ಡಾಕ್ಟರ್ ಕನಸು ನನಸು ಮಾಡಲು ನೀಟ್ ಪಾಸ್ ಮಾಡಿದ 64 ವರ್ಷದ ನಿವೃತ್ತ SBI ಉದ್ಯೋಗಿ!

ವೈದ್ಯರಾಗಬೆಂಕ ಕನಸು. ಆದರೆ ಪರಿಸ್ಥಿತಿ ಸೇರಿ ಹಲವು ಕಾರಣಗಳಿಂದ ಆಗಿದ್ದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್. ಇದೀಗ ನಿವೃತ್ತಿಯಾಗಿದ್ದಾರೆ. ವಿಶೇಷ ತಮ್ಮ 64ನೇ ವಯಸ್ಸಿನಲ್ಲಿ ನೀಟ್ ಪರೀಕ್ಷೆ ಪಾಸ್ ಮಾಡಿರುವ ನಿವೃತ್ತ ಉದ್ಯೋಗಿ ಇದೀಗ ಎಂಬಿಬಿಎಸ್ ಅಡ್ಮಿಷನ್ ಕೂಡ ಪಡೆದಿದ್ದಾರೆ. 
 

Dream come true Odisha SBI retired employee crack neet exam to pursue MBBS ckm

ಭುವನೇಶ್ವರ(ಅ.15) ಓದು, ಬರಹ ಏನಿದ್ದರೂ ವಿದ್ಯಾರ್ಥಿಯಾಗಿದ್ದ ಮಾತ್ರ, ಅಮೇಲೆ ತಲೆಗೆ ಹತ್ತಲ್ಲ, ಇನ್ನೇನಿದ್ದರೂ ಜೀವನ ಇಷ್ಟೇ ಎಂದು ಮುಂದೆ ಸಾಗುವ ಮಂದಿ ಹೆಚ್ಚು. ಆದರೆ ಇಲ್ಲೊಬ್ಬರು ತಮ್ಮ ಕನಸು ನನಸು ಮಾಡಲು ಇದೀಗ 64ನೇ ವಯಸ್ಸಿನಲ್ಲಿ ಹೋರಾಟ ಮುಂದುವರಿಸಿದ್ದಾರೆ. ವೈದ್ಯರಾಗಬೇಕೆಂಬ ಕನಸು ಕಂಡಿದ್ದ ಒಡಿಶಾದ ಜೈ ಕಿಶೋರ್ ಪ್ರಧಾನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಆಗಿ ಇದೀಗ ನಿವೃತ್ತಿಯಾಗಿದ್ದಾರೆ. ಆದರೆ ತಮ್ಮ ಡಾಕ್ಟರ್ ಕನಸು ಮಾತ್ರ ಕೈಬಿಟ್ಟಿಲ್ಲ. ಇದೀಗ ನೀಟ್ ಪರೀಕ್ಷೆ ಪಾಸ್ ಮಾಡಿರುವ ಜೈ ಕಿಶೋರ್ ಎಂಬಿಬಿಎಸ್ ಅಡ್ಮಿಷನ್ ಕೂಡ ಮಾಡಿಕೊಂಡಿದ್ದಾರೆ.

ವೃತ್ತಿ ಆರಂಭಿಸಿದ ಬಳಿಕ ಶಿಕ್ಷಣ,ವಿದ್ಯಾಭ್ಯಾಸಕ್ಕೆ ಮರಳುವುದು ಭಾರತದಲ್ಲಿ ಅಸಾಧ್ಯದ ಮಾತು ಎನ್ನುತ್ತಾರೆ. ಆದರೆ ಜೈ ಕಿಶೋರ್ ಪ್ರಧಾನ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಎಸ್‌ಬಿಐ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜೈ ಕಿಶೋರ್ ಇತ್ತೀಚೆಗೆ ನಿವೃತ್ತಿಯಾಗಿದ್ದಾರೆ. ಜೈಕಿಶೋರ್ ಎಲ್ಲರಂತೆ ಪಿಂಚಣಿ ಸೇರಿದಂತೆ ಇತರ ಭತ್ಯಗಳನ್ನು ಪಡೆದು ವಿಶ್ರಾಂತಿ ಜೀವನ ಹಾಯಾಗಿ ಕಳೆಯುವ ನಿರ್ಧಾರ ಮಾಡಲಿಲ್ಲ. ಬದಲಾಗಿ ತಮ್ಮ ಬಹು ದಿನಗಳಿಂದ ಇದ್ದ ವೈದ್ಯನಾಗಬೇಕೆಂಬ ಕನಸು ನನಸು ಮಾಡಲು ಪರಿಶ್ರಮ ಆರಂಭಿಸಿದ್ದಾರೆ.

ಸಮೋಸಾ ಮಾರುವವನಿಗೆ ಚಿಗುರಿದ ವೈದ್ಯನಾಗುವ ಕನಸು, 18 ವರ್ಷಕ್ಕೆ NEET ಪಾಸ್

ನೀಟ್ ಪರೀಕ್ಷೆಗೆ ತಯಾರಿ ಆರಂಭಿಸಿದ್ದಾರೆ. ವಿಶ್ರಾಂತಿ ಜೀವನದಲ್ಲಿ ಮತ್ತೆ ಎಂಬಿಬಿಎಸ್ ಶಿಕ್ಷಣ ಪಡೆಯಲು ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಆನ್‌ಲೈನ್ ಕೋಚಿಂಗ್ ಕ್ಲಾಸ್‌ಗೆ ಸೇರಿಕೊಂಡು ನೀಟ್ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಮತ್ತೆ ಓದು, ಪರಿಶ್ರಮ ಅಸಾಧ್ಯ ಎಂದುಕೊಂಡವರಿಗೆ ಜೈ ಕಿಶೋರ್ ಉತ್ತರ ನೀಡಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.  ಇದೀಗ ಎಂಬಿಬಿಎಸ್ ಶಿಕ್ಷಣ ಪಡೆಯಲು ಸಜ್ಜಾಗಿದ್ದಾರೆ. ತಮ್ಮ 64ನೇ ವಯಸ್ಸಿನಲ್ಲಿ ಇದೀಗ ಎಂಬಿಬಿಎಸ್ ಪೂರೈಸಲು ಸಜ್ಜಾಗಿರುವ ಜೈಕಿಶೋರ್‌ಗೆ ಅಭಿನಂದನೆಗಳ ಮಹಾ ಪೂರವೇ ಹರಿದು ಬಂದಿದೆ. 

ಉತ್ತಮ ಅಂಕದೊಂದಿಗೆ ನೀಟ್ ಪರೀಕ್ಷೆ ಪಾಸ್ ಮಾಡಿದ ಜೈ ಕಿಶೋರ್ ವೀರ್ ಸುರೇಂದ್ರ ಸಾಯಿ ಮೆಡಿಕಲ್ ಸೈನ್ಸ್ ಹಾಗೂ ರೀಸರ್ಚ್ ಸಂಸ್ಥೆಯಲ್ಲಿ ಎಂಬಿಬಿಎಸ್ ಅಡ್ಮಿಷನ್ ಮಾಡಿಕೊಂಡಿದ್ದಾರೆ. ಇದೀಗ ಯುವ ವೈದ್ಯರ ಜೊತೆ 64 ವರ್ಷದ ಜೈ ಕಿಶೋರ್ ಎಂಬಿಬಿಎಸ್ ಪೂರೈಸಲಿದ್ದಾರೆ. ಜೈ ಕಿಶೋರ್ ಪ್ರಧಾನ್ ಕಠಿಣ ಪರಿಶ್ರಮ ಹಾಗೂ ಛಲಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಸುಳ್ಳು ದಾಖಲೆ ನೀಡಿ MBBS ಪೂರೈಸಿದ ವೈದ್ಯೆಯ ಪದವಿ ಮಾನ್ಯಗೊಳಿಸಿದ ಬಾಂಬೆ ಹೈಕೋರ್ಟ್: ಮಾನ್ಯತೆಗೆ ನೀಡಿದ ಕಾರಣವಿದು

Latest Videos
Follow Us:
Download App:
  • android
  • ios