police officer stealing money:  ಬೇಲಿನೇ ಎದ್ದು ಹೊಲ ಮೇಯ್ದಂತೆ, ಪೊಲೀಸ್‌ನೆ ಕಳ್ಳತನ ಮಾಡಿ ನಡು ರಸ್ತೆಯಲ್ಲಿ ಧರ್ಮದೇಟು ತಿಂದ ಘಟನೆಯೊಂದು ಸಂಭವಿಸಿದೆ. ಈ ಕಥೆಯನ್ನು ಕೇಳಿದರೆ, ನೀವು ಬೆಚ್ಚಿಬೀಳ್ತೀರಾ. ಈ ಸ್ಟೋರಿ ಸಂಪೂರ್ಣ ವಿವರ ಇಲ್ಲಿದೆ.

ಜನರ ರಕ್ಷಕಣೆ ಭಕ್ಷಕನಾದಗ, ಸಾರ್ವಜನಿಕ ಜನ ಜೀವನ ಏನಾಗಬೇಕು. ಹೌದು ಬೇಲಿನೇ ಎದ್ದು ಹೊಲ ಮೇಯ್ದಂತೆ, ಪೊಲೀಸ್‌ನೆ ಕಳ್ಳತನ ಮಾಡಿ ನಡು ರಸ್ತೆಯಲ್ಲಿ ಧರ್ಮದೇಟು ತಿಂದ ಘಟನೆಯೊಂದು ಸಂಭವಿಸಿದೆ. ಈ ಕಥೆಯನ್ನು ಕೇಳಿದರೆ, ನೀವು ಬೆಚ್ಚಿಬೀಳ್ತೀರಾ. ಈ ಸ್ಟೋರಿ ಸಂಪೂರ್ಣ ವಿವರ ಇಲ್ಲಿದೆ.

ಹಮೀರ್‌ಪುರದಲ್ಲಿ ಧರ್ಮಸಂಕಟ!

ಹೌದು ಉತ್ತರ ಪ್ರದೇಶದ ಹಮೀದ್‌ಪುರದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಧರ್ಮ ಸಂಕಟಕ್ಕೆ ಸಿಲುಕಿದ ಘಟನೆಯೊಂದು ನಡೆದಿದೆ. ಪೊಲೀಸ್‌ ಟ್ರಕ್‌ ಡ್ರೈವರ್‌ನನ್ನು ಯಾಮಾರಿಸಿದ್ದು, ನಂತರ ಅವನನ್ನು ಚೇಸ್ ಮಾಡಿದ್ದೆಲ್ಲ ಸಿನಿಮೀಯ ಸ್ಟೈಲ್‌ನಲ್ಲಿ ನಡೆದಿದೆ. ಇನ್ನು ಪೊಲೀಸ್‌ ಕದ್ದ ಬಗೆಯನ್ನು ನೋಡುವುದಾದರೆ, ಪೊಲೀಸ್‌ ಅಧಿಕಾರಿ ಘಟಂಪುರದಿಂದ ಹಮೀರ್‌ಪುರಕ್ಕೆ ಹೋಗುವ ದಾರಿಯಲ್ಲಿ ಟ್ರಕ್‌ವೊಂದಕ್ಕೆ ಲಿಫ್ಟ್‌ ಕೇಳಿದ್ದಾನೆ. ಅದಕ್ಕೆ ಇವರನ್ನು ಹತ್ತಿಸಿಕೊಂಡ ಟ್ರಕ್‌ ಡ್ರೈವರ್‌ ಮಾನವೀಯತೆ ಮೆರೆದರೆ, ಪೊಲೀಸ್‌ನು ಮೆತ್ತಗೆ ಲಾರಿ ಕ್ಯಾಬಿನ್‌ನಲ್ಲಿ 20,000 ಎಗರಿಸಿ, ಓಡಿ ಹೋಗಿದ್ದಾನೆ. ನಂತರ ಖಾಕಿ ಖದೀಮ ಸಿಕ್ಕಿ ಬಿದ್ದಿದ್ದೆ ರೋಚಕ.

ಸಿನಿಮೀಯ ಸ್ಟೈಲ್‌ನಲ್ಲಿ ಚೇಸ್!

ಟ್ರಕ್‌ ಚಾಲಕನ ದುಡ್ಡು ಅಪಹರಿಸಿ ಓಡಿ ಹೋಗಿದ್ದ ಆರೋಪಿಯನ್ನು ಟ್ರಕ್ ಚಾಕ 13 ಕೀ.ಮೀ ಚೇಸ್ ಮಾಡಿ, ಅವನನ್ನು ಹಿಡಿದಿದ್ದಾನೆ. ಅಷ್ಟೇ ಅಲ್ಲ, ಸಿಕ್ಕ ತಕ್ಷಣ ಹಣ ವಸೂಲಿ ಮಾಡಿ, ನಡು ರಸ್ತೆಯಲ್ಲೇ ಕಾಲರ್ ಹಿಡಿದು, ತರಾಟೆಗೆ ತೆಗೆದುಗೊಂಡು ಧರ್ಮದೇಟು ನೀಡಿದ್ದಾನೆ. ಅಷ್ಟೇ ಅಲ್ಲ ವೈರಲ್ ವಿಡಿಯೋ ಬೆನ್ನಲ್ಲೇ ಸಬ್‌ ಇನ್‌ಸ್ಪೆಕ್ಟರ್ ತಕ್ಷಣ ಅಮಾನತುಗೊಳಿಸಿದ್ದಲ್ಲದೇ ಅರೆಸ್ಟ್‌ ಮಾಡಲಾಗಿದೆ.

ವ್ಯವಸ್ಥೆಗೆ ಹಿಡಿದ ಕೈ ಗನ್ನಡಿ!

ಸಾರ್ವಜನಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸಬೇಕಾದ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯೇ ಕಳ್ಳತನಕ್ಕೆ ಇಳಿದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ತಪ್ಪು ಮಾಡಿದ ಅಧಿಕಾರಿಯನ್ನು ಇಲಾಖೆಯು ತಕ್ಷಣವೇ ಅಮಾನತುಗೊಳಿಸಿ, ಕಾನೂನು ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಇಂತಹ ಕಠಿಣ ಕ್ರಮಗಳು ಇಲಾಖೆಯ ಮೇಲಿರುವ ಸಾರ್ವಜನಿಕರ ನಂಬಿಕೆಯನ್ನು ಉಳಿಸಲು ಮತ್ತು ಇತರ ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಲು ಅತ್ಯಂತ ಅತ್ಯಗತ್ಯವಾಗಿದೆ.

ಸಾರ್ವಜನಿಕರಲ್ಲಿ ಮನೆ ಮಾಡಿದ ಆತಂಕ

ಇತ್ತೀಚಿನ ದಿನಗಳಲ್ಲಿ ಇಲಾಖೆಯ ಘನತೆಗೆ ಧಕ್ಕೆ ತರುವ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೇವಲ ಅಮಾನತು ಶಿಕ್ಷೆಗೆ ಮಾತ್ರ ಸೀಮಿತವಾಗದೆ, ಇಂತಹ ಭ್ರಷ್ಟ ಮತ್ತು ಅಪರಾಧ ಮನೋಭಾವದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ. ಆಗ ಮಾತ್ರ ಸಾರ್ವಜನಿಕ ವಲಯದಲ್ಲಿ ಖಾಕಿ ಮುಖವಾಡ ಧರಿಸಿದ ಅಪರಾಧಿಗಳಿಗೆ ಸೂಕ್ತ ನಡುಕ ಹುಟ್ಟಿಸಲು ಮತ್ತು ಪೊಲೀಸ್ ಇಲಾಖೆಯ ನೈಜ ಗೌರವವನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆ.