* ಹಾಸ್ಪಿಟಲ್‌ನಲ್ಲಿ ಅರಳಿದ ಪ್ರೀತಿ* ಅಮ್ಮನಿಗೆ ಚಿಕಿತ್ಸೆ ಕೊಡಿಸಲು ಬಂದ ಯುವತಿಯ ಪ್ರೇತಿಯಲ್ಲಿ ಬಿದ್ದ ಡಾಕ್ಟರ್* ಐದು ದಿನದ ಪ್ರೇತಿ, ಏಳು ದಿನದಲ್ಲಿ ಮದುವೆ

ಹಾಜಿಪುರ(ಮೇ.04): ಪ್ರೀತಿ ಕುರುಡು, ಅದು ಜಾತಿ, ದಾನ, ವರದಕ್ಷಿಣೆ ನೋಡುವುದಿಲ್ಲ ಎಂದು ಹೇಳಲಾಗುತ್ತದೆ. ಪ್ರೀತಿ ನಿಜವಾಗಿದ್ದರೆ ಅದೆಷ್ಟೇ ಅಡೆ ತಡೆಗಳಿದ್ದರೂ ಜೋಡಿಯನ್ನು ಒಂದಾಗಿಸುತ್ತದೆ. ಬಿಹಾರದಲ್ಲೂ ಸದ್ಯ ಇದೇ ರೀತಿಯ ಪ್ರೇಮ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೇವಲ ಐದೇ ದಿನಗಳಲ್ಲಿ ಜೋಡಿ ಮನೆಯವರನ್ನೆಲ್ಲಾ ಒಪ್ಪಿಸಿ ವರದಕ್ಷಿಣೆ ರಹಿತ ಮದುವೆಯಾಗಿದೆ. ವಿಶೇಷವೆಂದರೆ ಆಸ್ಪತ್ರೆಯಿಂದ ಶುರುವಾದ ಈ ಪ್ರೀತಿ, ದೇಗುಲಕ್ಕೆ ತಲುಪಿದೆ. ಇಲ್ಲಿ ದಂಪತಿ ದೇವರನ್ನು ಸಾಕ್ಷಿಯಾಗಿ ಮದುವೆಯಾಗಿದ್ದಾರೆ.

ವಾಸ್ತವವಾಗಿ, ಹಾಜಿಪುರದ ಸದರ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತೆಯೊಬ್ಬರು ತನ್ನ ತಾಯಿಗೆ ಚಿಕಿತ್ಸೆ ನೀಡಲು ಬಂದ ಯುವತಿಗೆ ಹೃದಯ ಕೊಟ್ಟಿದ್ದಾರೆ. ಅಲ್ಲದೇ ಈ ವೈದ್ಯಕೀಯ ಸಿಬ್ಬಂದಿ ಐದೇ ದಿನದಲ್ಲಿ ತನ್ನ ಪ್ರೇಯಸಿಯನ್ನು ಮಡಿದಿಯಾಗಿಸಿಕೊಂಡಿದ್ದಾನೆ, ನಗರದ ಪಾತಾಳೇಶ್ವರ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವರದಕ್ಷಿಣೆ ರಹಿತ ಮದುವೆ ಆಗಿದ್ದಾನೆ. ವಾಸ್ತವವಾಗಿ, ಪ್ರೀತಿ ಸಿಂಗ್ ತನ್ನ ತಾಯಿಯನ್ನು ಚಿಕಿತ್ಸೆಗಾಗಿ ಹಾಜಿಪುರ ಸದರ್ ಆಸ್ಪತ್ರೆಗೆ ಕರೆದೊಯ್ದಿದ್ದರು, ಅಲ್ಲಿ ಅವರು ಪೋಸ್ಟಿಂಗ್‌ನಲ್ಲಿದ್ದ ಆರೋಗ್ಯ ಕಾರ್ಯಕರ್ತ ಮಣಿಂದರ್ ಕುಮಾರ್ ಸಿಂಗ್ ಅವರನ್ನು ಭೇಟಿಯಾದರು.

ಆ ಭೇಟಿ ಯಾವಾಗ ಪ್ರೇಮಕ್ಕೆ ತಿರುಗಿತು ಎಂಬುದು ಇಬ್ಬರಿಗೂ ತಿಳಿಯಲಿಲ್ಲ. ತಡ ಮಾಡದೆ ಹುಡುಗ ಹುಡುಗಿಯ ಮುಂದೆ ಮದುವೆಯ ಪ್ರಸ್ತಾಪ ಇಟ್ಟಿದ್ದಾನೆ. ಹುಡುಗಿಗೆ ತಂದೆಯಿಲ್ಲದ ಕಾರಣ, ಹುಡುಗಿ ತಾಯಿಯ ಅನುಮತಿ ತೆಗೆದುಕೊಳ್ಳುವಂತೆ ಹೇಳಿದ್ದಾಳೆ, ಅದರ ಮೇಲೆ ಹುಡುಗ ಯುವತಿಯ ತಾಯಿಗೆ ವರದಕ್ಷಿಣೆ ರಹಿತ ಮದುವೆಯನ್ನು ಪ್ರಸ್ತಾಪಿಸಿದನು, ಅದನ್ನು ಹುಡುಗಿಯ ತಾಯಿ ಸಂತೋಷದಿಂದ ಒಪ್ಪಿಕೊಂಡರು. ಈ ಪ್ರೇಮ ಪ್ರಕರಣದಲ್ಲಿ ಐದು ದಿನಗಳ ಪ್ರೇಮ ಏಳನೇ ದಿನಕ್ಕೆ ಪವಿತ್ರ ವಿವಾಹವಾಗಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಗರದ ಪಾತಾಳೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ವಿವಾಹ ನೆರವೇರಿತು. ಈ ಮದುವೆಯಲ್ಲಿ, ಆರೋಗ್ಯ ಕಾರ್ಯಕರ್ತರು ಮದುವೆಯ ಮೆರವಣಿಗೆಯಂತೆ ನೃತ್ಯ ಮಾಡುತ್ತಿರುವುದು ಕಂಡುಬಂದರೆ, ಆರೋಗ್ಯ ಕಾರ್ಯಕರ್ತರಾದ ಮಣಿಂದರ್ ಮತ್ತು ಪ್ರೀತಿ ಕೂಡ ಪರಸ್ಪರರ ಪ್ರೀತಿಯನ್ನು ಕಂಡು ತುಂಬಾ ಸಂತೋಷಪಟ್ಟಿದ್ದಾರೆ.

ಮದುವೆಯ ಮೊದಲಲ್ಲ ನಂತರ ಓಡಿ ಹೋದ ವಧು ವರ

ಮದುವೆಯ ಮೊದಲು ತಮ್ಮ ಪ್ರೇಮವನ್ನು ಉಳಿಸಿಕೊಳ್ಳಲು ಹುಡುಗ ಹುಡುಗಿ ಓಡಿ ಹೋಗುವುದು ಊರು ಬಿಡುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಮದುವೆಯಾದ ನಂತರ ವಧು ಹಾಗೂ ವರ ಓಡಿ ಹೋಗಿದ್ದಾರೆ. ಹಾಗಂತ ಇವರೇನು ಪ್ರೀತಿ ಉಳಿಸಿಕೊಳ್ಳುವ ಸಲುವಾಗಿಯೋ, ಪೋಷಕರಿಗೆ ಹೆದರಿಯೋ ಓಡಿ ಹೋದಂತೆ ಕಾಣುತ್ತಿಲ್ಲ. ಇವರೇನು ಸಂಪ್ರದಾಯವನ್ನು ಪಾಲಿಸುವಂತೆ ಕಾಣಿಸುತ್ತಿದೆ. ಆದರೆ ಇವರು ಏಕೆ ಓಡಿ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಎಲ್ಲೋ ಉಲ್ಲೇಖವಿಲ್ಲ. ಆದರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

ಈ ವಿಡಿಯೋವನ್ನು ಎಲ್ಲಿ ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಉಲ್ಲೇಖವಿಲ್ಲ. ಆದರೆ ವಿಡಿಯೋದಲ್ಲಿ ಕಾಣಿಸುವಂತೆ ಆಗ ತಾನೇ ಮದುವೆಯಾದಂತೆ ಕಾಣಿಸುವ ಜೋಡಿಯೊಂದು ಮಣ್ಣಿನ ರಸ್ತೆಯಲ್ಲಿ ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ಓಡುತ್ತಿದ್ದಾರೆ. ವರ ಪೇಟ ತೊಟ್ಟು ಸೂಟು ಧರಿಸಿ ಕೈಯಲ್ಲೊಂದು ಖಡ್ಗ ಹಿಡಿದು ಓಡುತ್ತಿದ್ದರೆ ವಧು ಆತನಿಗೆ ಪೈಪೋಟಿ ನೀಡುತ್ತಿದ್ದಾಳೆ. ಇವರಿಬ್ಬರು ಒಟ್ಟಿಗೆ ಓಡಬೇಕೆಂಬ ನಿಯಮವಿದೆಯೇನೋ ಗೊತ್ತಿಲ್ಲ. ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟು ಹೋಗದಂತೆ ಪಿಂಕ್ ಬಣ್ಣದ ಶಾಲನ್ನು ಇಬ್ಬರಿಗೂ ಕಟ್ಟಲಾಗಿದೆ. ಇನ್ನು ಇವರಿಬ್ಬರ ಮುಂದೆ ವಾಹನವೊಂದು ಹೋಗುತ್ತಿದ್ದು, ಅದನ್ನು ಹತ್ತಲು ಓಡಿ ಹೋಗುವಂತೆ ಕಾಣಿಸುತ್ತಿದೆ. ಜೊತೆಗೆ ಮಣ್ಣಿನ ರಸ್ತೆಯಲ್ಲಿ ವಾಹನ ಮುಂದೆ ಸಾಗಿದ್ದರಿಂದ ಧೂಳು ಹಾರುತ್ತಿದ್ದು ಧೂಳಿನ ಮಧ್ಯೆ ಈ ಜೋಡಿ ಓಡುತ್ತಿರುವುದು ನೋಡಿದರೆ ಅಯ್ಯೋ ಅನಿಸುತ್ತಿದೆ. 

ಆರ್‌ಕೆ ಖಾನ್ ಎಂಬ ಬಳಕೆದಾರರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. 12.4 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜನರಿಗೂ ಈ ನೂತನ ವಧುವರರ ಓಟ ಕುತೂಹಲ ಕೆರಳಿಸಿದ್ದು, ಏಕೆ ಓಡಿ ಹೋಗುತ್ತಿದ್ದೀರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.