Asianet Suvarna News Asianet Suvarna News

ಇಲ್ಲಿದೆ ನೋಡಿ ಸ್ಪೀಕರ್ ಕೊಕ್ ಕೊಟ್ಟ ರಾಹುಲ್ ಭಾಷಣದ 6 ಪ್ರಮುಖ ವಿಷಯಗಳು

ಕಡತದಲ್ಲಿ ಸೇರ್ಪಡೆ ಮಾಡುವ ರಾಹುಲ್‌ ಭಾಷಣದಿಂದ ಹಿಂದುತ್ವ, ನೀಟ್‌, ಅಗ್ನಿವೀರ್‌, ರೈತರ ಸಮಸ್ಯೆ, ಉದ್ಯಮಿಗಳು, ಬಿಜೆಪಿ, ಆರ್‌ಎಸ್‌ಎಸ್‌ ಮೊದಲಾದ ಅಂಶಗಳನ್ನು ತೆಗೆದುಹಾಕುವಂತೆ ಸ್ಪೀಕರ್‌ ಓಂ ಬಿರ್ಲಾ ಸೂಚಿಸಿದ್ದಾರೆ.

six key points of Rahul gandhi s speech removed from Parliament file mrq
Author
First Published Jul 3, 2024, 11:25 AM IST

ನವದೆಹಲಿ: ವೈದ್ಯಕೀಯ ಪ್ರವೇಶ, ಪರೀಕ್ಷೆ, ಹಿಂದುತ್ವ, ರೈತರ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಸರ್ಕಾರದ ವೈಫಲ್ಯವನ್ನು ಎತ್ತಿತೋರಿಸುವ ನಿಟ್ಟಿನಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸೋಮವಾರ ಮಾಡಿದ್ದ ಪ್ರಖರ ಭಾಷಣದ ಪ್ರಮುಖ ಅಂಶಗಳಿಗೆ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಕತ್ತರಿ ಹಾಕಿದ್ದಾರೆ.

ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ‘ಹಿಂದುಗಳೆಂದು ತಮ್ಮನ್ನು ಕರೆದುಕೊಳ್ಳುವವರು ನಿರಂತರವಾಗಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಇಂಥವರು ಹಿಂದೂಗಳೇ ಅಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹಿಂಸಾಚಾರದಲ್ಲಿ ತೊಡಗಿಸಿಕೊಂಡಿವೆ’ ಎಂದು ಕಿಡಿಕಾರಿದ್ದರು. ಅಲ್ಲದೆ ಪ್ರವೇಶ ಪರೀಕ್ಷೆಗಳನ್ನು ಸರ್ಕಾರ ಉದ್ಯಮ ಮಾಡಿಕೊಂಡಿದೆ. ಅಗ್ನಿವೀರ್‌ ಯೋಜನೆ ಯುವಜನರನ್ನು ಯೂಸ್‌ ಆ್ಯಂಡ್‌ ಥ್ರೋ ರೀತಿ ಪರಿಗಣಿಸುವ ಯೋಜನೆಯಾಗಿದೆ. ರೈತರ ಸಮಸ್ಯೆಗಳಿಗೆ ಸರ್ಕಾರ ಧ್ವನಿಯಾಗುತ್ತಿಲ್ಲ ಎಂದೆಲ್ಲಾ ಕಿಡಿಕಾರಿದ್ದರು.

ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯಾಗಿ ಬಿಜೆಪಿಯ ನಾಯಕರು ಸರಣಿಯಾಗಿ ತಿರುಗೇಟು ನೀಡಿದ್ದರು. ಅದರ ಬೆನ್ನಲ್ಲೇ ಕಡತದಲ್ಲಿ ಸೇರ್ಪಡೆ ಮಾಡುವ ರಾಹುಲ್‌ ಭಾಷಣದಿಂದ ಹಿಂದುತ್ವ, ನೀಟ್‌, ಅಗ್ನಿವೀರ್‌, ರೈತರ ಸಮಸ್ಯೆ, ಉದ್ಯಮಿಗಳು, ಬಿಜೆಪಿ, ಆರ್‌ಎಸ್‌ಎಸ್‌ ಮೊದಲಾದ ಅಂಶಗಳನ್ನು ತೆಗೆದುಹಾಕುವಂತೆ ಸ್ಪೀಕರ್‌ ಓಂ ಬಿರ್ಲಾ ಸೂಚಿಸಿದ್ದಾರೆ.

ಅಂದೊಂದಿತ್ತು ಕಾಲ ಭ್ರಷ್ಟಾಚಾರದ ಮೇಳ, ಗದ್ದಲದ ನಡುವೆ ಲೋಕಸಭೆಯಲ್ಲಿ ವಿಪಕ್ಷಕ್ಕೆ ಮೋದಿ ಗುದ್ದು!

ಸಂಸತ್ ಕಡತದಿಂದ ತೆಗೆದು ಹಾಕಲಾದ ಆರು ಪ್ರಮುಖ ಅಂಶಗಳು 

1.ಜನರು ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳುತ್ತಾರೆ. ಆದ್ರೆ ಅವರು ಕೇವಲ ಹಿಂಸೆ, ದ್ವೇಷ, ಅಸತ್ಯದ ಮಾತುಗಳನ್ನು ಹೇಳುತ್ತಾರೆ. ನೀವು ಹಿಂದೂಗಳೇ ಅಲ್ಲ.

2.ರಾಮಮಂದಿರ ಉದ್ಘಾಟನೆಗೆ ಅದಾನಿ ಮತ್ತು  ಅಂಬಾನಿಯವರನ್ನು ಆಹ್ವಾನಿಸಿದ್ದಕ್ಕೆ ಅಯೋಧ್ಯೆಯ ಜನರು ಬಿಜೆಪಿ ಮೇಲೆ ಮುನಿಸಿಕೊಂಡಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಸ್ಥಳೀಯ ಜನತೆಗೆ ಆಹ್ವಾನ ನೀಡಿರಲಿಲ್ಲ. 

3.ಓರ್ವ ಅಗ್ನಿವೀರ ಯೋಧ ಸ್ಪೋಟದಲ್ಲಿ ಮೃತನಾದ್ರ ಅವರನ್ನು ಹುತಾತ್ಮ ಎಂದು ಕರೆಯಲ್ಲ. ಅಗ್ನಿವೀರ ಒಂದು ಯೂಸ್ ಆಂಡ್ ಥ್ರೋ ಕಾರ್ಮಿಕ ಎಂಬಂತೆ ಮಾಡಲಾಗಿದೆ. 

4.ಅಗ್ನಿವೀರ ಯೋಜನೆಯ ಕಲ್ಪನೆ ಭಾರತೀಯ ಸೇನೆಯಿಂದ ಬಂದಿಲ್ಲ. ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಬಂದ ಪರಿಕಲ್ಪನೆ ಇದಾಗಿದೆ. ಇದು ಪ್ರಧಾನಿಯವರ ಕಲ್ಪನೆಯ ಕೂಸು. 

5.ಸಂಪೂರ್ಣ ಪರೀಕ್ಷಾ ಪದ್ಧತಿಯನ್ನು ಕೋಟಾದಲ್ಲಿ ಕೇಂದ್ರಿಕರಿಸಲಾಗಿದೆ. ಈ ವ್ಯವಸ್ಥೆ ಸಂಪೂರ್ಣ ಲಾಭ ಶ್ರೀಮಂತರಿಗೆ ತಲುಪಿಸುವದಾಗಿದೆ. 

6.ಆರ್‌ಎಸ್‌ಎಸ್ ಮತ್ತು ಬಿಜೆಪಿ ಅಲ್ಪಸಂಖ್ಯಾತರು, ರೈತರು, ದಲಿತರು ಹಾಗೂ ಹಿಂದುಳಿದ ಸಮುದಾಯದ ವಿರುದ್ಧ ದ್ವೇಷ ಹರಡುವ ಕೆಲಸ ಮಾಡ್ತಿದ್ದಾರೆ.

ರಾಹುಲ್ ಗಾಂಧಿ ಆಕ್ರೋಶ

ಸ್ಪೀಕರ್‌ ಕ್ರಮದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ, ‘ನರೇಂದ್ರ ಮೋದಿ ಅವರ ಜಗತ್ತಿನಿಂದ ಈ ಪದಗಳನ್ನು ತೆಗೆದು ಹಾಕಬಹುದು. ಆದರೆ ವಾಸ್ತವತೆಯಿಂದಲ್ಲ. ನಾನು ಏನು ಹೇಳಬೇಕಿತ್ತೋ ಅದನ್ನು ಹೇಳಿದ್ದೇನೆ, ಅದೇ ಸತ್ಯಾಂಶ. ಅವರಿಗೆ ಎಷ್ಟು ಬೇಕೋ ಅಷ್ಟು ಪದಗಳನ್ನು ತೆಗೆದು ಹಾಕಲಿ. ಅದರೆ ಸತ್ಯಕ್ಕೆ ಜಯವಾಗಲಿದೆ. ಮೋದಿಯ ಜಗತ್ತಿನಿಂದ ಪದಗಳನ್ನು ತೆಗೆಯಬಹುದು, ಆದರೆ ವಾಸ್ತವ ಜಗತ್ತಿನಲ್ಲಿ ಸತ್ಯವನ್ನು ತೆಗೆದು ಹಾಕಲಾಗದು’ ಎಂದರು.

ಕಾಂಗ್ರೆಸ್ ಗೆದ್ದಿದ್ದು 543ಕ್ಕೆ 99 ವರ್ತನೆ ಮಾತ್ರ 100 ಕ್ಕೆ 99 ಗೆದ್ದಂತೆ: ರಾಹುಲ್‌ ಬಗ್ಗೆ ಮೋದಿ ವ್ಯಂಗ್ಯ

ಸ್ಪೀಕರ್‌ಗೆ ಪತ್ರ ಬರೆದ ರಾಹುಲ್ ಗಾಂಧಿ

ಇದೇ ವೇಳೆ ತಮ್ಮ ಭಾಷಣದಿಂದ ಆಯ್ದ ಭಾಗಗಳನ್ನು ತೆಗೆದು ಹಾಕಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿ ಸ್ಪೀಕರ್‌ ಓಂ ಬಿರ್ಲಾಗೆ ಪತ್ರ ಬರೆದಿರುವ ರಾಹುಲ್‌ ಗಾಂಧಿ, ‘ಸಭಾಪತಿಗಳು ಸದಸ್ಯರ ಭಾಷಣದ ಕೆಲವೊಂದು ಪದಗಳನ್ನು ತೆಗೆದು ಹಾಕುವ ಅಧಿಕಾರ ಹೊಂದಿರುವರಾದರೂ, ಅಂಥ ಪದಗಳು ಯಾವುವು ಎಂಬುದನ್ನು ಲೋಕಸಭಾ ಕಲಾಪ ನಿಯಮ 380ರಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಇದೀಗ ಆಯ್ದ ಪದಗಳನ್ನು ತೆಗೆದು ಹಾಕುವುದು ತರ್ಕಬದ್ಧವಾಗಿಲ್ಲ. ಇದನ್ನು ನೋಡಿ ನನಗೆ ಆಘಾತವಾಗಿದೆ. ಹೀಗಾಗಿ ತೆಗೆದು ಹಾಕಿರುವ ಪದಗಳನ್ನು ಮರಳಿ ಕಡೆತದಲ್ಲಿ ಸೇರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios