ಮನೆಗೆಲಸದಾಕೆ ಇಂಗ್ಲೀಷ್‌ನಲ್ಲಿ ಮನೆ ಮಾಲಕಿಗೆ ಮೆಸೇಜ್ ಮಾಡಿದ್ದಾರೆ. ವ್ಯಾಟ್ಸಾಪ್ ಮೆಸೇಜ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಕೆಲಸದಾಕೆಯ ಇಂಗ್ಲೀಷ್ ನೋಡಿ ಹಲವರು ಅಚ್ಚರಿಗೊಂಡಿದ್ದಾರೆ.ಅಷ್ಟಕ್ಕೂ ಕೆಲಸದಾಕೆ ಸೆಂಡ್ ಮಾಡಿದ ಮೆಸೇಜ್ ಏನು?

ಮುಂಬೈ (ಜು.10) ನಗರ ಪ್ರದೇಶವಾಗಿರಲಿ ಹಳ್ಳಿಯಾಗರಿಲಿ ಇದೀಗ ಮನೆ ಕೆಲಸಕ್ಕೆ ಕೆಲಸದವರನ್ನು ನೇಮಿಸಿಕೊಳ್ಳುವುದು ಹೊಸದೇನಲ್ಲ. ನೇಮಕ ಮಾಡಿದ ಬಳಿಕ ಹೇಳದೆ ಕೇಳದೆ ರಜೆ ಹಾಕ್ತಾರೆ, ಬರೋದೇ ಇಲ್ಲ ಸೇರಿದಂತೆ ಹಲವು ದೂರು ದುಮ್ಮಾಗಳು ಬೇರೆ. ಇದೀಗ ಮನೆ ಕೆಲಸಕ್ಕೆ ಇಬ್ಬರು ಸಹೋದರಿಯನ್ನು ಮನೆ ಮಾಲಕಿ ನೇಮಿಸಿಕೊಂಡಿದ್ದಾರೆ. ಈ ಮನ ಕೆಲಸದಾಕೆ ಮಾಡಿದ ಇಂಗ್ಲೀಷ್ ಮೆಸೇಜೊಂದು ಇದೀಗ ಭಾರಿ ಚರ್ಚೆಯಾಗುತ್ತಿದೆ. ಮನೆ ಕೆಲಸದಾಕೆಯ ಇಂಗ್ಲೀಷ್ ನೋಡಿ ಹಲವರು ಅಚ್ಚರಿಗೊಂಡಿದ್ದಾರೆ. ಇಷ್ಟು ಇಂಗ್ಲೀಷ್ ನನಗೂ ಬರುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಮುಂಬೈ ನಿವಾಸಿ ರಿಚಾ ತನ್ನ ಮನೆ ಕೆಲಸದಾಕೆ ಕಳಹಿಸಿದ ಮೆಸೇಜ್ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಇಬ್ಬರು ಸಹೋದರಿಯರು ಒಂದು ದಿನ ರಜೆ ತೆಗೆದುಕೊಳ್ಳುತ್ತಿರುವುದಾಗಿ ವ್ಯಾಟ್ಸಾಪ್ ಮೆಸೇಜ್ ಕಳುಹಿಸಿದ್ದಾರೆ. ಇಂಗ್ಲೀಷ್‌ನಲ್ಲಿ ಈ ಮೆಸೇಜ್ ಕಳುಹಿಸಿದ ಕಾರಣ ಮಾಲಕಿ ಈ ಮೆಸೇಜನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಮನೆಗೆಲಸದಾಕೆ ಕಳುಹಿಸಿದ ಮೆಸೇಜ್ ಏನು?

ಮನೆ ಕೆಲಸದಾಕೆ ಕಳುಹಿಸಿದ ಸಂದೇಶವೇನು?

ದೀದಿ, ಇದು ಮಾಧುರಿ. ನಿಮಗೆ ಮೊದಲೇ ತಿಳಿಸಲು ನಮಗೆ ಮರೆತು ಹೋಗಿದೆ. ನಮಗೆ ಬರಲು ಸಾಧ್ಯವಾಗುತ್ತಿಲ್ಲ. ನಾವು ನಾಳೆ ರಜೆ ತೆಗೆದುಕೊಳ್ಳುತ್ತಿದ್ದೇವೆ ಎಂಬುದನ್ನು ಇಂಗ್ಲೀಷ್‌‌ನಲ್ಲಿ ಕಳುಹಿಸಿದ್ದಾರೆ (Didi this is Madhuri we forgot to inform that we are not coming we are taking holiday tomorrow ) ಈ ಸಂದೇಶವನ್ನು ಮನೆಗೆಲಸದಾಕೆ ಕಳುಹಿಸಿದ್ದಾರೆ.

Scroll to load tweet…

ಮೆಸೇಜ್ ನೋಡಿ ಹೆಮ್ಮೆ ಪಟ್ಟ ಮಾಲಕಿ

ಮಸೇಜ್ ನೋಡಿದ ಮನೆ ಮಾಲಕಿ ರಿಚಾಗೆ ಸಿಟ್ಟು ಬರಲಿಲ್ಲ. ಬದಲಾಗಿ ಮೆಗೆಲಸದಾಕೆಯ ಇಂಗ್ಲೀಷ್, ಇಂಗ್ಲೀಷ್ ಕಲಿಯುತ್ತಿರುವ ರೀತಿಗೆ ಹೆಮ್ಮೆಯಾಗಿದೆ. ಇದಕ್ಕೆ ಒಕೆ ಎಂದು ರಿಚಾ ಪ್ರತಿಕ್ರಿಯಿಸಿದ್ದಾರೆ. ತಕ್ಷಣವೇ ಥ್ಯಾಂಕ್ಯೂ ದೀದಿ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಸ್ಕ್ರೀನ್‌ಶಾಟ್ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ರಿಚಾ ಹಂಚಿಕೊಂಡಿದ್ದಾರೆ. ಇದೇ ವೇಳೆ ನನ್ನ ಮನೆಗೆಲದಾಕೆ ಕ್ಯೂಟಿ ಎಂದು ಹೇಳಿಕೊಂಡಿದ್ದಾರೆ.

ಸಣ್ಣ ಅಕ್ಷರ ತಪ್ಪುಗಳನ್ನು ಹೊರತುಪಡಿಸಿದರೆ ಮನಗೆಲಸದಾಕೆಯ ಇಂಗ್ಲೀಷ್ ಉತ್ತಮವಾಗಿದೆ. ಆಕೆ ಇಂಗ್ಲೀಷ್ ಕಲಿಯುತ್ತಿದ್ದಾಳೆ ಎಂದು ರಿಚಾ ಹೇಳಿದ್ದಾರೆ.ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ಸರಿಯಾದ ಇಂಗ್ಲೀಷ್ ನನಗೆ ಬರುತಿಲ್ಲ ಎಂದಿದ್ದಾರೆ. ನಿಮ್ಮ ಮನೆ ಕೆಲಸದಾಕೆ ಕನಿಷ್ಠ ನಿಮಗೆ ಮಾಹಿತಿ ನೀಡಿ ರಜೆ ಪಡೆಯುತ್ತಿದ್ದಾರೆ. ನಮ್ಮಲ್ಲಿ ಹಾಗಲ್ಲ, ಸಮಯ ಕಳೆದರೂ ಇನ್ನೂ ಬಂದಿಲ್ಲ ಎಂದು ನಾವೇ ಫೋನ್ ಮಾಡಿ ಕೇಳಬೇಕು. ಆವಾಗಲೇ ನಮಗೆ ಅವರು ರಜೆ ಎಂದು ತಿಳಿಯುತ್ತದೆ.ಇಂಗ್ಲೀಷ್ ಅಲ್ಲಾ, ಸ್ಥಳೀಯ ಭಾಷೆಯಲ್ಲಿ ಖಡಕ್ ಮಾತಿಗೆ ನಮ್ಮ ಬಳಿ ಉತ್ತರವೇ ಇರುವುದಿಲ್ಲ ಎಂದು ಹಲವರು ತಮ್ಮ ತಮ್ಮ ಅನುಭವ ಹಂಚಿಕೊಂಡಿದ್ದಾರೆ.