ಡೆಹ್ರಾಡೂನ್(ಜೂ.06): ವಿಶ್ವ ಪರಿಸರ ದಿನಾಚರಣೆ ಸಂದರ್ಭ ಉತ್ತರಾಖಂಡ್ ಪೊಲೀಸರು 1 lಲಕ್ಷ ಗಿಡ ನೆಡುವ ನಿರ್ಧಾರ ಮಾಡಿದ್ದಾರೆ. ಸಾಮೂಹಿಕವಾಗಿ ಗಿಡ ನೆಡುವ ಅಭಿಯಾನ ಆರಂಭಿಸಿದ ಪೊಲೀಸರು ವಿಶ್ವ ಪರಿಸರ ದಿನದಂದೇ ಗಿಡ ನೆಡುವ ಕಾಯಕ ಶುರು ಮಾಡಿದ್ದಾರೆ.

ಜುಲೈ 16ರಂದು ಅಭಿಯಾನ ಕೊನೆಗೊಳ್ಳಲಿದ್ದು, ಪೊಲೀಸ್ ಠಾಣೆ, ಆವರಣ, ಔಟ್‌ಪೋಸ್ಟ್‌ಗಳಲ್ಲಿ ಗಿಡ ನೆಡಲಾಗುತ್ತದೆ. ಪರಿಸರ ಪ್ರೇಮಿ, ಡಿಜಿಪಿ ಪದ್ಮಭೂಷಣ್ ಡಾ. ಅನಿಲ್ ಜೋಶಿ ಅವರು ಪೊಲೀಸ್ ಮುಖ್ಯ ಠಾಣೆಯಲ್ಲಿ ಮೂರು ಗಿಡ ನೆಡುವ ಮೂಲಕ ಅಭಿಯಾನ ಆರಂಭಿಸಿದ್ದಾರೆ.

ಯೋಗಿ ಆದಿತ್ಯನಾಥ್ ಹುಟ್ಟುಹಬ್ಬಕ್ಕೆ ಮೋದಿ ಶುಭಾಶಯದ ಟ್ವೀಟ್ ಮಿಸ್; ಇಲ್ಲಿದೆ ಕಾರಣ!..

ಪ್ರತಿ ಪೊಲೀಸ್‌ ಠಾಣೆಯಲ್ಲಿ 100 ಗಿಡಗಳನ್ನು ನೆಡುವ ಮೂಲಕ ರಾಜ್ಯದ 1,000 ಪೊಲೀಸ್‌ ಠಾಣೆಗಳಲ್ಲಿ ಒಟ್ಟು 1 ಲಕ್ಷ ಗಿಡಗಳನ್ನು ನೆಡಲು ಗುರಿ ಇರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಕೊರೋನಾ ಸಂಕಷ್ಟದ ಕಾಲದಲ್ಲಿ, ಹವಾಮಾನ ವೈಪರೀತ್ಯದ ಸಂದರ್ಭ ಇನ್ನಷ್ಟು ಗಿಡಗಳನ್ನು ನೆಡಬೇಕಾದ ಅಗತ್ಯ ಮತ್ತು ಪ್ರಾಮುಖ್ಯತೆಯನ್ನೂ ಅವರು ತಿಳಿಸಿದ್ದಾರೆ. ಅಂತೂ ಪೊಲೀಸರ ಈ ಕಾರ್ಯ ಶ್ಲಾಘನೀಯ.