ವಿಮಾನ ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಹಕ್ಕಿಗಳು ಡಿಕ್ಕಿ ಹೊಡೆದಾಗ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು 'ಚಿಕನ್ ಗನ್' ಪರೀಕ್ಷೆ ನಡೆಸಲಾಗುತ್ತದೆ.

ನವದೆಹಲಿ: ವಿಮಾನ ಟೇಕ್‌ ಆಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಹಕ್ಕಿ ಡಿಕ್ಕಿ ಹೊಡೆಯುವ ಸಾಧ್ಯತೆಗಳಿರುತ್ತವೆ. ನೂರಾರು ಜನರನ್ನ ಹೊತ್ತಯ್ಯುಬಲ್ಲ ಸಾಮರ್ಥ್ಯ ಹೊಂದಿರುವ ವಿಮಾನ ಒಂದು ಚಿಕ್ಕ ಹಕ್ಕಿ ಏನು ಮಾಡಲು ಸಾಧ್ಯ ಎಂಬ ಪ್ರಶ್ನೆ ಹಲವರಲ್ಲಿ ಮೂಡಿರುತ್ತದೆ. ವಿಮಾನ ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಗಂಟೆಗೆ 350 ರಿಂದ 500 ಕಿಮೀ ವೇಗದಲ್ಲಿರುತ್ತದೆ. ಈ ವೇಳೆ ಪುಟ್ಟ ಹಕ್ಕಿ ಡಿಕ್ಕಿಯಾದ್ರೂ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಕ್ಷಿಗಳು ಡಿಕ್ಕಿ ಹೊಡೆದಾಗ ವಿಮಾನದ ವಿಂಡ್ ಷೀಲ್ಡ್ ಒಡೆಯುವ ಸಾಧ್ಯತೆ ಇರುತ್ತದೆ. ಮುಂಭಾಗದ ಗಾಜು ಒಡೆದು ಪೈಲಟ್‌ಗಳು ಗಾಯಗೊಂಡಿರುವ ಉದಾಹರಣೆಗಳಿವೆ.

ಇನ್ನು ಹಕ್ಕಿಗಳು ಇಂಜಿನ್ ಪ್ರವೇಶಿಸಿದ್ರೆ ಅಥವಾ ಪ್ಲೇಟ್‌ಗೆ ಡಿಕ್ಕಿ ಹೊಡೆದರ ವಿಮಾನ ಪತನವಾಗುವ ಸಾಧ್ಯತೆಗಳಿರುತ್ತವೆ. ಹಕ್ಕಿ ಡಿಕ್ಕಿಯಾಗಿ ವಿಮಾನದ ಇಂಜಿನ್ ನಿಷ್ಕ್ರಿಯಗೊಂಡು ಬೆಂಕಿ ಹತ್ತಿಕೊಳ್ಳಬಹುದು. ಇದರಿಂದ ವಿಮಾನ ಪತನವಾಗಬಹುದು. ಈ ಹಿನ್ನೆಲೆ ಪ್ರಪಂಚಾದ್ಯಂತ ವಾಯುಯಾನ ಸಂಸ್ಥೆಗಳು ವಿಮಾನಗಳು ಟೇಕಾಫ‌ ಆಗುವ ಮೊದಲು 'ಚಿಕನ್ ಗನ್' ಎಂಬ ಪರೀಕ್ಷೆಯನ್ನು ಮಾಡುತ್ತವೆ. ಅಂದ್ರೆ ವಿಮಾನ ಹಾರುವ ಮೊದಲು ಎಂಜಿನ್‌ನೊಳಗೆ ಜೀವಂತ ಕೋಳಿಯನ್ನು ಎಸೆಯಲಾಗುತ್ತದೆ. ಯಾಕೆ ಈ ರೀತಿಯ ಟೆಸ್ಟ್ ಮಾಡಲಾಗುತ್ತೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಏನಿದು ಚಿಕನ್ ಗನ್ ಪರೀಕ್ಷೆ?

ಸರಳಭಾಷೆಯಲ್ಲಿ ಹೇಳುವದಾದ್ರೆ ಇದೊಂದು ವಿಮಾನ ಇಂಜಿನ್ ಪರೀಕ್ಷೆಯಾಗಿದೆ. ವಿಮಾನ ಇಂಜಿನ್ ಸಾಮರ್ಥ್ಯವನ್ನು ಪರೀಕ್ಷೆ ಮಾಡಲು ಜೀವಂತ ಕೋಳಿಯನ್ನು ಬಳಸಿಕೊಳ್ಳಲಾಗುತ್ತದೆ. ಪಕ್ಷಿಗಳು ವಿಮಾಕ್ಕೆ ಡಿಕ್ಕಿ ಹೊಡೆಯುವುದರಿಂದ ಉಂಟಾಗುವ ಪರಿಣಾಮವನ್ನು ತಿಳಿಯಲು ಎಂಜಿನಿಯರ್‌ಗಳು ಚಿಕನ್ ಗನ್ ಎಂಬ ವಿಶೇಷ ಯಂತ್ರವನ್ನು ಬಳಸುತ್ತಾರೆ. ಇದು ದೊಡ್ಡ ಸಂಕುಚಿತ ಗಾಳಿ ಫಿರಂಗಿಯಾಗಿದ್ದು, ವಿಮಾನದ ವಿಂಡ್‌ಶೀಲ್ಡ್, ರೆಕ್ಕೆ ಮತ್ತು ಎಂಜಿನ್ ಮೇಲೆ ಕೋಳಿಯನ್ನು ಹಾರಿಸಲಾಗುತ್ತದೆ. ಕೋಳಿ ವೇಗವು ನಿಜವಾದ ಹಕ್ಕಿ ಅದನ್ನು ಡಿಕ್ಕಿ ಹೊಡೆಯುವ ವೇಗದಷ್ಟೇ ಇರುತ್ತದೆ.

ಈ ಪರೀಕ್ಷೆಯನ್ನು ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ವಿಮಾನದ ಗಾಜು ಮತ್ತು ಎಂಜಿನ್ ಸರಿಯಾದ ಸ್ಥಿತಿಯಲ್ಲಿದೆಯೇ ಎಂದು ತಿಳಿದುಕೊಳ್ಳಲು ಪ್ರಯೋಗಾಲಯದಲ್ಲಿ ಚಿಕನ್ ಗನ್ ಪರೀಕ್ಷೆ ನಡೆಸಲಾಗುತ್ತದೆ. ಪ್ರಯೋಗಾಲಯದಲ್ಲಿ ಎಂಜಿನಿಯರ್‌ಗಳು ಹೈ-ಸ್ಪೀಡ್ ಕ್ಯಾಮೆರಾಗಳೊಂದಿಗೆ ಎಲ್ಲಾ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಾರೆ. ನಂತರ ಹ್ಕಿ ಡಿಕ್ಕಿಯಿಂದಾದ ಹಾನಿಯನ್ನು ವಿಶ್ಲೇಷಿಸುತ್ತಾರೆ.

ಚಿಕನ್ ಗನ್ ಪರೀಕ್ಷೆ ಅಥವಾ ಬರ್ಡ್ ಸ್ಟ್ರೈಕ್ ಟೆಸ್ಟ್‌ನ್ನು ಜೀವಂತ ಕೋಳಿಯಿಂದ ಮಾಡಲಾಗುತ್ತದೆ. ಏಕೆಂದರೆ ಕೋಳಿಯ ತೂಕ, ಗಾತ್ರ ಮತ್ತು ಅಂಗಾಂಶವು ಆಕಾಶದಲ್ಲಿ ಹಾರುವ ಹಕ್ಕಿಯಂತೆಯೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ವಿಧಾನವನ್ನು ಎಲ್ಲಾ ಪ್ರಮುಖ ವಿಮಾನ ತಯಾರಿಕಾ ಸಂಸ್ಥೆಗಳು ಅಳವಡಿಸಿಕೊಳ್ಳುತ್ತಿವೆ. ಈ ವಿಧಾನದಲ್ಲಿ ಪಾಸ್ ಆದ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗುತ್ತದೆ.

ಹೇಗಿರುತ್ತೆ ಬರ್ಡ್ ಸ್ಟ್ರೈಕ್ ಟೆಸ್ಟ್?

ಟೇಕ್‌ ಆಫ್‌ ಮುನ್ನ ವಿಮಾನದ ಭಾಗಗಳಾದ ಎಂಜಿನ್, ಕಾಕ್‌ಪಿಟ್ ವಿಂಡ್‌ಶೀಲ್ಡ್ ಮತ್ತು ರೆಕ್ಕೆಗಳನ್ನು ಬಲವಾದ ಫ್ರೇಮ್‌ನಲ್ಲಿರಿಸಲಾಗುತ್ತದೆ. ನಂತರ ಈ ಎಲ್ಲಾ ವಿಮಾನ ಭಾಗಗಳ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರಯೋಗಾಲಯದಲ್ಲಿ ಇವೆಲ್ಲಗಳನ್ನು ವಿಮಾನ ಹಾರುವ ವೇಗದಲ್ಲಿ ಚಲಿಸುವಂತೆಯೇ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ನಂತರ ಎಂಜಿನ್‌ಗೆ ಏನನ್ನು ಎಸೆಯಬೇಕೆಂದು ನಿರ್ಧರಿಸಲಾಗುತ್ತದೆ. ಸತ್ತ ಕೋಳಿ ಅಥವಾ ನಕಲಿ ಹಕ್ಕಿ ಅಥವಾ ಜೆಲಾಟಿನ್ ಚೆಂಡು ಹೀಗೆ ಆಯ್ಕೆಗಳಿರುತ್ತವೆ. ಸಾಮಾನ್ಯವಾಗಿ ಪರೀಕ್ಷೆಯನ್ನು ಜೀವಂತ ಕೋಳಿಯನ್ನು ಎಸೆಯುವ ಮೂಲಕ ಮಾಡಲಾಗುತ್ತದೆ. ವಿಮಾನ ಹಾರುವ ವೇಗದಲ್ಲಿಯೇ ಜೀವಂತ ಕೋಳಿ ಎಸೆಯಲಾಗುತ್ತದೆ. ವಿಮಾನದ ಪ್ರಮುಖ ಭಾಗಗಳ ಮೇಲೆ ಕೋಳಿ ಎಸೆದಾಗ ಏನಾಯ್ತು ಎಂಬುದನ್ನು ರೆಕಾರ್ಡ್ ಮಾಡಲಾಗುತ್ತದೆ. ನಂತರ ವಿಡಿಯೋದಲ್ಲಿ ಪ್ರತಿಯೊಂದು ಕ್ಷಣವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.

ಈ ವಿಡಿಯೋ ಕೋಳಿ ಎಸೆತದಿಂದ ಎಷ್ಟು ಹಾನಿ ಸಂಭವಿಸಿದೆ ಮತ್ತು ಎಲ್ಲಿ ಎಂಬುದನ್ನು ತೋರಿಸುತ್ತದೆ. ನಂತರ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು ಎಂಜಿನ್ ಬ್ಲೇಡ್ ಮುರಿದಿದೆಯೇ, ವಿಂಡ್‌ಶೀಲ್ಡ್ ಬಿರುಕು ಬಿಟ್ಟಿದೆಯೇ, ವಿಮಾನದ ರೆಕ್ಕೆಗೆ ಹಾನಿಯಾಗಿದೆಯೇ ಎಂದು ಪರಿಶೀಲಿಸುತ್ತಾರೆ. ಯಾವುದೇ ಗಂಭೀರ ಹಾನಿಯಾಗದಿದ್ದರೆ, ವಿಮಾನವು ಟೇಕಾಫ್ ಆಗಬಹುದು.