ದೆಹಲಿ(ಜೂ.06): ದೆಹಲಿ ಸರ್ಕಾರ ನಡೆಸುತ್ತಿರುವ ಜಿಬಿ ಪಂತ್ ಆಸ್ಪತ್ರೆ (ಜಿಪ್‍ಎಂಆರ್) ತನ್ನ ಶುಶ್ರೂಷಾ ಸಿಬ್ಬಂದಿಗಳು ಯಾರೂ ಮಲಯಾಳಂ ಭಾಷೆಯಲ್ಲಿ ಸಂಭಾಷಿಸುವುದನ್ನು ನಿಷೇಧಿಸಿದೆ.

ದಾದಿಯರು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತನಾಡದಿದ್ದರೆ ಗಂಭೀರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಆಸ್ಪತ್ರೆಯು ನರ್ಸ್‌ಗಳಿಗೆ ಎಚ್ಚರಿಕೆ ನೀಡಿದೆ. ಇಲ್ಲಿ ಕೇರಳ ಮೂಲದ ದಾದಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಜುಲೈ 16ರ ಒಳಗೆ 1 ಲಕ್ಷ ಗಿಡ ನೆಡಲಿದ್ದಾರೆ ಉತ್ತರಾಖಂಡ್ ಪೊಲೀಸರು..

"ಜಿಪ್ಮರ್ನಲ್ಲಿ ಕೆಲಸದ ಸ್ಥಳಗಳಲ್ಲಿ ಸಂವಹನಕ್ಕಾಗಿ ಮಲಯಾಳಂ ಭಾಷೆಯನ್ನು ಬಳಸಲಾಗುತ್ತಿದೆ ಎಂಬ ಬಗ್ಗೆ ದೂರು ಬಂದಿದೆ. ಇದು ಬಹಳಷ್ಟು ಅನಾನುಕೂಲತೆಗಳಿಗೆ ಕಾರಣವಾಗಿದೆ ಎಂದು ಆಸ್ಪತ್ರೆ ಆದೇಶದಲ್ಲಿ ತಿಳಿಸಿದೆ.

ದೇಶಾದ್ಯಂತ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಕೇರಳದ ನರ್ಸಿಂಗ್ ಎಕ್ಸ್‌ಪರ್ಟ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ಕೇರಳದಲ್ಲಿ ನರ್ಸಿಂಗ್ ಕಲಿಯುವ ವಿದ್ಯಾರ್ಥಿಗಳು ಮತ್ತು ನುರಿತ ದಾದಿಯರ ಸಂಪನ್ಮೂಲ ಎಲ್ಲ ಕಡೆ ಸೇವೆ ನೀಡುತ್ತಿದೆ.