ಆನ್‌ಲೈನ್‌ ಮೂಲಕ ಫುಡ್‌ ಆರ್ಡರ್‌| ವೆಜ್‌ ಬದಲು ನಾನ್‌ವೆಜ್‌ ಪಿಜ್ಜಾ ಕೊಟ್ಟಿದ್ದಕ್ಕೆ 1 ಕೋಟಿ ಪರಿಹಾರ!

ಲಕ್ನೋ(ಮಾ.15): ಕೆಲವೊಮ್ಮೆ ಆನ್‌ಲೈನ್‌ ಮೂಲಕ ಫುಡ್‌ ಆರ್ಡರ್‌ ಮಾಡಿದಾಗ ನಾವು ಕೇಳಿದ್ದು ಒಂದು, ಹೋಟೆಲ್‌ನವರು ತಂದುಕೊಡುವುದು ಇನ್ನೊಂದು...ಹೀಗಾಗುವುದು ಸಹಜ.

ಆದರೆ ಉತ್ತರ ಪ್ರದೇಶದ ಮಹಿಳೆಯೊಬ್ಬರು ವೆಜ್‌ ಪಿಜ್ಜಾ ಆರ್ಡರ್‌ ಮಾಡಿ, ರೆಸ್ಟೋರೆಂಟ್‌ನವರು ನಾನ್‌ವೆಜ್‌ ಪಿಜ್ಜಾ ತಂದುಕೊಟ್ಟಿದ್ದಕ್ಕೆ 1 ಕೋಟಿ ರು. ಪರಿಹಾರ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಇಲ್ಲಿನ ಗಾಜಿಯಾಬಾದ್‌ನ ದೀಪಾಲಿ ತ್ಯಾಗಿ ಮೂಲತಃ ಸಸ್ಯಾಹಾರಿ. ಇವರು ಮಾ.21, 2019ರಲ್ಲಿ ಹತ್ತಿರದ ಪಿಜ್ಜಾ ಹಟ್‌ನಿಂದ ವೆಜ್‌ ಪಿಜ್ಜಾ ಆರ್ಡರ್‌ ಮಾಡಿದ್ದರು. ಆದರೆ ರೆಸ್ಟೋರೆಂಟ್‌ ಹೋಂ ಡೆಲಿವರಿ ಮಾಡಿದ್ದ ಪಿಜ್ಜಾ ನಾನ್‌ವೆಜ್‌ ಆಗಿತ್ತು.

ಹೀಗಾಗಿ ದೀಪಾಲಿ ಅವರು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ದೂರು ನೀಡಿ, 1 ಕೋಟಿ ರು. ಪರಿಹಾರ ಕೇಳಿದ್ದಾರೆ.