ಮುಂಬೈ(ಮೇ.04): ಕೊರೋನಾ ವಾರಿಯರ್ಸ್ ಮೇಲೆ ದಾಳಿ ಮಾಡಿ ಜೈಲು ಸೇರಿದ ಘಟನೆಗಳಿಗೇನು ಕಡಿಮೆ ಇಲ್ಲ. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಇದೀಗ ಆಸ್ಪತ್ರೆ ದಾಖಲಾದ ಕೊರೋನಾ ಸೋಂಕಿತನ ಮೇಲೆ ಮುಂಬೈನ ವೋಕ್‌ಹಾರ್ಡ್ ಆಸ್ಪತ್ರೆ ವೈದ್ಯ ಲೈಂಗಿಕ ದೌರ್ಜನ್ಯ ಎಸೆಗಿರುವ ಘಟನೆ ನಡೆದಿದೆ.  ವೈದ್ಯನ ಮೇಲೆ ಪ್ರಕರಣ ದಾಖಲಾಗಿದ್ದು, ಇದೀಗ ವೈದ್ಯನನ್ನು ಬಂಧಿಸುವ ಬದಲು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ತಬ್ಲೀಘಿ ಅವಾಂತರ: 25 ಮಂದಿ BSF ಯೋಧರಿಗೆ ಕೊರೋನಾ ಸೋಂಕು!

ಮೇ 01 ರಂದು ಈ ಘಟನೆ ನಡೆದಿದೆ. ಕೊರೋನಾ ಸೋಂಕಿನ ಕಾರಣ ಐಸಿಯುಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುರುಷ ಸೋಂಕಿತನನ್ನು 34 ವರ್ಷದ ಡಾಕ್ಟರ್ ಲೈಂಕಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ. ಈ ಕುರಿತು ಅಗ್ರಿಪಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ದಿನ 2530 ಜನರಿಗೆ ಸೋಂಕು: ದೇಶದಲ್ಲಿ 41000 ಗಡಿದಾಟಿದ ಸೋಂಕಿತರು!.

ಪೊಲೀಸರು ವೈದ್ಯನ ಮೇಲೆ ಐಪಿಸಿ ಸೆಕ್ಷನ್ 377, 269 ಹಾಗೂ 270ರ ಅಡಿಯಲ್ಲಿ ಪ್ರಕಣ ದಾಖಲಿಸಿದ್ದಾರೆ. ಇತ್ತ ಕೇಸ್ ದಾಖಲಾಗುತ್ತಿದ್ದಂತೆ ವೋಕ್‌ಹಾರ್ಡ್ ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯನನ್ನು ಅಮಾನತು ಮಾಡಿದೆ. ಕೊರೋನಾ ಸೋಂಕಿತರ ಸಂಪರ್ಕದಲ್ಲಿದ್ದ ಕಾರಣಕ್ಕೆ ವೈದ್ಯನನ್ನು ಥಾಣೆಯಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಕ್ವಾರಂಟೈನ್ ಮುಹಿದ ಬಳಿಕ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಮೇ.4ರಂದು 678 ಹೊಸ ಕೊರೋನಾ ವೈರಸ್ ಪ್ರಕರಣಗಳು ದೃಢವಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12,974ಕ್ಕೆ ಏರಿಕೆಯಾಗಿದೆ. ಇದಲ್ಲಿ 2115 ಮಂದಿ ಗುಣಮುಖರಾಗಿದ್ದರೆ, 548 ಮಂದಿ ಸಾವನ್ನಪ್ಪಿದ್ದಾರೆ.