Asianet Suvarna News Asianet Suvarna News

Video ಬಾಲಿವುಡ್ ಜನಪ್ರಿಯ ಸಾಂಗ್ ಹಾಡಿ ಭಾರತೀಯರ ಮನಗೆದ್ದ ಮಲೇಷಿಯಾ ಪ್ರಧಾನಿ ಇಬ್ರಾಹಿಂ!

ಭಾರತ ಪ್ರವಾಸದಲ್ಲಿ ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಭಾರತೀಯರ ಮನ ಗೆದ್ದಿದ್ದಾರೆ.  ಬಾಲಿವುಡ್‌ನ ಜನಪ್ರಿಯ ಹಾಡು ಹಾಡುವ ಮೂಲಕ ಅನ್ವರ್ ಇಬ್ರಾಹಿಂ ಅಚ್ಚರಿ ಮೂಡಿಸಿದ್ದಾರೆ. ಈ ವಿಡಿಯೋಗೆ ಭಾರಿ ಮೆಚ್ಚುಗೆ ಹಾಗೂ ಕಮೆಂಟ್ಸ್ ವ್ಯಕ್ತವಾಗುತ್ತಿದೆ.
 

Dost dost na raha Malaysia PM Anwar Ibrahim sings Bollywood song during India visit ckm
Author
First Published Aug 23, 2024, 8:47 AM IST | Last Updated Aug 23, 2024, 8:47 AM IST

ದೆಹಲಿ(ಆ.23) ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ಹಾಗೂ ಒಪ್ಪಂದಕ್ಕೆ ಮುನ್ನುಡಿ ಬರೆದಿದ್ದಾರೆ. ಇದೇ ವೇಳೆ ಪ್ರವಾಸದ ಕೊನೆಯ ದಿನ ಇಬ್ರಾಹಿಂಗೆ ವಿದಾಯದ ಔತಣಕೂಟ ಆಯೋಜಿಸಲಾಗಿತ್ತು. ಈ ವೇಳೆ ಇಬ್ರಾಹಿಂ ಬಾಲಿವುಡ್‌ನ ಅತ್ಯಂತ ಜನಪ್ರಿಯ ಹಾಡು ದೋಸ್ತ್ ದೋಸ್ತ್ ನಾ ರಹಾ ಹಾಡು ಹಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋಗಳು ಹರಿದಾಡುತ್ತಿದೆ.

ಅನ್ವರ್ ಇಬ್ರಾಹಿಂ ಮಲೇಷಿಯಾದಲ್ಲಿ 2022ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತಕ್ಕೆ ಮೊದಲ ಬಾರಿಗೆ ಬೇಟಿ ನೀಡಿದ್ದಾರೆ. ಆಗಸ್ಟ್ 19 ರಿಂದ 3 ದಿನಗಳ ಭಾರತ ಭೇಟಿಯಲ್ಲಿದ್ದ ಮಲೇಷಿಯಾ ಪ್ರಧಾನಿಗೆ ಆಗಸ್ಟ್ 21ರಂದು ವಿಶೇಷ ಔತಣಕೂಟ ಆಯೋಜಿಸಲಾಗಿತ್ತು. ದೆಹಲಿಯ ತಾಜ್ ಮಹಲ್ ಹೊಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನ್ವರ್ ಇಬ್ರಾಹಿಂ, 1964ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಂಗಮ್ ಚಿತ್ರದ ದೋಸ್ತ್ ದೋಸ್ತ್ ನಾ ರಹಾ ಹಾಡು ಹಾಡಿದ್ದಾರೆ.

ಈಸಿಯಾಗಿ ಪಯಣಿಸೋ, ಸುಲಭವಾಗಿ ಜೀವನ ಮಾಡ್ಬೇಕು ಅಂದ್ರೆ ಈ ದೇಶಕ್ಕೆ ವಿಸಿಟ್ ಮಾಡಿ!

ಗಾಯಕ ಮುಕೇಶ್ ಹಾಡಿರುವ ಈ ಹಾಡನ್ನು ಅಷ್ಟೇ ಸುಶ್ರಾವ್ಯವಾಗಿ ಅನ್ವರ್ ಇಬ್ರಾಹಿಂ ಹಾಡಿದ್ದಾರೆ. ಅನ್ವರ್ ಇಬ್ರಾಹಿಂ ಜೊತೆ ಇತರ ಗಣ್ಯರು, ಅತಿಥಿಗಳು ಈ ಹಾಡು ಗುನುಗಿದ್ದಾರೆ. ಇದೇ ವೇಳೆ ಬಾಲಿವುಡ್‌ನ ಶಮ್ಮಿ ಕಪೂರ್ ಚಿತ್ರಗಳ ಕುರಿತು ತಮಗಿರುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಹಲವು ಬಾಲಿವುಡ್ ಚಿತ್ರದ ಹಾಡುಗಳನ್ನು ಅನ್ವರ್ ಗುನುಗಿದ್ದಾರೆ. 

 

 

ಅನ್ವರ್ ಹಾಡಿದ ಈ ವಿಡಿಯೋಗೆ ಭಾರಿ ಕಮೆಂಟ್ ವ್ಯಕ್ತವಾಗಿದೆ. ಮಲೇಷಿಯಾ ಪ್ರಧಾನಿ ಅನ್ವರ್ ಉತ್ತಮ ಗಾಯಕರೂ ಹೌದು, ಅವರ ಬೇಸ್ ವಾಯ್ಸ್ ಉತ್ತವಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಹಾಡಿನ ತುಣುಕು ಹಾಡಿದರೂ ಈ ಹಾಡು ಭಾರತ ಹಾಗೂ ಮಲೇಷಿಯಾ ನಡುವಿನ ಬಾಂಧವ್ಯ ಉತ್ತಮಪಡಿಸಿದೆ. ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

300 ಲಕ್ಷುರಿ ಕಾರ್ಸ್, ಖಾಸಗಿ ಸೇನೆ, ಜೆಟ್.. ಅಬ್ಬಬ್ಬಾ! ಮೈ ನವಿರೇಳಿಸುತ್ತೆ ಮಲೇಷ್ಯಾ ರಾಜನ ವೈಭೋಗ

ಭಾರತ ಭೇಟಿಯಲ್ಲಿ ಅನ್ವರ್ ಇಬ್ರಾಹಿಂ, ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದಾರೆ. ಮಲೇಷಿಯಾದ ಮಾಜಿ ಪ್ರಧಾನಿ ಮಹಾಥಿರ್ ಮೊಹಮ್ಮದ್ ಅವಧಿಯಲ್ಲಿ ಹಳಸಿದ್ದ ಸಂಬಂಧಗಳನ್ನು ಪುನರ್ ಸ್ಥಾಪಿಸುವ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ಮೋದಿ ಜೊತೆ ಮಾತುಕತೆ ಬಳಿಕ ಅನ್ವರ್, ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಮಾತುಕತೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios