ನವದೆಹಲಿ(ಏ.09): ಏಪ್ರಿಲ್‌ 12ರ ಭಾನುವಾರ ಸಂಜೆ 5 ಗಂಟೆಗೆ ದೇಶದ ಪ್ರಜೆಗಳು ತಮ್ಮ ಮನೆಯ ಬಾಲ್ಕನಿಗೆ ಬಂದು 5 ನಿಮಿಷಗಳ ಕಾಲ ಎದ್ದು ನಿಂತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಪ್ಪಾಳೆ ತಟ್ಟಿಗೌರವ ಸಮರ್ಪಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ, ಇದು ವಿವಾದಕ್ಕೆ ಎಡೆಮಾಡುವ ಕಿಡಿಗೇಡಿತನವೆಂದು ತೋರುತ್ತಿದೆ ಎಂದು ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ‘ನಿಜಕ್ಕೂ ನನಗೆ ಗೌರವ ಸಲ್ಲಿಸಬೇಕು ಎಂದಿದ್ದರೆ ಕೊರೋನಾ ವೈರಸ್‌ ತೊಲಗುವವರೆಗಾದರೂ ಬಡ ಕುಟುಂಬಗಳ ಜವಾಬ್ದಾರಿ ತೆಗೆದುಕೊಳ್ಳಿ. ಅದು ನನಗೆ ನೀವು ಸಲ್ಲಿಸುವ ದೊಡ್ಡ ಗೌರವ’ ಎಂದು ಮನವಿ ಮಾಡಿಕೊಂಡಿದ್ದಾರೆ.

"