ತಬ್ಲೀಘಿ ಅವಾಂತರ: 25 ಮಂದಿ BSF ಯೋಧರಿಗೆ ಕೊರೋನಾ ಸೋಂಕು!
ಗಡಿ ರಕ್ಷಣಾ ಪಡೆ ಯೋಧರಲ್ಲಿ ಕೊರೋನಾ| ಒಟ್ಟು 42 ಯೋಧರಿಗೆ ಕೊರೋನಾ ಸೋಂಕು| ಇವರಲ್ಲಿ 31 ಯೋಧರು ದೆಹಲಿ ಪೊಲೀಸರೊಂದಿಗೆ ನಿಜಾಮುದ್ದೀನ್‌ನಲ್ಲಿರುವ ತಬ್ಲೀಘಿ ಮರ್ಕಜ್ ಹಾಗೂ ಚಾಂದಿನಿ ಮಹಲ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಘಟಕದಲ್ಲಿದ್ದರು
ನವದೆಹಲಿ(ಮೇ.04): ಭಾನುವಾರ ಮತ್ತೆ ಗಡಿ ರಕ್ಷಣಾ ಪಡೆಯ 25 ಮಂದಿ ಯೋಧರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟು 42 ಯೋಧರಿಗೆ ಕೊರೋನಾ ತಗುಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವರಲ್ಲಿ 31 ಯೋಧರು ದೆಹಲಿ ಪೊಲೀಸರೊಂದಿಗೆ ನಿಜಾಮುದ್ದೀನ್‌ನಲ್ಲಿರುವ ತಬ್ಲೀಘಿ ಮರ್ಕಜ್ ಹಾಗೂ ಚಾಂದಿನಿ ಮಹಲ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಘಟಕದಲ್ಲಿದ್ದರೆನ್ನಲಾಗಿದೆ. BSFನ 126ನೇ ಬೆಟಾಲಿಯನ್‌ನ ಸುಮಾರು 58 ಯೋಧರಿಗೆ ನಡೆಸಿದ್ದ ಕೊರೋನಾ ವರದಿಯಲ್ಲಿ ನೆಗೆಟಿವ್ ಎಂಬ ಫಲಿತಾಂಶ ಬಂದಿದೆ.
ಲಾಕ್‌ಡೌನ್ ಉಲ್ಲಂಘಿಸಿದವನಿಗೆ ಸಪ್ನಾ ಹಾಡಿಗೆ ಕುಣಿಯುವ ಶಿಕ್ಷೆ, ವಿಡಿಯೋ ವೈರಲ್!
ಇನ್ನು ದೇಶದ ಅತಿದೊಡ್ಡ ಅರೆಸೇನಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆಯ ದೆಹಲಿಯ ಬೆಟಾಲಿಯನ್ ಒಂದರಲ್ಲಿ ಕೊರೋನಾ ಸೋಂಕು ತಗುಲಿರುವವರ ಸಂಖ್ಯೆ 135ಕ್ಕೇರಿದೆ. ಈ ಮಾಹಿತಿಯನ್ನು ಅಧಿಕಾರಿಗಳು ಶನಿವಾರ ಖಚಿತಪಡಿಸಿದ್ದಾರೆ. ಅಲ್ಲದೇ ಈ ಬೆಳವಣಿಗೆ ಬೆನ್ನಲ್ಲೇ ದೆಹಲಿಯಲ್ಲಿರುವ CRPFನ ಮುಖ್ಯ ಕಚೇರಿಯನ್ನು ಸೀಲ್ ಮಾಡಲಾಗಿದ್ದು, ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ.
ಭಾರತದಲ್ಲಿ ನಲ್ವತ್ತೊಂದು ಸಾವಿರ ಗಡಿ ದಾಟಿದ ಸೋಂಕಿತರು
ಇನ್ನು ಭಾರತದಲ್ಲಿ ಕೊರೋನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದೆ. ಭಾನುವಾರ ಒಂದೇ ದಿನ 2530 ಹೊಸ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 41779ಕ್ಕೆ ತಲುಪಿದೆ. ಇದೇ ವೇಳೆ ಭಾನುವಾರ 98 ಜನ ಸಾವನ್ನಪ್ಪಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 1391ಕ್ಕೆ ತಲುಪಿದೆ. ಇದು ಕೂಡಾ ಗರಿಷ್ಠ ಸಾವಿನ ದಾಖಲೆಯಾಗಿದೆ. ಇನ್ನು ಒಟ್ಟು ಸೋಂಕಿತರ ಪೈಕಿ ಈವರೆಗೂ 11,204 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಸೋಂಕಿನಿಂದ ಬಳಲುತ್ತಿರುವ 29 ಸಾವಿರಕ್ಕೂ ಹೆಚ್ಚು ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ