Asianet Suvarna News Asianet Suvarna News

Omicron Crisis: ಲಸಿಕೆ ಸಿಕ್ಕಿಲ್ಲ, ಹಾಗಾಗಿ ಹೊಸ ತಳಿ ಹುಟ್ಟಿದೆ: ಆಫ್ರಿಕಾ ಆಕ್ರೋಶ!

* ಒಮಿಕ್ರೋನ್‌ ಉಗಮಕ್ಕೆ ಪಾಶ್ಚಾತ್ಯ ದೇಶಗಳೇ ಕಾರಣ

* ಪ್ರಯಾಣ ನಿಷೇಧ ಹೇರತ್ತಿರುವುದಕ್ಕೂ ಆಫ್ರಿಕನ್ನರ ಕಿಡಿ

* ಲಸಿಕೆ ಸಿಕ್ಕಿಲ್ಲ, ಹಾಗಾಗಿ ಹೊಸ ತಳಿ ಹುಟ್ಟಿದೆ: ಆಫ್ರಿಕಾ ಆಕ್ರೋಶ

Draconian Covid travel bans are misdirected South African health minister says pod
Author
Bangalore, First Published Nov 29, 2021, 6:30 AM IST
  • Facebook
  • Twitter
  • Whatsapp

ನವದೆಹಲಿ(ನ.29): ಜಗತ್ತಿಗೆ ಹೊಸ ತಲೆನೋವು ತಂದಿರುವ ಒಮಿಕ್ರೋನ್‌ ತಳಿ (Omicron Varient) ಬೋಟ್ಸ್‌ವಾನಾದಲ್ಲಿ ಉಗಮವಾಗಿದ್ದಕ್ಕೆ ಶ್ರೀಮಂತ ಪಾಶ್ಚಾತ್ಯ ದೇಶಗಳು (Western Nations) ತಮಗೆ ಸರಿಯಾಗಿ ಲಸಿಕೆ ಪೂರೈಸದಿದ್ದುದೇ ಕಾರಣ ಎಂದು ಆಫ್ರಿಕನ್‌ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ಕೋವಿಡ್‌ ವಿಷಯದಲ್ಲಿ ತಮ್ಮನ್ನು ಮೂಲೆಗೆ ತಳ್ಳಿ, ಈಗ ಒಮಿಕ್ರೋನ್‌ ವೈರಸ್‌ ಹರಡುತ್ತದೆ ಎಂಬ ಕಾರಣಕ್ಕೆ ಒಂದಾದ ಮೇಲೊಂದು ದೇಶಗಳು ಆಫ್ರಿಕನ್‌ ದೇಶಗಳಿಗೆ ವಿಮಾನ ಪ್ರಯಾಣ ನಿಷೇಧಿಸುತ್ತಿರುವುದಕ್ಕೂ (Ban On Flights)  ಕಿಡಿಕಾರಿವೆ.

ಶ್ರೀಮಂತ ದೇಶಗಳು ಮೊದಲಿನಿಂದಲೂ ತಮಗೆ ಅಗತ್ಯವಿರುವುದಕ್ಕಿಂತ ಹೆಚ್ಚು ಕೋವಿಡ್‌ ಲಸಿಕೆ (Covid Vaccine) ದಾಸ್ತಾನಿಟ್ಟುಕೊಂಡು ಕುಳಿತಿವೆ. ಹೀಗಾಗಿ ಆಫ್ರಿಕನ್‌ ದೇಶಗಳಿಗೆ ಲಸಿಕೆ ದೊರೆಯದೆ, ಈವರೆಗೆ ಒಟ್ಟಾರೆ ಶೇ.11 ಜನ ಮಾತ್ರ ಒಂದು ಡೋಸ್‌ ಲಸಿಕೆ ಪಡೆಯುವಂತಾಗಿದೆ. ಜನರಿಗೆ ಅತಿ ಕಡಿಮೆ ಪ್ರಮಾಣದಲ್ಲಿ ಲಸಿಕೆ ದೊರೆತಿರುವುದರಿಂದಲೇ ಕೊರೋನಾ ವೈರಸ್‌ ರೂಪಾಂತರಗೊಂಡು ಒಮಿಕ್ರೋನ್‌ ತಳಿ ಸೃಷ್ಟಿಯಾಗಿದೆ. ನಾವು ಆಧುನಿಕ ವಿಧಾನದ ಮೂಲಕ ಹೊಸ ತಳಿಯನ್ನು ಬೇಗ ಪತ್ತೆಹಚ್ಚಿ ಜಗತ್ತಿಗೆ ತಿಳಿಸಿದ್ದಕ್ಕೆ ಈಗ ಜಗತ್ತು ನಮಗೇ ಶಿಕ್ಷೆ ನೀಡುತ್ತಿದೆ ಎಂದು ದಕ್ಷಿಣ ಆಫ್ರಿಕಾ ಮುಂತಾದ ದೇಶಗಳು ಭಾನುವಾರ ಆಕ್ರೋಶ ವ್ಯಕ್ತಪಡಿಸಿವೆ.

Covid Crisis: ರಾಷ್ಟ್ರಪತಿ ಕೋವಿಂದ್ VVIP ಡ್ಯೂಟಿ ಮಾಡುತ್ತಿದ್ದ 19 ಪೊಲೀಸರಿಗೆ ಕೊರೋನಾ, ಭಾರೀ ಆತಂಕ!

ಕಡಿಮೆ ಲಸಿಕೆ ಪಡೆದಿರುವ ಬಡ ದೇಶಗಳ ಬೆಂಬಲಕ್ಕೆ ಮುಂದುವರಿದ ದೇಶಗಳು ನಿಲ್ಲುವುದನ್ನು ಬಿಟ್ಟು ಕೊರೋನಾ ಕಂಡುಬಂದ ಆರಂಭಿಕ ಸಮಯದ ರೀತಿಯಲ್ಲಿ ಈಗಲೂ ಪ್ರಯಾಣ ನಿರ್ಬಂಧಗಳನ್ನು ಹೇರುತ್ತಿರುವುದು ಸರಿಯಲ್ಲ. ಪಾಶ್ಚಾತ್ಯ ದೇಶಗಳು ಒಮಿಕ್ರೋನ್‌ಗೆ ಅತಿಯಾದ ಪ್ರತಿಕ್ರಿಯೆ ನೀಡುತ್ತಿವೆ ಎಂದೂ ಆಫ್ರಿಕನ್ನರು ಕಿಡಿಕಾರಿದ್ದಾರೆ.

ಹೊಸ ತಳಿ ಹೇಗೆ ಸೃಷ್ಟಿಯಾಗುತ್ತದೆ?

ಕೊರೋನಾವೈರಸ್‌ (Coronavirus) ಆರಂಭದಿಂದಲೂ ನಿರಂತರವಾಗಿ ರೂಪಾಂತರಗೊಳ್ಳುತ್ತಾ ತನ್ನ ಮೂಲ ರೂಪಕ್ಕಿಂತ ಹೆಚ್ಚು ಶಕ್ತಿ ಪಡೆದುಕೊಳ್ಳುತ್ತಾ ಬರುತ್ತಿದೆ. ಲಸಿಕೆ ಪಡೆಯದ ಜನರು ಈ ವೈರಸ್‌ ಹೆಚ್ಚೆಚ್ಚು ರೂಪಾಂತರಗೊಳ್ಳಲು ಕಾರಣರಾಗುತ್ತಾರೆ. ಕೊರೋನಾವೈರಸ್‌ನ ಲಕ್ಷಣವೆಂದರೆ ಅದರ ಕೊಂಬಿನಂತಹ ಪ್ರೊಟೀನ್‌ ಕೋಶಗಳು ಮನುಷ್ಯನ ಜೀವಕೋಶದೊಳಗೆ ಹೊಕ್ಕು ಸೋಂಕು ಹರಡುತ್ತವೆ. ಲಸಿಕೆಗಳು ಈ ಕೊಂಬುಗಳನ್ನೇ ಗುರಿಯಾಗಿಸಿಕೊಂಡು ವೈರಸ್‌ ಹರಡುವುದನ್ನು ತಡೆಯುತ್ತವೆ. ಲಸಿಕೆ ಪಡೆಯದ ವ್ಯಕ್ತಿಯ ದೇಹದೊಳಗೆ ವೈರಸ್‌ ಹೊಕ್ಕಿದರೆ ಅದು ಜೀವಕೋಶಗಳನ್ನು ಆಕ್ರಮಿಸಿಕೊಳ್ಳುತ್ತದೆ. ನಂತರ ತನ್ನ ಸಾವಿರಾರು ಪ್ರತಿರೂಪಗಳನ್ನು ಸೃಷ್ಟಿಸತೊಡಗುತ್ತದೆ. ಪ್ರತಿರೂಪವನ್ನು ಸೃಷ್ಟಿಸುವಾಗ ಏನಾದರೂ ತಪ್ಪಾದರೆ ಹೊಸ ತಳಿಯೊಂದು ಸೃಷ್ಟಿಯಾಗುತ್ತದೆ. ಈ ಹೊಸ ತಳಿಯು ಸುಲಭವಾಗಿ ಇನ್ನೊಂದು ದೇಹಕ್ಕೆ ಪ್ರವೇಶಿಸುತ್ತದೆ. ಕ್ರಮೇಣ ಅದರ ಸಂತತಿ ಹೆಚ್ಚುತ್ತದೆ.

Omicron Varient: ಹೊಸ ತಳಿಯ ವೈರಸ್ ಬಗ್ಗೆ ಆಘಾತಕಾರಿ ಮಾಹಿತಿ ಬಿಚ್ಚಿಟ್ಟ AIIMS ಮುಖ್ಯಸ್ಥ!

 

ಕೊರೋನಾ ವೈರಸ್‌ನ ಹೊಸ ರೂಪಾಂತರವಾದ ಒಮಿಕ್ರಾನ್ ರೂಪಾಂತರಿ (Omicron variant of Coronavirus)  ಮತ್ತೊಮ್ಮೆ ಪ್ರಪಂಚದಾದ್ಯಂತ ಭೀತಿಯುಂಟು ಮಾಡಿದೆ. ಈ ರೂಪಾಂತರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಇದೀಗ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ (AIIMS director Dr Randeep Guleria) ಒಮಿಕ್ರಾನ್ ಬಗ್ಗೆ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕೊರೋನಾದ ರೂಪಾಂತರಿ ತಳಿ ಒಮಿಕ್ರಾನ್‌ನ 30 ಕ್ಕೂ ಹೆಚ್ಚು ಬಾರಿ ರೂಪಾಂತರ ಹೊಂದಿದೆ  ಎಂದು ಡಾ. ರಣದೀಪ್ ಗುಲೇರಿಯಾ ಹೇಳಿದ್ದು, ಇದರ ವಿರುದ್ಧ ಲಸಿಕೆಗಳ (Vaccines) ಪರಿಣಾಮಕಾರಿತ್ವವನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಬೇಕಾಗಿದೆ ಎಂದಿದ್ದಾರೆ.

ಕೊರೋನಾದ ಈ ಹೊಸ ತಳಿ ಈಗಾಗಲೇ ಹಾಕಿಸಿಕೊಂಡ ಲಸಿಕೆಯ ಪರಿಣಾಮವನ್ನು ಸಹ ತೊಡೆದುಹಾಕಬಹುದು ಎಂದು ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ. ಆದರೆ, ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಒಮಿಕ್ರಾನ್ ರೂಪಾಂತರಿ ತಳಿ ಲಸಿಕೆ ಹಾಕಿದ ಜನರಿಗೆ ಸಹ ಸೋಂಕು ತರುತ್ತದೆ ಎಂದು ಅವರು ಹೇಳಿದರು. ಈ ಕುರಿತು ಸಂಶೋಧನೆ ನಡೆಸುತ್ತಿದ್ದೇವೆ. ಸದ್ಯಕ್ಕೆ ಭಾರತದಲ್ಲಿ (India) ಈ ವೇರಿಯಂಟ್ ಸೋಂಕಿತರು ಯಾರೂ ಪತ್ತೆಯಾಗಿಲ್ಲ ಎಂಬುದು ಸಮಾಧಾನದ ಸಂಗತಿ ಎಂದಿದ್ದಾರೆ. ಡಾ ಗುಲೇರಿಯಾ ಅವರು ಅಂತರಾಷ್ಟ್ರೀಯವಾಗಿ ಪ್ರಯಾಣಿಸುವ ಜನರಲ್ಲಿ ಹಠಾತ್ ಹೆಚ್ಚಳವಾಗಿದೆ. ಹೀಗಾಗಿ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

 

Follow Us:
Download App:
  • android
  • ios