Asianet Suvarna News Asianet Suvarna News

ಗೌಪ್ಯ ಮಾಹಿತಿ ಕಳಿಸಲು WhatsApp, Telegram ಬಳಕೆ ಬೇಡ: ಕೇಂದ್ರ ಸರ್ಕಾರ

ಸರ್ಕಾರದ ಗೌಪ್ಯ ಮಾಹಿತಿಗಳು ಸೋರಿಕೆಯಾಗುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಸಂವಹನ ಮಾರ್ಗಸೂಚಿಗಳ ಉಲ್ಲಂಘನೆ ಹಾಗೂ ವರ್ಗೀಕೃತ ಮಾಹಿತಿಯ ಸೋರಿಕೆಯನ್ನು ತಡೆಗಟ್ಟಲು ಪರಿಷ್ಕೃತ ಸಂವಹನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Do Not Share Sensitive Information with Whatsapp Telegram Government Issued Advisory to Ministries gvd
Author
Bangalore, First Published Jan 22, 2022, 2:30 AM IST

ನವದೆಹಲಿ (ಜ.22): ಸರ್ಕಾರದ ಗೌಪ್ಯ ಮಾಹಿತಿಗಳು (Sensitive Information) ಸೋರಿಕೆಯಾಗುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಸಂವಹನ ಮಾರ್ಗಸೂಚಿಗಳ ಉಲ್ಲಂಘನೆ ಹಾಗೂ ವರ್ಗೀಕೃತ ಮಾಹಿತಿಯ ಸೋರಿಕೆಯನ್ನು ತಡೆಗಟ್ಟಲು ಪರಿಷ್ಕೃತ ಸಂವಹನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಅದರನ್ವಯ ಗೌಪ್ಯ ಮಾಹಿತಿಯ ರವಾನೆಗೆ ವಾಟ್ಸಾಪ್‌ (WhatsApp), ಟೆಲಿಗ್ರಾಂ (Telegram) ಮೊದಲಾದ ಸಾಮಾಜಿಕ ಮಾಧ್ಯಮಗಳನ್ನು (Social Media) ಬಳಸದಂತೆ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಸಾಮಾಜಿಕ ಮಾಧ್ಯಮಗಳು ವಿದೇಶಿ ಖಾಸಗಿ ಕಂಪನಿಗಳ ನಿಯಂತ್ರಣದಲ್ಲಿದ್ದು, ಗೌಪ್ಯ ಮಾಹಿತಿಗಳನ್ನು ದೇಶ ವಿರೋಧಿ ಶಕ್ತಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯಿದ್ದ ಕಾರಣ ಸರ್ಕಾರ ಇಂತಹ ಮಾಧ್ಯಮ ಬಳಕೆಯನ್ನು ನಿರ್ಬಂಧಿಸಲಾಗಿದೆ.

ಅಲ್ಲದೇ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿರುವರು ಕೂಡಾ ಸಂವಹನಕ್ಕಾಗಿ ಇ-ಆಫೀಸ್‌ ಅಪ್ಲಿಕೇಶನ್‌ ಬಳಸಬೇಕು ಹಾಗೂ ಮನೆಯಲ್ಲಿರು ಕಂಪ್ಯೂಟರ್‌ ಸಿಸ್ಟಮ್‌ಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ ಖಾಸಗಿ ನೆಟ್‌ವರ್ಕ್ ಕೇಂದ್ರದ ಮುಖಾಂತರ ಆಫೀಸ್‌ ನೆಟ್‌ವಕ್‌ ಜೊತೆಗೆ ಸಂಪರ್ಕ ಮಾಡಿಕೊಳ್ಳಬೇಕು ಎಂದು ತಿಳಿಸಿದೆ. 

ಸರ್ಕಾರದ ಸಚಿವಾಲಯ ಹಾಗೂ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತಾಧಿಕಾರಿಗಳು ವರ್ಗೀಕೃತ ಮಾಹಿತಿ ಆಥವಾ ದೇಶದ ಭದ್ರತೆ ಕುರಿತಾದ ವಿಷಯಗಳನ್ನು ಚರ್ಚಿಸುವ ಸಭೆಗಳಲ್ಲಿ ಸ್ಮಾರ್ಟ್‌ ವಾಚ್‌ ಹಾಗೂ ಸ್ಮಾರ್ಟ್‌ಫೋನು, ಅಮೆಜಾನ್‌ನ ಅಲೆಕ್ಸಾ, ಆ್ಯಪಲ್‌ನ ಹೋಂಪೊಡ್‌ ಮೊದಲಾದ ಸಾಧನಗಳನ್ನು ಬಳಸದಂತೆ ನಿರ್ಬಂಧಿಸಿದೆ. ಅಲ್ಲದೇ ಕೋವಿಡ್‌ (Covid19) ಕಾರಣದಿಂದಾಗಿ ವರ್ಚುವಲ್‌ ಮೀಟಿಂಗ್‌ ನಡೆಸಲು ಗೂಗಲ್‌ ಮೀಟ್‌, ಝೂಮ್‌ ಬಳಸದೇ ಅಡ್ವಾನ್ಸ್‌ ಕಂಪ್ಯೂಟಿಂಗ್‌ ಇಲಾಖೆ ರಚಿಸಿದ ವಿಡಿಯೋ ಕಾನ್ಫರೆನ್ಸ್‌ನ್ನು ಬಳಸಲು ತಿಳಿಸಿದೆ.

Whatsapp ಮೆಸೇಜ್‌ನಲ್ಲಿ ಇಸ್ಲಾಂಗೆ ಅವಮಾನ, ಮಹಿಳೆಗೆ ಸಾವಿನ ಶಿಕ್ಷೆ!

ಬಲವಂತವಾಗಿ ಲಸಿಕೆ ನೀಡುವಂತಿಲ್ಲ: ಯಾವುದೇ ವ್ಯಕ್ತಿಯ ಸಮ್ಮತಿ ಪಡೆಯದೇ ಬಲವಂತವಾಗಿ ಕೋವಿಡ್‌ ಲಸಿಕೆ (Covid Vaccine) ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲಸಿಕೆ ಪಡೆಯಲು ನಿರಾಕರಿಸುವವರಿಗೆ ಬಲವಂತವಾಗಿ ಲಸಿಕೆ ನೀಡುವುದು ಹಾಗೂ ಸರ್ಕಾರ ಸೌಲಭ್ಯ ನಿರಾಕರಿಸುವಂತಹ ಘಟನೆಗಳು ದೇಶಾದ್ಯಂತ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರದ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.

‘ಕೋವಿಡ್‌ ಲಸಿಕಾಕರಣ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಲ್ಲಿ ವ್ಯಕ್ತಿಯ ಸಮ್ಮತಿ ಪಡೆಯದೆ ಬಲವಂತವಾಗಿ ಲಸಿಕೆ ನೀಡುವ ಕುರಿತು ಯಾವುದೇ ಪ್ರಸ್ತಾಪ ಇಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ. ‘ಅಂಗವೈಕಲ್ಯ ಹೊಂದಿದವರಿಗೆ ಆದ್ಯತೆ ಮೇರೆಗೆ ಹಾಗೂ ಮನೆ ಬಾಗಿಲಿಗೆ ಕೊರೋನಾ ಲಸಿಕೆ ನೀಡಬೇಕು’ ಎಂದು ಎವಾರಾ ಫೌಂಡೇಷನ್‌ ಎಂಬ ಎನ್‌ಜಿಒ ಸುಪ್ರೀಂಕೋರ್ಟ್‌ನಲ್ಲಿ (Supreme Court) ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ವೇಳೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರಮಾಣಪತ್ರ ಸಲ್ಲಿಕೆ ಮಾಡಿದೆ.

Targeting Hindu Women : ಟೆಲಿಗ್ರಾಮ್ ಚಾನೆಲ್‌ ಬಂದ್‌

‘ಅಂಗವಿಕಲರಿಗೆ ಲಸಿಕಾಕರಣ ಪ್ರಮಾಣಪತ್ರ ಹಾಜರುಪಡಿಸುವುದರಿಂದ ವಿನಾಯಿತಿ ನೀಡಬೇಕು’ ಎಂಬ ವಿಷಯಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ‘ಯಾವುದೇ ಉದ್ದೇಶಕ್ಕಾಗಲಿ ಜತೆಯಲ್ಲಿ ಲಸಿಕೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಒಯ್ಯಬೇಕು ಎಂಬ ಯಾವುದೇ ಸೂಚನೆಯನ್ನು ನೀಡಿಲ್ಲ’ ಎಂದು ತಿಳಿಸಿದೆ.

Follow Us:
Download App:
  • android
  • ios