ್ಮ ಭಾಷಣದ ವೇಳೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಮೋದಿ ತಲಾ 2 ಲಕ್ಷ ರು. ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಲಾ 2 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಘಟನೆಯ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. 

ಹಾಥ್ರಸ್ ಕಾಲ್ತುಳಿತ: ಎಲ್ಲೆಂದರಲ್ಲಿ ಹೆಣಗಳು.. ಆಸ್ಪತ್ರೆಯಲ್ಲಿ ಮನಕಲಕುವ ದೃಶ್ಯ

Latest Videos
Follow Us:
Download App:
  • android
  • ios